ಭೋಪಾಲ್: ಭಾರತೀಯ ವಾಯುಪಡೆಯ ಅಪಾಚಿ ಹೆಲಿಕಾಪ್ಟರ್ (Apache Helicopter) ಸೋಮವಾರ ಮಧ್ಯಪ್ರದೇಶದ (Madhya Pradesh) ಭಿಂಡ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
An Apache AH-64 helicopter of the IAF carried out a precautionary landing near Bhind, during routine operational training. All crew and the aircraft are safe. The rectification party has reached the site. pic.twitter.com/hhd6wSNgT2
— Indian Air Force (@IAF_MCC) May 29, 2023
Advertisement
ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮುನ್ನೆಚ್ಚರಿಕೆಯಾಗಿ ಪೈಲಟ್ ಲ್ಯಾಂಡಿಂಗ್ ಮಾಡಿದ್ದಾರೆ. ಪೈಲಟ್ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ ಎಂದು ತಿಳಿಸಿರುವ ಅಧಿಕಾರಿಗಳು ಶೀಘ್ರದಲ್ಲೇ ಹೆಲಿಕಾಪ್ಟರ್ ಹಾರಾಟಕ್ಕೆ ಸಿದ್ಧವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ
Advertisement
Advertisement
IAFನ ಅಪಾಚಿ AH-64 ಹೆಲಿಕಾಪ್ಟರ್ ಎಂದಿನಂತೆ ಕಾರ್ಯಾಚರಣೆ ತರಬೇತಿ ಸಮಯದಲ್ಲಿ ಭಿಂಡ್ ಬಳಿ ತುರ್ತು ಭೂಸ್ಪರ್ಶ ಮಾಡಿತು. ಹೆಲಿಕಾಪ್ಟರ್ ಹಾಗೂ ಅದರಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದು, ತಾಂತ್ರಿಕ ತಂಡ ಸ್ಥಳಕ್ಕೆ ತಲುಪಿದೆ ವಾಯುಪಡೆ ಟ್ವೀಟ್ ಮೂಲಕ ತಿಳಿಸಿದೆ. ಇದನ್ನೂ ಓದಿ: Gangwar: ಗುಂಡಿನ ದಾಳಿಗೆ ಪಂಜಾಬ್ ಮೂಲದ ಗ್ಯಾಂಗ್‌ಸ್ಟರ್ ಬಲಿ
Advertisement
AH-64 ಅಪಾಚಿ ವಿಶ್ವದ ಅತ್ಯಂತ ಸುಧಾರಿತ ಯುದ್ಧ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. ಭಾರತೀಯ ವಾಯುಪಡೆಯು 22 AH-64E ಅಪಾಚಿ ಹೆಲಿಕಾಪ್ಟರ್‌ಗಳನ್ನ ಹೊಂದಿದೆ. 2022ರಲ್ಲಿ ಬೋಯಿಂಗ್ ಭಾರತೀಯ ಸೇನೆಗೆ ಇನ್ನೂ 6 ಹೆಲಿಕಾಪ್ಟರ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.