ಬೆಂಗಳೂರು: ನಾನು ಜಯಲಲಿತಾ ಅವರ ಮಗಳು. ಇದ್ರಲ್ಲಿ ಡೌಟೇ ಬೇಡ. ಬೇಕಿದ್ರೆ ಡಿಎನ್‍ಎ ಟೆಸ್ಟ್ ಆಗಿ ಹೋಗ್ಲಿ. ನಾನು ಎಲ್ಲದಕ್ಕೂ ರೆಡಿ ಅಂತ ಬೆಂಗಳೂರು ಮೂಲದ ಅಮೃತ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಜಯಲಲಿತಾ ಅವರ ಸೋದರ ಸಂಬಂಧಿ ಮನೆಯಲ್ಲಿ ಬೆಳೆದಿದ್ದ 37 ವರ್ಷದ ಅಮೃತ ಇದೇ 22ರಂದು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. 1980ರಲ್ಲಿ ಜಯಲಲಿತಾ ಅವರಿಗೆ ನಾನು ಜನಿಸಿದ್ದೇನೆ. ಈ ಬಗ್ಗೆ ದಾಖಲೆಗಳಿವೆ. ಆಗಿನ ಸನ್ನಿವೇಶಗಳನ್ನು ಎದುರಿಸಲಾಗದೇ ಜಯಲಲಿತಾ ನನ್ನನ್ನು ಗೌಪ್ಯವಾಗಿ ಬೆಳೆಸಿದ್ರು ಎಂದು ಸುಪ್ರೀಂಕೋರ್ಟ್‍ಗೆ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಅಮೃತ ಉಲ್ಲೇಖ ಮಾಡಿದ್ದಾರೆ.
Advertisement
Advertisement
ಈ ಹಿಂದೆಯೇ ಅಮೃತಾ ತಾನು ಜಯಲಲಿತಾ ಅವರು ಮಗಳು ಎಂದು ಹೇಳಿ ರಾಷ್ಟ್ರಪತಿಯಿಂದ ಹಿಡಿದು ಸುಪ್ರೀಂ ಕೋರ್ಟ್, ಪ್ರಧಾನಿ, ಮಾನವ ಹಕ್ಕುಗಳ ಆಯೋಗ ಹೀಗೆ ನಾನಾ ಕಡೆ ಮನವಿ ಪತ್ರ ಸಲ್ಲಿಸಿದ್ದರು.
Advertisement
Advertisement
ಜನ್ಮ ರಹಸ್ಯ: ಸಂಧ್ಯಾ ಮತ್ತು ಜಯರಾಂ ದಂಪತಿಗೆ ಜಯಲಲಿತಾ ಸೇರಿ ಒಟ್ಟು ಮೂವರು ಮಕ್ಕಳು. ಅವರೇ ಜಯಕುಮಾರ್, ಜಯಲಲಿತಾ ಅಲಿಯಾಸ್ ಕೋಮಲವಲ್ಲಿ ಹಾಗು ಶೈಲಜಾ. ಇದೇ ಶೈಲಜಾ ಅವರ ಮಗಳಾಗಿ ಅಮೃತಾ ಬೆಳೆದಿದ್ದರು.
ನನ್ನಪ್ಪ ಶೋಭನ್ ಬಾಬು: ಅಮೃತ ತನ್ನ ತಂದೆ ತೆಲಗು ನಟ ಶೋಭನ್ ಬಾಬು ಎಂಬ ಸತ್ಯವನ್ನು ಹೊರಹಾಕಿದ್ದರು. ಜಯಲಲಿತಾ ಅವರು ತೀರ ಸಂಕಷ್ಟದಲ್ಲಿದ್ದಾಗ ಶೋಭನ್ ಬಾಬು ಸಾಂತ್ವನ ಹೇಳಲು ಬಂದಿದ್ದರು. ಮುಂದೆ ಸಾಂತ್ವನ, ಗೆಳತನಕ್ಕೆ ತಿರುಗುತ್ತದೆ. ಗೆಳತನ ಪ್ರೀತಿ-ಪ್ರೇಮಕ್ಕೆ ಬದಲಾಗಿದೆ. ಆ ಇಬ್ಬರ ಪ್ರೀತಿಯ ಕುಡಿಯಾಗಿ ಹುಟ್ಟಿದವಳು ನಾನು ಎನ್ನುವುದು ಅಮೃತಾ ಅವರ ವಾದವಾಗಿದೆ.
