ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ – ಕಲಬುರಗಿ ಪಾಲಿಕೆ ಆಯುಕ್ತ ಸ್ನೇಹಲ್ ವಿರುದ್ಧ ದೂರು

Public TV
3 Min Read
snehal lokhande

ಕಲಬುರಗಿ: ಐಎಎಸ್ ಅಧಿಕಾರಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರೂ ಆಗಿರುವ ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ಮದುವೆಯಾಗುವುದಾಗಿ ನಂಬಿಸಿ ಆಕೆಗೆ ವಂಚನೆ ಮಾಡಿರುವುದಾಗಿ ಯುವತಿ ಗಂಭೀರವಾಗಿ ಆರೋಪಿಸಿದ್ದಾಳೆ.

snehal lokhande 2

ಯುವತಿ ದೆಹಲಿ ಮೂಲದವಳಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ ಅವರಿಗೆ ಟ್ವಿಟ್ಟರ್ ಮೂಲಕ ಪತ್ರ ಬರೆದು ಲಗತ್ತಿಸಿದ್ದಾಳೆ. ಆ ಪತ್ರದಲ್ಲಿ 2017ರ ಬ್ಯಾಚ್‍ನ ಐಎಎಸ್ ಅಧಿಕಾರಿ ಲೋಖಂಡೆಯು ತನ್ನ ಜೊತೆಗೆ ಹೋಟೆಲ್‍ಗಳಲ್ಲಿ ಕಾಲ ಕಳೆದ, ಹೊರಗಡೆ ಸುತ್ತಾಡಿದ, ವಾಟ್ಸಾಪ್‍ಗಳಲ್ಲಿ ಚಾಟ್ ಮಾಡಿದ್ದ ಬಗ್ಗೆ ದಿನಾಂಕ, ಸ್ಥಳ ಸಮೇತ ವಿವರಿಸಿದ್ದು, ವಾಟ್ಸಾಪ್ ಚಾಟ್‍ನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.

marriage

ಈ ಸಂಬಂಧ ಸ್ನೇಹಲ್ ಲೋಖಂಡೆ ಅವರು ಯುವತಿ ನನಗೆ ಪರಿಚಯವಷ್ಟೇ, ಆದರೆ ಆಕೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಹೀಗಾಗಿ ಯುವತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ದನ್ನೂ ಓದಿ: ಮದುವೆ ಆಗುವಂತೆ ಯುವತಿಗೆ ಬ್ಲಾಕ್‍ಮೇಲ್- ಠಾಣೆ ಮೆಟ್ಟಿಲೇರಿದ ಪ್ರಕರಣ

