ಬೆಂಗಳೂರು: ಪತಿ ಐಎಎಸ್ ಅಧಿಕಾರಿಯಾದರೆ ಪತ್ನಿಯ ಅದೃಷ್ಟವೇ ಬದಲಾಗುತ್ತೆ. ಇದಕ್ಕೆ ತಾಜಾ ಉದಾಹರಣೆ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅಂಡ್ ಫ್ಯಾಮಿಲಿ.
ವಾರ್ತಾ ಇಲಾಖೆಯ ಪ್ರಭಾರ ಇನ್‍ಜಾರ್ಜ್ ಆಗಿರುವ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ‘ಫ್ಯಾಮಿಲಿ ಪ್ಯಾಕೇಜ್’ಗೆ ತಮ್ಮ ಅಧಿಕಾರ ಬಳಸಿ ಗಿಫ್ಟ್ ಕೊಟ್ಟಿದ್ದಾರೆ. ಪಾಂಡೆಯವರ ಪತ್ನಿ ಅನುಜಾ ಮೇಡಂ ಹಾಗೂ ಅವರ ಫ್ಯಾಮಿಲಿ ವಿಧಾನಸೌಧದಲ್ಲಿ ಇತ್ತೀಚಿಗೆ ನಡೆದ ಫಿಲ್ಮಂ ಫೆಸ್ಟಿವಲ್‍ನಲ್ಲಿ ಮಿಂಚಿದ್ದೇ ಮಿಂಚಿದ್ದು. ಕನ್ನಡಿಗರಿಗೆ ಪರಿಚಯವೇ ಇಲ್ಲದ ಪಂಕಜ್ ಪತ್ನಿಯ ಸಹೋದರ ಆಶೀಶ್ ದುಬೆಗೆ ಅಂದು ಕರೀನಾ ಕಪೂರ್ ಕಾರ್ಯಕ್ರಮದ ಆಂಕರಿಂಗ್‍ನ ಚಾನ್ಸ್ ಸಿಕ್ಕಿತ್ತು.
Advertisement
Advertisement
ಅಷ್ಟೇ ಅಲ್ಲದೆ ಅಂದು ಮಹಿಳಾ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದ ಪಂಕಜ್ ಪತ್ನಿ ಅನುಜಾ, ಫಿಲ್ಮಂ ಫೆಸ್ಟಿವಲ್‍ಗೆ ಬಂದಿದ್ದ ಬಾಲಿವುಡ್ ಬೆಡಗಿ ಕರೀನಾರನ್ನು ಗ್ಯಾಪ್‍ನಲ್ಲಿ ಮೀಟ್ ಆಗಿ ತಮ್ಮ ಕಂಪನಿ ಲಾಪ್ಟಿ ಸ್ಪೆಕ್ಟ್ರಮ್‍ಗೆ ಪ್ರಮೋಶನ್ ಟಾಕ್ ಕೂಡ ಮಾಡಿಸಿದ್ದರು. ಜೊತೆಗೆ ಬ್ಯುಸಿ ಬಾಲಿವುಡ್ ಬೆಡಗಿ ಜೊತೆ ಸಕುಟುಂಬ ಸಮೇತರಾಗಿ ಲಂಚ್ ಕೂಡ ಮಾಡಿದ್ದರು.