ಜೈಷ್ ಉಗ್ರರ 3 ಅಲ್ಫಾ ಕಂಟ್ರೋಲ್ ರೂಂಗಳು ಉಡೀಸ್-ಮಿರಾಜ್ ಯುದ್ಧ ವಿಮಾನ ಬಳಸಿದ್ದು ಯಾಕೆ..?

Public TV
1 Min Read
air attack aaa

ನವದೆಹಲಿ: ಇಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ಭಾರತೀಯ ವಾಯು ಸೇನೆ ಕಾಶ್ಮೀರ ಗಡಿ ಭಾಗದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ಜೈಷ್ ಉಗ್ರರ ಮೂರು ಅಲ್ಫಾ ಕಂಟ್ರೋಲ್ ರೂಂಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಏರ್ ಸರ್ಜಿಕಲ್ ಸ್ಟ್ರೈಕ್ ಬಳಸಿಕೊಳ್ಳಲಾಗಿದೆ.

ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ. ಮೂರು ದಾಳಿಯಲ್ಲಿ ಭಾರತೀಯ ವಾಯುಸೇನೆ ಯಶಸ್ವಿಯಾಗಿದೆ. ಈಗಾಗಲೇ ದಾಳಿಯ ಬಗ್ಗೆ ಪ್ರಧಾನಿಗಳಿಗೆ ಎನ್‍ಎಸ್‍ಎ ಮುಖ್ಯಸ್ಥ ಅಜಿತ್ ಧೋವಲ್ ವಿವರಣೆ ನೀಡಿದ್ದಾರೆ. ದಾಳಿಯ ಬಳಿಕ ಭಾರತದ ಮುಂದಿನ ನಡೆ ಹೇಗಿರಬೇಕು ಎಂಬುದನ್ನು ಮೋದಿ ಅವರು ಅಜಿತ್ ಧೋವಲ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

pak attack 2

ಮಿರಾಜ್-2000 ಯಾಕೆ..?
ಮೊದಲ ಬಾರಿಗೆ ಏರ್ ಫೋರ್ಸ್ ಬಳಕೆ ಮಾಡಿದ್ದು ಒಂದು ಸಾರಿ ಟಾರ್ಗೆಟ್ ಫಿಕ್ಸ್ ಮಾಡಿದ್ರೆ ಮಿರಾಜ್ ತನ್ನ ಗುರಿಯನ್ನು ತಪ್ಪಲ್ಲ. ಮಿರಾಜ್ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಯುದ್ಧ ವಿಮಾನವಾಗಿದೆ ಎಂದು ನಿವೃತ್ತ ಏರ್ ಮಾರ್ಷಲ್ ಎನ್.ವಿ.ತ್ಯಾಗಿ ಹೇಳಿದ್ದಾರೆ.

ಭಾರತದ ಏರ್ ಸರ್ಜಿಕಲ್ ಸ್ಟ್ರೈಕ್ ನಿಂದ ಸುಮಾರು 200-300 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧಿಕೃತ ಅಂಕಿ ಅಂಶಗಳು ಹೊರಬರಬೇಕಿದೆ. ಬಾಲಕೋಟ, ಮುಜಾಫರ್ ಬಾದ್, ಚಾಕೋಟಿಯಲ್ಲಿರುವ ಮೂರು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ.

pak attack 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *