ಭೋಪಾಲ್: ಸರ್ಕಾರಿ ಸೇವೆಯಲ್ಲಿರುವ ಹಲವು ಅಧಿಕಾರಿಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದು ನಿಮಗೆ ಗೊತ್ತೇ ಇದೆ. ಆದರೆ ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮಗಳನ್ನ ಸರ್ಕಾರಿ ಅಂಗನವಾಡಿಗೆ ಸೇರಿಸುವ ಮೂಲಕ ಮಾದರಿಯಾಗಿದ್ದಾರೆ.
ಐಎಎಸ್ ಅಧಿಕಾರಿ ಪಂಕಜ್ ಜೈನ್ ಅವರು ತಮ್ಮ ಮಗಳನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ್ದಾರೆ. ಇವರು ಮಧ್ಯಪ್ರದೇಶದ ಕಟ್ನಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಖಾಸಗಿ ಶಾಲೆಗಿಂತ ಸರ್ಕಾರಿ ಅಂಗನವಾಡಿಗಳು ಉತ್ತಮವಾಗಿವೆ ಎಂದು ಹೇಳಿ ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿ ಶಾಲೆಗೆ ಸೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.
Advertisement
Advertisement
ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಅಂಗನವಾಡಿ ಮತ್ತು ಶಾಲೆಗೆ ಕಳುಹಿಸುವುದರಿಂದ ಅಲ್ಲಿನ ವಾತಾವರಣ ತಿಳಿಯುತ್ತದೆ. ಜೊತೆಗೆ ಅಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನಮಗೆ ಬೇಗ ತಿಳಿಯುತ್ತದೆ. ಇದರಿಂದ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬಹುದು. ನಮ್ಮ ಕೆಲಸವನ್ನು ನೋಡಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ ಎಂದು ಡಿಸಿ ಪಂಕಜ್‍ಜೈನ್ ತಿಳಿಸಿದ್ದಾರೆ.
Advertisement
ಈ ಬಗ್ಗೆ ತಿಳಿದು ಮಧ್ಯ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಪಂಕಜ್‍ಜೈನ್ ಅವರಿಗೆ ಪತ್ರವೊಂದನ್ನ ಬರೆದು ಶುಭಾಶಯ ತಿಳಿಸಿದ್ದಾರೆ. ಇದೀಗ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಸಾರ್ವಜನಿಕ ಅಧಿಕಾರಿ ಸಮಾಜಕ್ಕೆ ಮಾದರಿಯಾಗಬೇಕು. ನಿಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ಸೇರಿಸುವ ಮೂಲಕ ಇದನ್ನ ನೀವು ತೋರಿಸಿಕೊಟ್ಟಿದ್ದೀರಿ. ಇದನ್ನು ನೋಡಿ ಇತರ ಸರ್ಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಇದರಿಂದ ಸರ್ಕಾರಿ ಯೋಜನೆಗಳು ಸರಿಯಾದ ಸಮಯಕ್ಕೆ ಚಾಲನೆ ಆಗುತ್ತವೆ. ಹೀಗೆ ನಿಮ್ಮ ಕರ್ತವ್ಯನಿಷ್ಠೆಯನ್ನು ಇದೇ ರೀತಿ ಮುಂದುವರಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.