ಕೋಲಾರ: ಸಿದ್ದರಾಮಯ್ಯ (Siddaramaiah) ಸ್ಪರ್ಧೆ ನಿರ್ಧಾರ ಮಾಡೋಕೆ ನಾನು ಎಐಸಿಸಿ ಅಧ್ಯಕ್ಷನಲ್ಲ (AICC President), ಆದ್ರೆ ಅವರು ಶ್ರೀನಿವಾಸಪುರಕ್ಕೆ ಬಂದು ಸ್ಪರ್ಧೆ ಮಾಡಲಿ ಅನ್ನೊದು ನನ್ನ ಬಯಕೆ ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ (Ramesh Kumar) ಹೇಳಿದ್ದಾರೆ.
ಇದೇ ನವೆಂಬರ್ 13ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಸಂಪ್ರದಾಯದ ಪ್ರಕಾರ ದೇಗುಲ (Temple), ದರ್ಗಾ, ಚರ್ಚ್‌ಗೆ (Church) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ – ಪ್ರೀತ್ಸೋ ನೆಪದಲ್ಲಿ ಮಾಯಾಂಗನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಬಿದ್ದ ಯುವಕ
Advertisement
Advertisement
ಈ ವಿಚಾರವಾಗಿ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ಕುಮಾರ್, ಸ್ಪರ್ಧೆ ನಿರ್ಧಾರ ಮಾಡೋಕೆ ನಾನು ಎಐಸಿಸಿ ಅಧ್ಯಕ್ಷನಲ್ಲ. ಶ್ರೀನಿವಾಸಪುರಕ್ಕೆ ಬಂದು ಸ್ಪರ್ಧೆ ಮಾಡಲಿ ಅನ್ನೋದು ನನ್ನ ಬಯಕೆ. ಸಿದ್ದರಾಮಯ್ಯ ಅವರ ಸ್ಪರ್ಧೆ ಹೈಕಮಾಂಡ್ ನಿರ್ಧರಿಸುತ್ತೆ. ಅದಕ್ಕಾಗಿ ನಾನೂ ಸೇರಿದಂತೆ ಎಲ್ಲರೂ ಅರ್ಜಿ ಹಾಕಲೇಬೇಕು ಎಂದಿದ್ದಾರೆ. ಇದನ್ನೂ ಓದಿ: ಪತಿಯ ಕಿರುಕುಳ – ಪ್ರೀತಿಸಿ ಮದುವೆಯಾಗಿದ್ದ ತುಂಬು ಗರ್ಭಿಣಿ ನೇಣಿಗೆ ಶರಣು
Advertisement
Advertisement
ಇದೇ ವೇಳೆ ಕೋಲಾರದಿಂದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, 25 ವರ್ಷ ದಾಟಿದವರು ಚುನಾವಣೆಯಲ್ಲಿ (Election) ಸ್ಪರ್ಧಿಸಬಹುದು. ಮಾನಸಿಕ ಸ್ಥಿಮಿತ ಸರಿಯಿರಬೇಕು, ಕ್ರಿಮಿನಲ್ ಆರೋಪ ಸಾಬೀತು ಆಗಿರದವರು ಸ್ಪರ್ಧಿಸಬಹುದು ಎಂದು ಟಾಂಗ್ ನೀಡಿದ್ದಾರೆ.