LatestMain PostNational

ಅಕ್ರಮ ಆಸ್ತಿ ಪ್ರಕರಣ- ಐಎಎಸ್ ಅಧಿಕಾರಿ ಬಂಧನ

ಡೆಹರಾಡೂನ್: ಆದಾಯಕ್ಕಿಂತಲೂ ಅಧಿಕ ಆಸ್ತಿಯನ್ನು ಸಂಪಾದಿಸಿದ್ದ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಯನ್ನು ಬಂಧಿಸಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಐಎಎಸ್ ಅಧಿಕಾರಿ ರಾಮ್ ವಿಲಾಸ್ ಬಂಧಿತ ಆರೋಪಿ. ಇವರು ಆದಾಯ ಮೂಲಗಳಿಗಿಂತಲೂ ಅಧಿಕ ಆಸ್ತಿಯನ್ನು ಸಂಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಮ್ ವಿಲಾಸ್ ಅವರನ್ನು ಅಮಾನತುಗೊಳಿಸಿ ಬಂಧಿಸಿದ್ದಾರೆ.

ಐಎಎಸ್ ರಾಮ್ ವಿಲಾಸ್ ಯಾದವ್ ಅವರು ತಮ್ಮ ಆದಾಯಕ್ಕೆ ಮೀರಿದ ಆಸ್ತಿಯನ್ನು ಗಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಡರಾತ್ರಿ ವಿಚಾರಣೆಯ ನಂತರ ಬಂಧಿಸಲಾಯಿತು ಎಂದು ರಾಜ್ಯ ವಿಜಿಲೆನ್ಸ್ ನಿರ್ದೇಶಕ ಅಮಿತ್ ಸಿನ್ಹಾ ತಿಳಿಸಿದ್ದಾರೆ.

ಜೂನ್‍ನಲ್ಲಿ ಉತ್ತರಾಖಂಡ ವಿಜಿಲೆನ್ಸ್ ಇಲಾಖೆಯು ಐಎಎಸ್ ಅಧಿಕಾರಿ ರಾಮ್ ವಿಲಾಸ್ ಯಾದವ್‍ಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಅಕ್ರಮ ಆಸ್ತಿ ಪ್ರಕರಣದಲ್ಲಿ ಲಕ್ನೋ ಮತ್ತು ಡೆಹ್ರಾಡೂನ್‍ನಲ್ಲಿ ಅವರ ನಿವೇಶನಗಳು ಸೇರಿವೆ. ಈತನ ವಿರುದ್ಧ ಏಪ್ರಿಲ್ 19ರಂದು ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿ ಇರುವ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್: ಬಿಜೆಪಿ

ರಾಮ್ ವಿಲಾಸ್ ಈ ಹಿಂದೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ, ಐಎಎಸ್ ಅಧಿಕಾರಿ ಉತ್ತರಾಖಂಡದ ಗ್ರಾಮೀಣ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಬಿಜೆಪಿಯ ಚಾಳಿ ದೇಶಕ್ಕೆ ಹಬ್ಬಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

Live Tv

Leave a Reply

Your email address will not be published.

Back to top button