ದಿಸ್ಪುರ್: ಸಾಮಾನ್ಯವಾಗಿ ಐಎಎಸ್ ಅಧಿಕಾರಿ ಎಂದರೆ ಒಂದು ಗತ್ತು, ಗೈರತ್ತು ಇರುತ್ತದೆ. ಸರ್ಕಾರದ ಯೋಜನೆಗಳನ್ನು ಜಾರಿ ಮಾಡಲು ಅಗತ್ಯ ಸೂಚನೆಗಳನ್ನು ನೀಡುತ್ತಾರೆ. ಬಹುತೇಕ ಅವರು ಜನರ ನಡುವೆ ಬೆರೆಯುವುದೇ ಕಡಿಮೆ.
Advertisement
ಇತ್ತೀಚೆಗೆ ದೆಹಲಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಮನೆಯ ನಾಯಿಗೆ ವಾಕ್ ಮಾಡಿಸುವ ಸಲುವಾಗಿ ಸ್ಟೇಡಿಯಂ ಮುಚ್ಚಿಸಿದ್ದರು ಹಾಗೂ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಅಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿರುವ ವರಂಗಲ್ ಮೂಲದ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಇದಕ್ಕೆ ಭಿನ್ನ. ಇವರು ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ಖುದ್ದಾಗಿ ನೆರವಾಗುತ್ತಿದ್ದಾರೆ. ಇದನ್ನೂ ಓದಿ: ಬಹುತೇಕ ಬಿಜೆಪಿಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಅಧಿಕಾರ
Advertisement
Keerthi Jalli IAS, Deputy Commissioner Cachar.???? pic.twitter.com/n5CsOoAFMu
— Awanish Sharan (@AwanishSharan) May 26, 2022
Advertisement
ಕೀರ್ತಿ ಜಲ್ಲಿ ಜನರಿಗೆ ನೆರವಾಗುವ ಭರದಲ್ಲಿ ತಮ್ಮ ವೇಷಧಾರಣೆಯನ್ನೂ ಮರೆತಿದ್ದಾರೆ ಎನಿಸುತ್ತೆ. ತುಂಬಾ ಸಾದಾಸೀದಾ ಸೀರೆ ಧರಿಸಿ, ಯಾವುದೇ ಮೇಕಪ್ ಕೂಡ ಇಲ್ಲದೇ, ಕೆಸರು ನೀರು ಎನ್ನದೇ ಸಂತ್ರಸ್ತರ ಕಷ್ಟ ಆಲಿಸಿ, ಅಗತ್ಯವಾದ ನೆರವನ್ನು ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಇವರ ಫೋಟೋಗಳೀಗ ಸಾಮಾಜಿಕ ಮಾಧ್ಯಮಗಳಲ್ಲಿ ಫುಲ್ ವೈರಲ್ ಆಗುತ್ತಿವೆ. ಇದನ್ನೂ ಓದಿ: ಹೊರಗುತ್ತಿಗೆ ನೀಡುವ ನಿರ್ಧಾರ ಖಂಡಿಸಿ ಇಂದಿನಿಂದ ಮಹಾರಾಷ್ಟ್ರ ನರ್ಸ್‍ಗಳಿಂದ ಮುಷ್ಕರ
Advertisement
2013ರ ಬ್ಯಾಚ್‌ನ ಅಧಿಕಾರಿಯಾದ ಇವರು, ಅಸ್ಸಾಂ ಕಾರ್ಮಿಕ ಮಹಿಳೆಯರನ್ನು ಹಾಗೂ ಮಕ್ಕಳನ್ನು ಕಾಡುವ ರಕ್ತಹೀನತೆ, ಪೌಷ್ಠಿಕಾಂಶ ಕೊರತೆ ಸಮಸ್ಯೆ ನೀಗಿಸಲು ಸ್ಥಳೀಯವಾಗಿ ಸಿಗುವ ನೆಲ್ಲಿಕಾಯಿಯನ್ನು ನಿತ್ಯದ ಆಹಾರದಲ್ಲಿ ಬಳಸುವಂತೆ ಮಾಡಿ, ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಿಸಿದ್ದರು. 2020ರಲ್ಲಿ ಕೋವಿಡ್ ಕಾಲದಲ್ಲಿ ಮದುವೆಯಾದ ಇವರು, ಮರುದಿನವೇ ಕರ್ತವ್ಯಕ್ಕೆ ಮರಳಿ, ಜನರಿಂದ ಭೇಷ್ ಎನಿಸಿಕೊಂಡರು.