ಬೆಂಗಳೂರು: ಐಪಿಎಸ್-ಐಎಎಸ್ (IPS-IAS) ಮಹಿಳಾ ಅಧಿಕಾರಿಗಳ ಜಗಳ ಸದ್ಯಕ್ಕೆ ಸ್ಟಾಪ್ ಆದಂತೆ ಕಾಣುತ್ತಿದೆ. ಆದರೆ ಡಿ.ರೂಪಾ (D.Roopa) ವಿರುದ್ಧ ಕೊಟ್ಟ ಕಂಪ್ಲೆಂಟ್‍ಗೆ ಎಫ್‍ಐಆರ್ ದಾಖಲಿಸದ ಹಿನ್ನೆಲೆ ಕೋರ್ಟ್ ಮುಖಾಂತರ ಎಫ್‍ಐಆರ್ (FIR) ದಾಖಲಿಸಲು ರೋಹಿಣಿ ಕುಟುಂಬ ವಕೀಲರ ಜೊತೆ ಚರ್ಚಿಸಿದೆ.
ಐಪಿಎಸ್ ಅಧಿಕಾರಿ ರೂಪಾ ವಿರುದ್ದ ರೋಹಿಣಿ ಸಿಂಧೂರಿ (Rohini Sindhuri) ಪತಿ ನೀಡಿದ್ದ ದೂರನ್ನ ಪೊಲೀಸರು ಪೆಟಿಷನ್ ಮಾಡಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಸಲಹೆ ಪಡೆದು ಎಫ್‍ಐಆರ್ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ನಡುವೆ ಕಂಪ್ಲೆಂಟ್ ಕೊಟ್ಟು ಎರಡು ದಿನಗಳು ಕಳೆದು ಹೋಗಿದ್ದು, ಪೊಲೀಸರು ಯಾವುದೇ ಆಕ್ಷನ್ ತಗೊಳ್ತಿಲ್ಲ ಅಂತಾ ರೋಹಿಣಿ ಕುಟುಂಬ ಕೋರ್ಟ್ (Court) ಮೊರೆ ಹೋಗುವ ಸಾಧ್ಯತೆಯಿದೆ ಅನ್ನೋ ಮಾಹಿತಿಗಳು ಲಭ್ಯವಾಗಿವೆ.
Advertisement
Advertisement
ಹೌದು. ರೋಹಿಣಿ ಸಿಂಧೂರಿಯ ಮೊಬೈಲ್ ಹ್ಯಾಕ್ (Mobile Hack) ಮಾಡಿ ಫೋಟೋಗಳನ್ನ ಪಡೆದು ವೈರಲ್ ಮಾಡಿ ಮಾನ ಕಳೆದಿದ್ದಾರೆ ಅಂತಾ ರೋಹಿಣಿ ಪತಿ ದೂರು ನೀಡಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಇದುವರೆಗೂ ಯಾವುದೇ ಆಕ್ಷನ್ ಆಗಿಲ್ಲ ಅನ್ನೋ ಅಸಮಾಧಾನದಲ್ಲಿದೆ ರೋಹಿಣಿ ಕುಟುಂಬ. ಒಂದು ವೇಳೆ ಇವತ್ತು ಪೊಲೀಸರು ಎಫ್‍ಐಆರ್ ದಾಖಲಿಸದೆ ಇದರೆ ಕೋರ್ಟ್ ಮೊರೆ ಹೋಗಿ ಎಫ್‍ಐಆರ್ ದಾಖಲಿಸಲು ರೋಹಿಣಿ ಕುಟುಂಬ ವಕೀಲರನ್ನ ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಕಳ್ಳತನವಾದ ಬಸ್ ತೆಲಂಗಾಣದಲ್ಲಿ ಪತ್ತೆ
Advertisement
Advertisement
ಸದ್ಯ ಬಗಲಗುಂಟೆ ಪೊಲೀಸ್ರ ಅಂಗಳದಲ್ಲಿ ಕಂಪ್ಲೆಂಟ್ ಚೆಂಡಿದ್ದು, ಹಿರಿಯ ಅಧಿಕಾರಿಗಳು ಏನು ಇನ್ಸ್ಟ್ರಕ್ಷನ್ ಕೊಡ್ತಾರೆ ಅಂತಾ ಕಾಯ್ತಿದ್ದಾರೆ. ಇದನ್ನೂ ಓದಿ: 1 ರೂ. ಚಿಲ್ಲರೆ ನೀಡದ ಕಂಡಕ್ಟರ್- ನ್ಯಾಯಾಲಯದ ಮೆಟ್ಟಿಲೇರಿದ ಪ್ರಯಾಣಿಕ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k