ನವದೆಹಲಿ: ಭಾರತೀಯ ವಾಯುಸೇನೆ ಈಗಲೂ 44 ವರ್ಷ ಹಳೆಯ ಮಿಗ್ 21 ಫೈಟರ್ ಜೆಟ್ ವಿಮಾನವನ್ನು ಬಳಕೆ ಮಾಡುತ್ತದೆ. ಇಷ್ಟು ವರ್ಷ ಹಳೆಯದಾದ ಕಾರನ್ನು ಯಾರೂ ