ನವದೆಹಲಿ: ನಾನು ನಿಮ್ಮ ಕೀಳಾದ ಟೀಕೆಗಳಿಗೆ ಅಂಜಲ್ಲ, ರಾಮ್‍ಪುರ ಬಿಟ್ಟು ಹೋಗುವುದೂ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಅವರ ಕೀಳು ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಜಯಪ್ರದಾ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಎಲ್ಲಿಗೆ ಹೋಗಬೇಕು? ನಾನು ಸಾಯಬೇಕೇ? ಆಗ ನಿಮಗೆ ಸಮಧಾನವಾಗುತ್ತಾ? ನಿಮ್ಮ ಈ ಕೀಳು ಹೇಳಿಕೆಗಳಿಗೆ, ಟೀಕೆಗೆ ಹೆದರಿ ನಾನು ರಾಮ್‍ಪುರ ಬಿಟ್ಟು ಹೋಗುತ್ತೇನೆ ಅಂದುಕೊಂಡಿದ್ದೀರಾ? ನಾನು ನಿಮ್ಮ ಮಾತುಗಳಿಗೆ ಅಂಜಲ್ಲ, ಇಲ್ಲಿಂದ ಹೋಗುವುದೂ ಇಲ್ಲವೆಂದು ಖಡಕ್ ಆಗಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ
Advertisement
Advertisement
ಹೆಣ್ಣಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಡಿ. ಒಂದುವೇಳೆ ಈ ವ್ಯಕ್ತಿ ಗೆದ್ದರೆ ಪ್ರಜಾಪ್ರಭುತ್ವದ ಗತಿ ಏನಾಗುತ್ತೆ? ಸಾಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗುವುದಿಲ್ಲ. ಆದರಿಂದ ಅಜಮ್ ಖಾನ್‍ರನ್ನು ಚುನಾವಣೆಯಿಂದ ಬ್ಯಾನ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಅಜಮ್ ಖಾನ್ ಹೇಳಿದ್ದೇನು?
ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.
ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.
ಅಜಮ್ ಖಾನ್ ಹಾಗೂ ಜಯಪ್ರದಾ ಅವರು ರಾಮ್‍ಪುರ ಕ್ಷೇತ್ರದಲ್ಲಿ ಬದ್ಧ ರಾಜಕೀಯ ವೈರಿಗಳು. ಅಲ್ಲದೆ ಎಸ್‍ಪಿ ನಾಯಕ ಬಿಜೆಪಿ ನಾಯಕಿ ವಿರುದ್ಧ ಕೊಟ್ಟಿರುವ ವಿವಾದಾತ್ಮಕ ಹೇಳಿಕೆ ಉಭಯ ಪಕ್ಷಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಅಜಮ್ ಖಾನ್ ಒಂದು ಮಹಿಳಾ ನಾಯಕಿಯನ್ನು ಕೀಳಾಗಿ ಟೀಕಿಸಿದ್ದಕ್ಕೆ ಅವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.