ಶೋಭನ್ ಬಾಬು ಅವರ ಮೊದಲ ಪತ್ನಿಯಿಂದಾಗಿ ಜಯಲಲಿತಾರ ಮದುವೆಗೆ ತೀವ್ರ ಅಡ್ಡಿಯುಂಟಾಗಿತ್ತು. ನಾನಾ ಕಾರಣಗಳಿಂದ ಕೊನೆ ಕ್ಷಣದಲ್ಲಿ ಇಬ್ಬರ ಮದುವೆ ಮುರಿದು ಬಿದ್ದಿತ್ತು. ಆ ಹೊತ್ತಿಗೆ ಜಯಲಲಿತಾರ ಗರ್ಭದಲ್ಲಿ ಅಮೃತ ಇದ್ದರು. ಕೊನೆಗೆ ಚೆನ್ನೈನ ಮೈಲಾಪುರದಲ್ಲಿ ಅಮೃತಾರ ಜನನವಾಯ್ತು ಎಂದು ಹೇಳಿದ್ದಾರೆ.
ಆ ಇಬ್ಬರೇ ಸಾಕ್ಷಿ: ಜಯಲಲಿತಾರ ಸಂಬಂಧಿ ರಜಿನಿ ರವೀಂದ್ರನಾಥ್ ಮತ್ತು ಎಲ್.ಎಸ್.ಲಲಿತಾರನ್ನು ಕರೆಸಿಕೊಂಡಿದ್ದರು. ಆ ಇಬ್ಬರು ನನ್ನ ಜನನದ ಕಾರ್ಯವನ್ನು ನೋಡಿಕೊಂಡಿದ್ದಾರೆ. ಅವತ್ತು ಎಲ್ಲರೂ ಸೇರಿ ದೇವರ ಮುಂದೆ ಪ್ರಮಾಣ ಮಾಡಿದ್ದ ಕಾರಣಕ್ಕೆ ಗುಟ್ಟು ರಟ್ಟಾಗಿಲ್ಲ. ನಾನು ಹತ್ತಾರು ಬಾರಿ ಜಯಾಲಲಿತಾರ ಪೋಯಸ್ ಗಾರ್ಡನ್ ಭೇಟಿ ಕೊಟ್ಟಿದ್ದೇನೆ. ಅಮ್ಮ ನನ್ನನ್ನು ತುಂಬಾ ಅಕ್ಕರೆಯಿಂದ ನೋಡಿಕೊಂಡ್ರು. ಬೇಕಿದ್ದಕ್ಕಿಂತ ಹೆಚ್ಚಾಗಿ ನನ್ನ ಜೋಪಾನ ಮಾಡಿದ್ದಾರೆ. ನನ್ನ ಹೆಸರಿನಲ್ಲಿ ಜಯಲಿಲಿತಾ ಚಿನ್ನ ಮತ್ತು ಡೈಮಂಡ್ ಆಭರಣಗಳನ್ನು ಖರೀದಿ ಮಾಡಿದ್ದಾರೆ. ಹಲವು ಕಡೆ ಆಸ್ತಿಗಳನ್ನು ನನಗೆ ಖರೀದಿ ಮಾಡಿರೋ ಬಗ್ಗೆ ಹತ್ತಾರು ಬಾರಿ ಹೇಳಿದ್ದಾರೆ ಎಂದು ಅಮೃತಾ ಹೇಳಿದ್ದಾರೆ.
https://www.youtube.com/watch?v=n_5kQ-hV6eY
https://www.youtube.com/watch?v=hg7er083YCg