ಯುವತಿ ಬರೆದಿರುವ ಪತ್ರದಲ್ಲಿ ಏನಿದೆ:
`ಯುಪಿಎಸ್‍ಸಿ ಪರೀಕ್ಷೆ ಬರೆಯುತ್ತಿದ್ದಾಗ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಸ್ನೇಹಲ್ ಲೋಖಂಡೆ ನನ್ನ ಮೇಲೆ ಆಸಕ್ತಿ ತೋರಿಸಿದರು. ಮೇ 26, 2019ರಂದು ದೆಹಲಿಯಲ್ಲಿ ನನ್ನನ್ನು ಭೇಟಿ ಆಗಿದ್ದ ಸ್ನೇಹಲ್ ಮೂರು ದಿನ ನನ್ನ ಜೊತೆಗೆ ಇದ್ದರಲ್ಲದೇ ನನ್ನ ಮದ್ವೆ ಆಗುವುದಾಗಿ ಮಾತುಕೊಟ್ಟಿದ್ದರು. ನನ್ನ ಜೊತೆಗೆ ಇರುವ ಸಲುವಾಗಿಯೇ ಟ್ರೈನಿಂಗ್‍ಗಾಗಿ ದೆಹಲಿಗೆ ಬಂದಿದ್ದ ಸ್ನೇಹಲ್ ಬಸ್ ಮಿಸ್ ಮಾಡ್ಕೊಂಡು ದೆಹಲಿಯಲ್ಲೇ ನನ್ನ ಒಂದು ದಿನ ಇದ್ದರು. ನನ್ನ ಹುಟ್ಟುಹಬ್ಬ ಆಚರಿಸಲು ನನ್ನ ತಾಯಿಯ ಅನುಮತಿ ಪಡೆದು ಜುಲೈ 8ರಂದು ಹೌನ್ಜ್ ಖಾಸ್‍ಗೆ ಮಧ್ಯರಾತ್ರಿ ಹೋಗಿದ್ದೆವು. ಜುಲೈ 20, 2019ರಂದು ನನ್ನನ್ನು ಮದ್ವೆ ಆಗುವುದಾಗಿ ಹೇಳಿದ್ದ ಅವರು, ಕೆ ಜಿ ಮಾರ್ಗ್‍ನಲ್ಲಿರುವ ತನ್ನ ಹಾಸ್ಟೆಲ್‍ಗೆ ಬರುವಂತೆ ಹೇಳಿ ಅಲ್ಲಿ ನಾವಿಬ್ಬರೂ ಒಂದು ರಾತ್ರಿ ಜೊತೆಯಾಗಿ ಕಳೆದಿದ್ವಿ. ಮರು ದಿನ ನನ್ನನ್ನು ಭೇಟಿ ಆಗಿದ್ದ ಅವರು ಐ-ಪಿಲ್ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿದ್ದರು.

True Love 1024x626 1 e1609323060998

ಆಗಸ್ಟ್ 4ರಂದು ರಾಯಲ್ ಪ್ಲಾಜಾದಲ್ಲಿ ಅವರು ರೂಂ ಬುಕ್ ಮಾಡಿದ್ದರು, ಅವತ್ತು ಅಲ್ಲಿ ಒಟ್ಟಿಗೆ ಉಳಿದುಕೊಂಡೆವು. ದೆಹಲಿಯಲ್ಲಿ ತರಬೇತಿಗೆ ಬಂದಿದ್ದ ವೇಳೆ ಅವರು ನನ್ನನ್ನು ಪ್ರತಿನಿತ್ಯ ಭೇಟಿ ಆಗುತ್ತಿದ್ದರು. ನಾನು ಎಲ್ಲವನ್ನೂ ನನ್ನ ತಾಯಿಗೆ ಹೇಳಿದ ಬಳಿಕ ನನ್ನ ತಾಯಿ ಅವರ ಹಾಸ್ಟೆಲ್‍ನಲ್ಲಿ ಭೇಟಿ ಆಗಿ ಮದ್ವೆ ಬಗ್ಗೆ ಮಾತಾಡಿದರು ಮತ್ತು ಆಗ ಮದುವೆಗೆ ನನಗೆ ಸ್ವಲ್ಪ ಟೈಂ ಬೇಕು ಎಂದು ಹೇಳಿದ್ದರು. ಕರ್ನಾಟಕದ ಇಂಡಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆದ ಬಳಿಕ ಅವರು ನನ್ನನ್ನು ದೂರವಿರಿಸಲು ಶುರು ಮಾಡಿದರು, ನಾನು ಕರೆ ಮಾಡಿದಾಗಲೆಲ್ಲ ಬ್ಯುಸಿ ಇರುವುದಾಗಿ ಹೇಳುತ್ತಿದ್ದರು. 2020ರ ಜನವರಿ 26ರಂದು ನನ್ನ ಹೆತ್ತವರು ಇಂಡಿಗೆ ತೆರಳಿ ಅವರ ತಂದೆ ಸುಧಾಕರ್ ಲೋಖಂಡೆ ಜೊತೆಗೆ ಮಾತಾಡಿದರು ಮತ್ತು ಅವರು ನಾಗ್ಪುರದಲ್ಲಿರುವ ತಮ್ಮ ಸಹೋದರನ ಜೊತೆಗೆ ಆದಷ್ಟು ಬೇಗ ಮಾತಾಡುವುದಾಗಿಯೂ ಮತ್ತು ಶೀಘ್ರವೇ ದೆಹಲಿಗೆ ಬರುವುದಾಗಿಯೂ ಹೇಳಿದ್ದರು. 15 ದಿನಗಳ ಬಳಿಕ ನನ್ನ ತಂದೆ ಸುಧಾಕರ್ ಲೋಖಂಡೆಗೆ ಕರೆ ಮಾಡಿದಾಗ ಅವರು ಕೆಟ್ಟದಾಗಿ ಮಾತಾಡಿದರು ಮತ್ತು ನಿಮ್ಮ ಮಗಳು ನನ್ನ ಮಗನ ಎದುರು ನಿಲ್ಲಲು ಯೋಗ್ಯಳಲ್ಲ ಎಂದರು. ಆ ಬಳಿಕ ಸ್ನೇಹಲ್ ಲೋಖಂಡೆಯಾಗಲೀ ಅವರ ತಂದೆಯಾಗಲೀ ನಮಗೆ ಕರೆ ಮಾಡಿಲ್ಲ. ನನ್ನನ್ನು ಬಳಸಿಕೊಂಡು ನನ್ನ ಜೀವನ ಹಾಳು ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

love 1

ಅವರಿಗೆ (ಸ್ನೇಹಲ್‍ಗೆ) ಈ ಮೊದಲು ಒಂದು ಸಂಬಂಧವಿತ್ತು ಮತ್ತು ಅವರ ಸ್ನೇಹಿತೆ ಆ ಸಂಬಂಧದ ಅವಧಿಯಲ್ಲಿ ಐ-ಪಿಲ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಲೇ ಇದ್ದರು. ಆಕೆ ಮದುವೆ ಆಗುವಂತೆ ಕೇಳಿದಾಗ ಆಕೆಯಿಂದ ದೂರ ಆಗಿದ್ದಾಗಿ ಅವರೇ ನನಗೆ ಆರಂಭದಲ್ಲಿ ಹೇಳಿದ್ದರು. ಹುದ್ದೆ ಮತ್ತು ಪ್ರತಿಷ್ಠೆ ಬಳಸಿಕೊಂಡು ಹುಡುಗಿಯರನ್ನು ಆಕರ್ಷಿಸಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಜೊತೆಗೆ 2 ವರ್ಷ ಸಂಬಂಧದಲ್ಲಿದ್ದ ನನಗೂ ಹಾಗೇ ಮಾಡಿದ್ದಾರೆ. ಮದ್ವೆಯ ನೆಪದಲ್ಲಿ ನನ್ನನ್ನು ಬಳಸಿಕೊಂಡಿದ್ದಾರೆ. ಇತರ ವೈಯಕ್ತಿಕ, ದೈಹಿಕ ಮತ್ತು ಮಾನಸಿಕ ಜೀವನದಲ್ಲಿ ಆಟ ಆಡುವ ಈ ವ್ಯಕ್ತಿಯನ್ನು ಶಿಕ್ಷಿಸಬೇಕು. ಅವರು ಜೈಲಿನಲ್ಲಿರಬೇಕು, ಇಲ್ಲವಾದರೆ ಅವರು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಇಂತಹ ಅಪರಾಧಕ್ಕಾಗಿ ಅವರು ಜೈಲಿನಲ್ಲಿರಬೇಕು.

ಈ ಹಿನ್ನೆಲೆಯಲ್ಲಿ ನಾನು ಗೌರವಾನ್ವಿತ ಪ್ರಾಧಿಕಾರದಿಂದ ನ್ಯಾಯವನ್ನು ನಿರೀಕ್ಷಿಸುತ್ತಿದ್ದೇನೆ ಮತ್ತು ಪ್ರಾಧಿಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಯುವತಿ ಮನವಿ ಮಾಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *