ಲಕ್ನೋ: ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ರಸ್ತೆಬದಿಯ ಸ್ಟಾಲ್‍ನಲ್ಲಿ ತರಕಾರಿ ಮಾರುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಫೋಟೋದಲ್ಲಿರುವ ಐಎಎಸ್ ಅಧಿಕಾರಿಯನ್ನು ಅಖಿಲೇಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಪ್ರಸ್ತುತ ಅವರು ಉತ್ತರ ಪ್ರದೇಶದ ಸಾರಿಗೆ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇದೀಗ ಫೇಸ್‍ಬುಕ್‍ನಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಅಖಿಲೇಶ್ ಮಿಶ್ರಾರವರು ತರಕಾರಿ ಅಂಗಡಿ ಕೆಳಗೆ ಗೋಣಿಚೀಲದ ಮೇಲೆ ಕುಳಿತುಕೊಂಡು ತರಕಾರಿ ಮಾರುತ್ತಿದ್ದು, ಗ್ರಾಹಕರುಗಳು ಸಹ ಅಂಗಡಿ ಬಳಿ ಖರೀದಿ ಮಾಡಲು ನಿಂತಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಸರ್ಕಾರವನ್ನು ಮುಜುಗರಕ್ಕಿಡು ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಬೈಕ್, ಡಬಲ್ ಬ್ಯಾರಲ್ ಕೋವಿ ಕದ್ದಿದ್ದ ಆರೋಪಿ ಅಂದರ್
Advertisement
Advertisement
ಈ ಬಗ್ಗೆ ಮಾತನಾಡಿದ ಅಖಿಲೇಶ್ ಮಿಶ್ರಾರವರು, ನಾನು ಕೆಲವು ಅಧಿಕೃತ ಕೆಲಸದ ಮೇಲೆ ಪ್ರಯಾಗರಾಜ್‍ಗೆ ಭೇಟಿ ನೀಡಿದ್ದೆ. ನಂತರ ಅಲ್ಲಿಂದ ಹಿಂತಿರುವಾಗ ತರಕಾರಿ ಖರೀದಿಸಲೆಂದು ಬಂದೆ. ಆಗ ತರಕಾರಿ ಮಾರಾಟಗಾರ ಮತ್ತು ವೃದ್ಧೆಯೊಬ್ಬರು ತಮ್ಮ ಮಗು ಇಲ್ಲಿ ಎಲ್ಲೋ ಹೋಗಿದೆ. ಮಗುವನ್ನು ಹುಡುಕಿ ಬರುವವರೆಗೂ ಸ್ವಲ್ಪ ಅಂಗಡಿಯನ್ನು ನೋಡಿಕೊಳ್ಳುವಂತೆ ಮನವಿ ಮಾಡಿದರು. ಹಾಗಾಗಿ ನಾನು ಅವರ ಅಂಗಡಿಯಲ್ಲಿ ಕುಳಿತುಕೊಂಡಿದ್ದೆ. ಈ ವೇಳೆ ಗ್ರಾಹಕರೊಬ್ಬರು ಬಂದರು. ಆಗ ನನ್ನ ಸ್ನೇಹಿತ ಫೋಟೋ ಕ್ಲಿಕ್ಕಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ
Advertisement