ಚೆನ್ನೈ: ಕರ್ನಾಟಕ ಮೂಲದವರಾದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರು ತಮ್ಮ ಮಗಳನ್ನು ದುಬಾರಿ ಖಾಸಗಿ ಶಾಲೆಗೆ ಸೇರಿಸದೇ ಅಂಗನವಾಡಿಗೆ ಸೇರಿಸಿ ಸರಳತೆ ಮೆರೆದು ಜನರ ಮೆಚ್ಚುಗೆ ಪಡೆದಿದ್ದಾರೆ.
ಈಗಿನ ಕಾಲದಲ್ಲಿ ಜನರು ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದರೆ ಒಳ್ಳೆಯದು ಅಂತ ಆರಂಭದಲ್ಲೇ ದುಬಾರಿ ಶಿಕ್ಷಣದತ್ತ ಮುಖ ಮಾಡ್ತಾರೆ. ಆದರೆ ತಮಿಳುನಾಡಿನ ಜಿಲ್ಲಾಧಿಕಾಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಲ್ಪಾ ಪ್ರಭಾಕರ್ ಅವರು ತಮ್ಮ ಮಗು ಎಲ್ಲರೊಂದಿಗೆ ಬೆರೆತು ಸಾಮಾಜವನ್ನು ತಿಳಿಯಲಿ ಎಂದು ಅಂಗನವಾಡಿಗೆ ಸೇರಿಸಿದ್ದಾರೆ.
Advertisement
Advertisement
ಉನ್ನತ ಸ್ಥಾನದಲ್ಲಿದ್ದು ಮಗಳನ್ನು ದುಬಾರಿ ಖಾಸಗಿ ಶಾಲೆಗಳಲ್ಲಿ ಓದಿಸುವುದು ಶಿಲ್ಪಾ ಅವರಿಗೆ ಕಷ್ಟವೇನಲ್ಲ. ಆದ್ರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯ ವ್ಯವಸ್ಥೆ ಹಾಗೂ ಉತ್ತಮ ಪರಿಸರ ದೊರಕುವಾಗ ದುಬಾರಿ ಶಿಕ್ಷಣದ ಮೊರೆ ಯಾಕೆ ಹೋಗಬೇಕು ಅಂತ ಸರಳವಾಗಿ ತಮ್ಮ ಮಗಳನ್ನು ಜಿಲ್ಲಾಧಿಕಾರಿ ಕಚೇರಿಯ ಸಮೀಪವಿರುವ ಪಲಾಯಕಮೊಟ್ಟಿಯ ಅಂಗನವಾಡಿಗೆ ಸೇರಿಸಿದ್ದಾರೆ. ಇದನ್ನೂ ಓದಿ: ನೆರೆ ವೇಳೆ 8 ದಿನಗಳ ಕಾಲ ಪರಿಚಯ ತಿಳಿಸದೇ ಸ್ವಯಂಸೇವಕರಂತೆ ಕೆಲ್ಸ ಮಾಡಿದ್ರು ಐಎಎಸ್ ಅಧಿಕಾರಿ!
Advertisement
ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಮೂಲದ ಶಿಲ್ಪಾ ಪ್ರಭಾಕರ್ 2009ರ ಐಎಎಸ್ ಅಧಿಕಾರಿಯಾಗಿದ್ದು, ಯಾಕೆ ಅಂಗನವಾಡಿಗೆ ಸೇರಿಸಿದ್ದು ಎಂದು ಕೇಳಿದ್ದಕ್ಕೆ, ಅಂಗನವಾಡಿಗೆ ಸೇರಿಸಿದ ಮೇಲೆ ತನ್ನ ಮಗಳ ತಮಿಳು ಸುಧಾರಿಸಿದೆ. ಸಮಾಜದಲ್ಲಿರುವ ಎಲ್ಲಾ ರೀತಿಯ ಜನರೊಂದಿಗೆ ನನ್ನ ಮಗಳು ಸೇರಬೇಕು. ಅವರ ಜೊತೆ ಸೇರಿ ಕಲಿಯಬೇಕು. ಹೀಗಾಗಿ ಖಾಸಗಿ ಶಾಲೆ ಬದಲು ಅಂಗನವಾಡಿಗೆ ಸೇರಿಸಿದ್ದೇನೆ ಎಂದು ಉತ್ತರಿಸಿದ್ದಾರೆ.
Advertisement
ಅಂಗನವಾಡಿ ಕೇಂದ್ರಗಳು ಮೊದಲಿನಂತಿಲ್ಲ, ಬಹಳಷ್ಟು ಬದಲಾಗಿವೆ. ಅಲ್ಲಿ ಮಕ್ಕಳಿಗೆ ಸಕಲ ಪೌಷ್ಟಿಕ ಆಹಾರ ನೀಡುತ್ತಾರೆ. ಮಕ್ಕಳ ಸವರ್ತೋಮುಖ ಬೆಳವಣಿಗೆಗೆ ಬೇಕಾಗುವ ಉತ್ತಮ ಪರಿಸರವನ್ನು ಕಲ್ಪಸಿಕೊಡಲಾಗುತ್ತದೆ. ತಮ್ಮ ಮಗಳನ್ನು ಸೇರಿಸಿರುವ ಅಂಗನವಾಡಿ ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ, ಅಲ್ಲಿರುವ ಶಿಕ್ಷಕಿಯರು ತುಂಬಾ ಸಕ್ರಿಯರಾಗಿದ್ದಾರೆ. ತಿರುನೆಲ್ವೇಲಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳೂ ಸ್ಮಾರ್ಟ್ ಫೋನ್ ಹೊಂದಿವೆ. ಅಲ್ಲಿ ಮಕ್ಕಳ ಎತ್ತರ – ತೂಕ ಹಾಗೂ ಅವರು ತಿಂದ ಆಹಾರದ ಪ್ರಮಾಣ ಕೂಡ ಅಳತೆ ಮಾಡಲಾಗುತ್ತದೆ. ಆದರಿಂದ ಜಿಲ್ಲೆಯಲ್ಲಿ ಅಂಗನವಾಡಿಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ನಾವು ನಿರ್ಧರಿಸಿದ್ದೇವೆ. ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆ ಅಂಗನವಾಡಿಗಳು ಒಳ್ಳೆಯ ಅಡಿಪಾಯ ಹಾಕಿಕೊಡುತ್ತದೆ ಎಂದು ಶಿಲ್ಪಾ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv