ಮ್ಯಾಡ್ರಿಡ್: ಚೀನಾದ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ 108 ಮೆಗಾಪಿಕ್ಸೆಲ್ ಹೊಂದಿರುವ ಪೆಂಟಾ ಕ್ಯಾಮೆರಾ ಇರುವ ಡ್ಯುಯಲ್ ನಾನೋ ಸಿಮ್ ಫೋನನ್ನು ಬಿಡುಗಡೆ ಮಾಡಿದೆ. ಈ ಮೂಲಕ ದುಬಾರಿ ಬೆಲೆಯ ಫೋನ್ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಆಪಲ್, ಸ್ಯಾಮ್‍ಸಂಗ್, ಒನ್ ಪ್ಲಸ್ ಕಂಪನಿಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ.
ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಎಂಐ ನೋಟ್ 10 ಫೋನನ್ನು ಎರಡು ಮಾದರಿಯಲ್ಲಿ ಬಿಡುಗಡೆ ಮಾಡಿದೆ. 6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 549 ಯುರೋ(ಅಂದಾಜು 43 ಸಾವಿರ ರೂ.), 8 ಜಿಬಿ ರ‍್ಯಾಮ್ + 256 ಜಿಬಿ ಆಂತರಿಕ ಮಮೊರಿಯ ಫೋನಿಗೆ 649 ಯುರೋ(ಅಂದಾಜು 51 ಸಾವಿರ ರೂ.) ನಿಗದಿ ಮಾಡಿದೆ. ಬಿಳಿ, ಹಸಿರು, ಕಪ್ಪು, ಬಣ್ಣದಲ್ಲಿ ಈ ಫೋನ್ ಬಿಡುಗಡೆಯಾಗಿದೆ.
Advertisement
Advertisement
ಇಟಲಿ ಮತ್ತು ಸ್ಪೇನ್ ದೇಶಗಳಲ್ಲಿ ನವೆಂಬರ್ 18 ರಂದು ಈ ಫೋನ್ ಲಭ್ಯವಿದ್ದರೆ ಇಂಗ್ಲೆಂಡ್ ನೆದರ್‍ಲ್ಯಾಂಡ್, ಬೆಲ್ಜಿಯಂಗಳಲ್ಲಿ ನಂತರದ ದಿನಗಳಲ್ಲಿ ಫೋನ್ ಲಭ್ಯವಿರಲಿದೆ ಎಂದು ಕ್ಸಿಯೋಮಿ ತಿಳಿಸಿದೆ.
Advertisement
ಕ್ಯಾಮೆರಾ ವೈಶಿಷ್ಟ್ಯತೆ ಏನು?
ನೋಟ್ 10 ಫೋನಿನಲ್ಲಿ ಒಟ್ಟು 5 ಕ್ಯಾಮೆರಾ ಇದೆ. 108 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರುವ ಕ್ಯಾಮೆರಾ, 5 ಎಂಪಿ ಕ್ಯಾಮೆರಾ(50 ಎಕ್ಸ್ ಝೂಮ್), ಸ್ಪಷ್ಟವಾದ ಭಾವಚಿತ್ರ ತೆಗೆಯಲು 12 ಎಂಪಿ ಪೊಟ್ರೈಟ್ ಕ್ಯಾಮೆರಾ, 20 ಎಂಪಿ ಆಲ್ಟ್ರಾ ವೈಡ್ ಆಂಗಲ್, ಮ್ಯಾಕ್ರೋ ಫೋಟೋಗಳಿಗಾಗಿ 2 ಎಂಪಿ ಕ್ಯಾಮೆರಾ ನೀಡಲಾಗಿದೆ. ಮುಂದುಗಡೆ ಸೆಲ್ಫಿ ಕ್ಲಿಕ್ಕಿಸಿಲು 32 ಎಂಪಿ ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ ಕ್ಯಾಮೆರಾದ ಜೊತೆ ವಾಟರ್ ಪ್ರೂಫ್ ನಾಚ್ ಇದೆ.
Advertisement
ಬಾಡಿ ಮತ್ತು ಡಿಸ್ಪ್ಲೇ:
157.8*74.2*9.7 ಮಿ.ಮೀ ಗಾತ್ರ, 208 ಗ್ರಾಂ ತೂಕ, ಹಿಂದುಗಡೆ ಮುಂದುಗಡೆ ಗ್ಲಾಸ್(ಗೊರಿಲ್ಲ ಗ್ಲಾಸ್), ಡ್ಯುಯಲ್ ಸಿಮ್, 6.47 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080*2340 ಪಿಕ್ಸೆಲ್, 398 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್ 5.
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 9.0 ಪೈ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ ಅಕ್ಟಾಕೋರ್ ಪ್ರೊಸೆಸರ್, ಅಡ್ರಿನೊ 618 ಗ್ರಾಫಿಕ್ಸ್ ಪ್ರೊಸೆಸರ್, 6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿ ಅಥವಾ 8 ಜಿಬಿ ರ‍್ಯಾಮ್ + 256 ಜಿಬಿ ಆಂತರಿಕ ಮಮೊರಿ, ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ.
ಇತರೇ
ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 5260 ಎಂಎಎಚ್ ಬ್ಯಾಟರಿ, ಫಾಸ್ಟ್ ಬ್ಯಾಟರಿ ಚಾರ್ಜಿಂಗ್