ಸಿಡ್ನಿ: ಇತ್ತೀಚೆಗೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಟೂರ್ನಿಯಲ್ಲಿ ತಂಡದ ಸೋಲಿನ ಕುರಿತು ವ್ಯಂಗ್ಯವಾಗಿ ಕಾಮೆಂಟ್ ಮಾಡಿ ಭಾರತೀಯ ಅಭಿಮಾನಿಗಳಿಂದ ನಾಯಕ ಡುಪ್ಲೆಸಿಸ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಟೀಂ ಇಂಡಿಯಾ 3 ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಪಂದ್ಯದ 3ನೇ ದಿನದಾಟದ ಅಂತ್ಯದ ವೇಳೆಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಅಲ್ಲದೇ ಮೂರು ಟೆಸ್ಟ್ ಪಂದ್ಯಗಳಲ್ಲೂ ಟೀಂ ಇಂಡಿಯಾ ಇದೇ ತಂತ್ರವನ್ನು ಬಳಸಿತ್ತು ಎಂದು ಡುಪ್ಲೆಸಿಸ್ ಹೇಳಿದ್ದರು. ಸದ್ಯ ಟೀಂ ಇಂಡಿಯಾ ಗೆಲುವಿನ ಕುರಿತು ಆಸೀಸ್ ತಂಡದ ಮಾಜಿ ನಾಯಕ, ದಿಗ್ಗಜ ಆಟಗಾರ ಇಯಾನ್ ಚಾಪೆಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್‍ನಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಲು ಯತ್ನಿಸುತ್ತಿರುವ ಟೀಂ ಇಂಡಿಯಾ ಆಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಚಾಪೆಲ್, ಕಳೆದ ಕೆಲ ಸಮಯದಿಂದ ಟೀ ಇಂಡಿಯಾ ಆಟದಲ್ಲಿ ಹೆಚ್ಚು ಪರಿಣಿತಿಯನ್ನು ಸಾಧಿಸಿದೆ. ಆ ಆಟವನ್ನು ಇತರೆ ತಂಡಗಳು ಕಾಪಿ ಮಾಡಬಹುದಾಗಿದೆ ಎಂದು ಸಲಹೆಯನ್ನು ನೀಡಿದ್ದಾರೆ.
ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪ್ರೇರಣೆ ನೀಡಲು ಆಟ ಹೆಚ್ಚು ಗುಣಮಟ್ಟದಲ್ಲಿ ಇರಬೇಕಿದೆ. ಟೀಂ ಇಂಡಿಯಾದಲ್ಲಿ ಗುಣಮಟ್ಟದ ಅತ್ಯುನ್ನತ ಸ್ಥಾನದಲ್ಲಿದ್ದು, ತಂಡಕ್ಕೆ ಪ್ರತಿಭಾನ್ವಿತ ಆಟಗಾರರು ದೊರೆಯಲು ಐಪಿಎಲ್ ಕೂಡ ಕಾರಣವಾಗಿದೆ. ಕ್ರಿಕೆಟ್‍ನಲ್ಲಿ ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಟೀಂ ಇಂಡಿಯಾ ಅನುಸರಿಸುತ್ತಿರುವ ವಿಧಾನಗಳನ್ನು ಇತರೇ ತಂಡದ ಆಟಗಾರರು ಪಾಲಿಸಿ ಬಲಿಷ್ಠ ತಂಡವಾಗಿ ರೂಪುಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ತಂಡದ ಪ್ರಮುಖ ಬೌಲರ್ ಆಗಿದ್ದ ಜಸ್ಪ್ರೀಸ್ ಬುಮ್ರಾ ಅವರ ಗೈರಿನಲ್ಲೂ ತಂಡ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವಿಪ್ ಮಾಡಿತ್ತು. ಈ ಕುರಿತು ಮಾತನಾಡಿರುವ ಚಾಪೆಲ್, ಟೀಂ ಇಂಡಿಯಾ ವೇಗದ ಪಡೆ ಎಲ್ಲಾ ಮಾದರಿಯಲ್ಲೂ ಅತ್ಯುತ್ತಮವಾಗಿದ್ದು, ಜಗತ್ತಿನ ಯಾವುದೇ ಪರಿಸ್ಥಿತಿಗಳಲ್ಲೂ ಮಿಂಚಲು ಸಜ್ಜುಗೊಂಡಿದೆ ಎಂದು ಹೇಳಿದ್ದಾರೆ.