ಬಿಕಾನೇರ್: ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವೊಂದು ಇಂದು ರಾಜಸ್ಥಾನದ ಬಿಕಾನೇರ್ ಪ್ರದೇಶದ ಬಳಿ ಪತನವಾಗಿದ್ದು, ಪ್ಯಾರಾಚ್ಯೂಟ್ ಸಹಾಯದಿಂದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಕಾನೇರ್ ಪಟ್ಟಣದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಶೋಭಾಸರ್ ಕಿ ಧನಿ ಎಂಬ ಪ್ರದೇಶದಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದೆ. ಮಿಗ್-21 ಟೇಕ್ ಆಫ್ ಆಗುವ ಸಂದರ್ಭದಲ್ಲಿ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಬಹುಶಃ ಇದರಿಂದಲೇ ವಿಮಾನದ ತಾಂತ್ರಿಕ ವ್ಯವಸ್ಥೆಯಲ್ಲಿ ಏರುಪೇರಾಗಿ ವಿಮಾನ ಪತನವಾಗಿದೆ ಎಂದು ಐಎಎಫ್ ಅಧಿಕಾರಿಗಳು ಶಂಕಿಸಿದ್ದಾರೆ. ಈ ವಿಮಾನವನ್ನು ರಾಜಸ್ತಾನದಲ್ಲಿರುವ ಐಎಎಫ್‍ನ ನಾಲ್ ವಿಮಾನ ನಿಲ್ದಾಣದಿಂದ ಗಸ್ತು ಕಾರ್ಯಚರಣೆಗೆಂದು ತೆಗೆದುಕೊಂಡು ಹೋಗಲಾಗಿತ್ತು.
Advertisement
Advertisement
ವಿಮಾನ ಪತನಗೊಳ್ಳುವ ವಿಷಯ ಅರಿವಿಗೆ ಬರುತ್ತಿದಂತೆ ಮೊದಲು ಪೈಲಟ್ ಪ್ಯಾರಾಚ್ಯೂಟ್ ನೆರವಿನಿಂದ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ. ಶೋಭಾಸರ್ ಕಿ ಧನಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಬಿಕಾನೇರ್‍ನ ಎಸ್‍ಪಿ ಪ್ರದೀಪ್ ಮೋಹನ್ ಶರ್ಮಾ ಅವರು ತಿಳಿಸಿದ್ದಾರೆ.
Advertisement
ಈ ಬಗ್ಗೆ ಐಎಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಂದು ರಾಜಸ್ತಾನದ ಬಿಕಾನೇರ್ ಬಳಿ ಮಿಗ್-21 ಯುದ್ಧ ವಿಮಾನ ಗಸ್ತು ತಿರುಗುತ್ತಿತ್ತು. ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ತಾಂತ್ರಿಕ ದೋಷ ಉಂಟಾಗಿ ವಿಮಾನ ಪತನವಾಗಿರಬಹುದು. ಈ ಬಗ್ಗೆ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
Advertisement
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ರಾಷ್ಟ್ರಗಳು ಗಡಿಯಲ್ಲಿ ಒಬ್ಬರ ಮೇಲೊಬ್ಬರು ದಾಳಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲೇ ಮಿಗ್-21 ಯುದ್ಧ ವಿಮಾನ ಪತನವಾಗಿದೆ. ಅಲ್ಲದೆ ಕಳೆದ ಫೆ. 27 ರಂದು ಪಾಕ್ ಹಾಗೂ ಭಾರತದ ಜೆಟ್‍ಗಳ ನಡುವೆ ಜಮ್ಮು-ಕಾಶ್ಮೀರಕ್ಕಾಗಿ ಡಾಗ್‍ಫೈಟ್ ಕೂಡ ನಡೆದಿತ್ತು. ಈ ಸಂದರ್ಭದಲ್ಲಿ ಮಿಗ್-21 ಚಲಾಯಿಸುತ್ತಿದ್ದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿತ್ತು.
Visuals: MiG-21 aircraft on a routine mission crashed today after getting airborne from Nal near Bikaner. The pilot of the aircraft ejected safely. Court of inquiry will investigate the cause of the accident. #Rajasthan pic.twitter.com/2HnWciPEB8
— ANI (@ANI) March 8, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv