– 500 ಜನರನ್ನು ಪರೀಕ್ಷೆಗೊಳಪಡಿಸಿದ ವೈದ್ಯರು
– ಕೊರೊನಾ ಪರೀಕ್ಷೆಗೂ ವಿಐಪಿ ಸ್ಥಾನ ಇಲ್ಲ ಎಂದ ಮಮತಾ
ಕೋಲ್ಕತಾ: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಐಎಎಸ್ ಅಧಿಕಾರಿ ಪುತ್ರನಿಗೆ ಕೊರೊನಾ ಕಾಣಿಸಿಕೊಂಡಿದ್ದು, ಪರೀಕ್ಷಿಸಿಕೊಳ್ಳದೆ ನಗರದ ಮಾಲ್ ಸೇರಿದಂತೆ ವಿವಿಧೆಡೆ ಸಂಚರಿಸಿದ್ದಾನೆ. ನಂತರ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ಪತ್ತೆಯಾಗಿದ್ದು, ಇದನ್ನು ಅರಿತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ವಿಐಪಿಗಳೆಂದು ಬೇಜವಾಬ್ದಾರಿತನದಿಂದ ವರ್ತಿಸಬೇಡಿ, ರೋಗ ಎಲ್ಲರಿಗೂ ಹರಡುತ್ತದೆ. ಕೊರೊನಾ ಪರಿಶೀಲನೆಗೂ ವಿಐಪಿ ದರ್ಜೆಯ ಸ್ಥಾನ ಪಡೆಯಲು ಸಾಧ್ಯವಿಲ್ಲ. ಯಾವ ದೇಶದಿಂದ ಬಂದರೂ ನಾನು ಸ್ವಾಗತಿಸುತ್ತೇನೆ. ಆದರೆ ರೋಗವನ್ನು ಸ್ವಾಗತಿಸುವುದಿಲ್ಲ. ನೀವು ವಿದೇಶದಿಂದ ಬರುತ್ತೀರಿ, ಯಾವುದೇ ಪರೀಕ್ಷೆಗೆ ಒಳಪಡದೆ ಶಾಪಿಂಗ್ ಮಾಲ್‍ಗಳಿಗೆ ಹೋಗುತ್ತೀರಿ. ಇದರಿಂದಾಗಿ 500 ಜನ ತೊಂದರೆಗೊಳಗಾಗಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹ ಪ್ರಕರಣ ನನ್ನ ಕುಟುಂಬದಲ್ಲೇ ನಡೆದಿದ್ದರೆ ನಾನು ಸಹಿಸಿಕೊಳ್ಳುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
West Bengal Chief Minister Mamata Banerjee: It is wrong to say that a case of #coronavirus has been reported from Kolkata. It is the person who came from United Kingdom. I do not know how he was checked at the international airport. pic.twitter.com/BjJmjTrRyr
— ANI (@ANI) March 18, 2020
Advertisement
ಯುವಕ ಯೂರೋಪ್‍ನಿಂದ ಮರಳಿದ್ದು, ಕೊರೊನಾ ಸೋಂಕು ತಗುಲಿದೆ. ಇದನ್ನು ಪರೀಕ್ಷಿಸಿಕೊಳ್ಳದೆ ಕೋಲ್ಕತ್ತಾಗೆ ಆಗಮಿಸಿ ಶಾಪಿಂಗ್ ಮಾಲ್‍ಗಳಿಗೆ ತೆರಳಿದ್ದಾನೆ. ಅಲ್ಲದೆ ಹಲವು ಜನರನ್ನು ಸಂಪರ್ಕಿಸಿದ್ದಾನೆ. ಇದರಿಂದಾಗಿ 500 ಜನರು ಪರೀಕ್ಷೆಗೆ ಒಳಪಡಬೇಕಾಗಿದೆ. ಗೃಹಬಂಧನದಲ್ಲಿರಬೇಕಿದೆ. ಹೀಗಾಗಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಈ ಯುವಕನ ತಾಯಿ ಐಎಎಸ್ ಅಧಿಕಾರಿಯಾಗಿದ್ದು, ಇವರ ತಂದೆ ವೈದ್ಯರಾಗಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಚೇರಿ ಇರುವ ಕಟ್ಟಡದಲ್ಲೇ ಯುವಕನ ತಾಯಿ ಕೆಲಸ ಮಾಡುತ್ತಿದ್ದಾರೆ. ಯುವಕ ಪರೀಕ್ಷೆಗೆ ಒಳಪಡುವುದಕ್ಕೂ ಮೊದಲು ಸಿಎಂ ಜೊತೆ ಹಲವು ಸಭೆಗಳಲ್ಲಿ ಈ ಐಎಎಸ್ ಅಧಿಕಾರಿ ಭಾಗಿಯಾಗಿದ್ದಾರೆ. ಹೀಗಾಗಿ ಸ್ವತಃ ಮಮತಾ ಬ್ಯಾರ್ಜಿ ಸಹ ಭಯಭೀತರಾಗಿದ್ದಾರೆ.
Advertisement
ಪಶ್ಚಿಮ ಬಂಗಾಳದ ಹೋಮ್ ಸೆಕ್ರೆಟರಿ ಹಾಗೂ ಯುವಕನ ತಾಯಿ ಸೋಮವಾರ ಸಭೆ ನಡೆಸಿದ್ದು, ಅವರ ಕುಟುಂಬವನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತ ವರದಿ ಇನ್ನೂ ಬರಬೇಕಿದೆ.
ಯುವಕ ಇಂಗ್ಲೆಂಡ್‍ನ ಪ್ರೊಮಿನೆಂಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೊರೊನಾ ಹಿನ್ನೆಲೆ ಭಾರತಕ್ಕೆ ಮರಳಿದ್ದಾನೆ. ಆದರೆ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಯುವಕನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಆದರೆ ಸ್ಕ್ರೀನಿಂಗ್ ವೇಳೆ ಇದು ಸ್ಪಷ್ಟವಾಗಿಲ್ಲ. ನಂತರ ತನ್ನ ಡ್ರೈವರ್‍ನೊಂದಿಗೆ ಯುವಕ ಮನೆಗೆ ತೆರಳಿದ್ದು, ಮನೆಯಲ್ಲಿ ಪೋಷಕರನ್ನು ಭೇಟಿ ಮಾಡಿದ್ದಾನೆ. ಬಳಿಕ ಆತನ ಸ್ನೇಹಿತರು ಯುರೋಪ್‍ನಿಂದ ಕರೆ ಮಾಡಿದ್ದು, ಲಂಡನ್‍ನಲ್ಲಿ ಪಾರ್ಟಿ ಮಾಡಿದ ಗೆಳೆಯರ ಪೈಕಿ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಯುವಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಿದ್ದು, ವೈದ್ಯರು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆಗ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ವೇಳೆ ಯುವಕನ ತಾಯಿ ಸಹ ಮಗನ ಜೊತೆಗೆ ಆಸ್ಪತ್ರೆಗೆ ತೆರಳಿ, ಬಳಿಕ ಸಿಎಂ ಕಚೇರಿಗೆ ಕೆಲಸಕ್ಕೆ ತೆರಳಿದ್ದರು ಎಂದು ವರದಿಯಾಗಿದೆ.