ಮಂಡ್ಯ: ಪಂಚರತ್ನ ಯಾತ್ರೆಯನ್ನು (Pancharatna Yatra) ಯಶಸ್ವಿಗೊಳಿಸುತ್ತಿರುವ ಮಂಡ್ಯ (Mandya) ಜಿಲ್ಲೆಯ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ನನಗೆ ಸರಿಯಾಗಿ ನಿದ್ದೆಯಿಲ್ಲ, ಆರೋಗ್ಯದಲ್ಲಿ ಸಮಸ್ಯೆಯಿದೆ. ಆದ್ರೆ ದೊಡ್ಡ ಪರಿಣಾಮವೇನು ಬೀರಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
Advertisement
ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಬಿಜಿಎಸ್ (JDS) ಆಸ್ಪತ್ರೆಗೆ ತೆರಳಿದ್ದ ಮಾಜಿ ಸಿಎಂ ಜೆಡಿಎಸ್ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿ ಅಭಯ ನೀಡಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕ್ಷೇಮವಾಗಿದ್ದಾರೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಜನರಿಗೆ ಮಾಸ್ಕ್ ಹಾಕಿ ಅನ್ನೋ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಿ: ಖಾದರ್ ಆಗ್ರಹ
Advertisement
Advertisement
ಮಂಡ್ಯದಲ್ಲಿ `ಪಂಚರತ್ನ ಯಾತ್ರೆ’ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಡ್ಯ ಜಿಲ್ಲೆಯ 7 ದಿನಗಳ ಪ್ರವಾಸ ಅದ್ಭುತ ರೀತಿಯಲ್ಲಿ ನಡೆದಿದೆ. ಮಧ್ಯರಾತ್ರಿಯಾದರೂ ಜನರು ಒಟ್ಟಾಗಿ ಸೇರಿ ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದಾರೆ. ಜನರ ಆಶೀರ್ವಾದವೇ ನಮಗೆ ಸ್ಫೂರ್ತಿ. ಮಂಡ್ಯದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ನನಗೆ ಸರಿಯಾಗಿ ನಿದ್ದೆಯಿಲ್ಲ, ಸ್ವಲ್ಪ ಆರೋಗ್ಯದಲ್ಲಿ ಸಮಸ್ಯೆ ಇದೆ. ಆದ್ರೆ ದೊಡ್ಡ ಪರಿಣಾಮವೇನು ಬೀರಿಲ್ಲ. ಶ್ರಮ ಪಟ್ಟರೆ ಪ್ರತಿಫಲ ಸಿಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೂಪೇಶ್ ಶೆಟ್ಟಿಗೆ ಬಿಗ್ ಸರ್ಪ್ರೈಸ್ ನೀಡಿದ ಬಿಗ್ ಬಾಸ್
Advertisement
`ತೂಮಕೂರು ಟಿಕೆಟ್ ಆಕಾಂಕ್ಷಿಗಳ ಕೋಟಿ-ಕೋಟಿ ಡೀಲ್’ ಆಡಿಯೋ ವೈರಲ್ ವಿಚಾರಕ್ಕೆ ಕೆಂಡಾಮಂಡಲವಾದ ಹೆಚ್‌ಡಿಕೆ, ಬಿಜೆಪಿ-ಕಾಂಗ್ರೆಸ್ ಪಕ್ಷದವರು ಚುನಾವಣೆಯಲ್ಲಿ ಸೋಲುತ್ತೇವೆ ಅನ್ನೋ ಕಾರಣಕ್ಕೆ ಈ ರೀತಿ ಪ್ರಚಾರ ಮಾಡ್ತಿದ್ದಾರೆ. ಯಾರು ಹಣದ ವ್ಯವಹಾರ ನಡೆಸಿರುವ ಮಾಹಿತಿ ಇಲ್ಲ. ರಾಜ್ಯ ಸರ್ಕಾರದ ಸಿಎಂ, ಮುಖಂಡರು ಇಂಟಲಿಜೆನ್ಸಿ ಮಾಹಿತಿ ಕೊಟ್ಟರೇ ನಾನೇ ಖುಷಿ ಪಡ್ತೀನಿ ಎಂದು ಕುಟುಕಿದ್ದಾರೆ.