ಬೆಂಗಳೂರು: ಕೆಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಅವ್ಯವಸ್ಥೆಯ ಬಗ್ಗೆ ಕೇಳಿರುತ್ತೇವೆ. ಅವ್ಯವಸ್ಥೆಯನ್ನು ಕಂಡ ಸಾರ್ವಜನಿಕರು ಪ್ರಶ್ನಿಸಲಾಗದೇ ಸುಮ್ಮನಾಗುವುದು ಸಹಜ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರ ನವಜಾತ ಶಿಶುವಿಗೆ ಹಿಂಸೆ ನೀಡಿದ್ದಾರೆ. ಇದ್ರಿಂದ ಐಎಎಸ್ ಅಧಿಕಾರಿ ಪಲ್ಲವಿ ಆಕುರಾತಿ ಆಸ್ಪತ್ರೆ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ನೀಡಿದ್ದಾರೆ.
ಇಂದಿರಾ ನಗರದ ‘ಲೈಫ್ ಪ್ಲಸ್’ ಆಸ್ಪತ್ರೆಯ ವಿರುದ್ಧ ಪಲ್ಲವಿ ಆಕುರಾತಿ ದೂರು ನೀಡಿದ್ದಾರೆ. ಜುಲೈ 18 ರಂದು ಪಲ್ಲವಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ ಗಳಿಂದ ಚಿತ್ರಹಿಂಸೆ ನೀಡಲಾಗಿದೆ. ಇ-ಮೇಲ್ ಮೂಲಕ ಆಸ್ಪತ್ರೆಯ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾರೆ.
Advertisement
ಇಂದಿರಾ ನಗರದ “ಲೈಫ್ ಪ್ಲಸ್” ಆಸ್ಪತ್ರೆ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ಐಎಎಸ್ ಅಧಿಕಾರಿ ಪಲ್ಲವಿ ಆಕುರಾತಿ ನೀಡಿರುವ ದೂರು ಹಾಗೂ ತಾವು ಅನುಭವಿಸಿದ ನರಕಯಾತೆಯ ಇ-ಮೇಲ್‍ನ ಇಂಚಿಂಚು ಮಾಹಿತಿ ಹೀಗಿದೆ.
* ಡಾಕ್ಟರ್ ಸಲಹೆ ಮೇರೆಗೆ ಸಿಜೇರಿಯನ್ ಮಾಡಿಸಿಕೊಂಡಿದ್ದೆ. ಆದರೆ, ಸಿಜೇರಿಯನ್‍ಗೆ ಸಲಹೆ ನೀಡುವ ಮುನ್ನ ಆಸ್ಪತ್ರೆ ವೈದ್ಯರು ಸ್ಕ್ಯಾನಿಂಗ್ ಮಾಡಿರಲಿಲ್ಲ.
* ಕರ್ತವ್ಯದಲ್ಲಿದ್ದ ನರ್ಸ್ ಗಳಿಗೆ ಸರಿಯಾಗಿ ತರಬೇತಿ ಇರಲಿಲ್ಲ.
* ನರ್ಸ್ ಗಳು ಅನಗತ್ಯವಾಗಿ ರೂಂಗೆ ಪ್ರತಿ 10 ನಿಮಿಷಕ್ಕೆ ಬಂದು ತೊಂದರೆ ಕೊಡುತ್ತಿದ್ದರು.
* ನವಜಾತ ಶಿಶುವಿನ ಪೋಷಣೆಯಲ್ಲಿ ಅಜಾಗರೂಕತೆ, ಅಸಡ್ಡೆಯಿಂದ ನಡೆದುಕೊಂಡಿದ್ದಾರೆ.
* ನವಜಾತ ಶಿಶುವಿನ ಮೇಲೆ ಫೋಟೋ ಥೆರಪಿ ಮಾಡಲು ವೈದ್ಯರು ಬಲವಂತ ಪಡಿಸುತ್ತಿದ್ದರು.
* ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎರಡು ದಿನಗಳ ನಂತರವು ಡಿಸ್ಚಾರ್ಜ್ ವರದಿ ನೀಡಿರಲಿಲ್ಲ.
* ನಂತರ ನೀಡಿದ ವರದಿಯಲ್ಲಿ ತಪ್ಪುಗಳು ಇದ್ದವು.
* ಆಸ್ಪತ್ರೆಯಲ್ಲಿ ಸಿಸಿಟಿವಿಯೂ ಇಲ್ಲ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv