ನವದೆಹಲಿ: ಭಾರತೀಯ ವಾಯುಪಡೆಯ (IAF) ಅವಳಿ ಆಸನಗಳ ಮಿರಾಜ್-2000 ಯುದ್ಧ ವಿಮಾನವು (Mirage 2000 fighter aircraft) ದೈನಂದಿನ ತರಬೇತಿಯಲ್ಲಿದ್ದಾಗ ಪತನಗೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಪುರಿ (Shivpuri) ಜಿಲ್ಲೆಯ ನರ್ವಾರ ತಹಸಿಲ್‌ನ ದಬ್ರಸಾನಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹೊಲದಲ್ಲಿ ಜೆಟ್ ಪತನವಾದ ಬಳಿಕ ಸುಟ್ಟು ಕರಕಲಾಗಿದೆ. ಸದ್ಯ ಸ್ಥಳೀಯರ ಸಹಾಯದಿಂದ ಇಬ್ಬರು ಪೈಲಟ್‌ಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ಪತನಕ್ಕೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್ ಗುಡ್‌ಬೈ
Advertisement
Advertisement
ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿಸಿದ ಮಿರಾಜ್-2000 ಫೈಟರ್ ಜೆಟ್, ಮೊದಲ ಬಾರಿಗೆ 1978 ರಲ್ಲಿ ಹಾರಾಟ ನಡೆಸಿತ್ತು. ಫ್ರೆಂಚ್ ಏರ್ ಫೋರ್ಸ್ ಇದನ್ನು 1984 ರಲ್ಲಿ ಸೇನೆಗೆ ಸೇರ್ಪಡೆಗೊಳಿಸಿದ ನಂತರ 600 ಮಿರಾಟ್-2000 ಜೆಟ್‌ಗಳನ್ನ ಉತ್ಪಾದಿಸಲಾಯಿತು. ಈ ಪೈಕಿ ಅರ್ಧದಷ್ಟು ವಿಮಾನಗಳನ್ನ ಭಾರತ ಸೇರಿದಂತೆ 8 ದೇಶಗಳಿಗೆ ರಫ್ತು ಮಾಡಲಾಯಿತು. ಮಿರಾಜ್-2000 ಆವೃತ್ತಿಯಲ್ಲಿ ಒಂಟಿ ಆಸನಗಳ ಜೆಟ್‌ಗಳೂ ಸಹ ಇವೆ.
Advertisement
Advertisement
ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಪಡೆಗೆ ಗೆಲುವು ತಂದುಕೊಡುವಲ್ಲಿ ಮಿರಾಜ್-2000 ಯುದ್ಧ ವಿಮಾನಗಳು ಪ್ರಮುಖ ಪಾತ್ರ ಸಹ ವಹಿಸಿದ್ದವು. ಅಲ್ಲದೇ 2019ರ ಸರ್ಜಿಕಲ್ ಸ್ಟ್ರೈಕ್‌ನಲ್ಲೂ ಇದೇ ಆವೃತ್ತಿಯ ವಿಮಾನಗಳ ಮೂಲಕ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ದಾಳಿ ನಡೆಸಲಾಗಿತ್ತು. ಇದನ್ನೂ ಓದಿ: ವಾಲ್ಮೀಕಿ ಹಗರಣ | ಸಿಬಿಐ ತನಿಖೆ ಚುರುಕು ಮೂವರು ಆರೋಪಿಗಳಿಗೆ ನೋಟಿಸ್