ಬೆಂಗಳೂರು: ರೋಹಿಣಿ ವಿಚಾರಕ್ಕೆ ಬಗ್ಗೆ ಮಾತನಾಡೋದಕ್ಕೆ ಡಿ ರೂಪಾ (Roopa IPS) ಯಾರು? ಅವರು ಹೊಟ್ಟೆಕಿಚ್ಚಿಗೆ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ (Rohini Sindhuri) ಪತಿ ಸುಧೀರ್ ರೆಡ್ಡಿ (Sudhir Reddy) ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. ರೂಪಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಫಾಲೋವರ್ಸ್ ಇದ್ದಾರೆ. ಅವರು ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ನಾನು ಕನ್ನಡಿಗ ನಾನು ಭಾರತಿಯ. ಆಂಧ್ರಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮದು ಸುಶಿಕ್ಷಿತ ಕುಟುಂಬವಾಗಿದ್ದು, ನಮ್ಮ ಕುಟುಂಬದ ಬಗ್ಗೆ ಎಲ್ಲ ಮಾತನಾಡುತ್ತಿದ್ದಾರೆ ಎಂದು ರೂಪಾ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ರೋಹಿಣಿ ಸಿಂಧೂರಿಯ ಫೋಟೋಗಳೆಲ್ಲವೂ ಸಹಜ ಫೋಟೋಗಳಾಗಿದೆ. ನಾನು ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದೆ. ತಂದೆ ತಾಯಿ ಇಲ್ಲೇ ಇರುವ ಕಾರಣ ನಾನು ಉದ್ಯೋಗ ತೊರೆದು ಬಂದಿದ್ದೇನೆ. ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಫೋಟೋಸ್ಗಳನ್ನು ತಗೆದುಕೊಂಡಿರುವ ಬಗ್ಗೆ ಅನುಮಾನ ಇದೆ. ಈ ಬಗ್ಗೆ ದೂರು ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: 9 ಪ್ರಶ್ನೆಗಳಿಗೆ ಉತ್ತರ ಕೊಡಿ: ರೂಪಾಗೆ ರೋಹಿಣಿ ಅಭಿಮಾನಿಗಳ ಪ್ರಶ್ನೆ
Advertisement
Advertisement
ಈ ವೇಳೆ ಡಿ.ಕೆ ರವಿ ಬಗ್ಗೆ ನಾನು ಮಾತನಾಡಲ್ಲ. ಮೃತಪಟ್ಟವರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. ನನಗೂ ಸಂಸ್ಕಾರ ಗೊತ್ತಿದೆ. ನಮ್ಮ ತಂದೆಯವರು 50 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲಿನಿಂದಲೂ ನಮ್ಮ ಆಸ್ತಿಗಳು ಇಲ್ಲಿವೆ. ರೋಹಿಣಿ ಅವರನ್ನು ಮದುವೆಯಾಗುವ ಮೊದಲೇ ನಮ್ಮ ಕುಟುಂಬ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುಕೊಂಡು ಬಂದಿತ್ತು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k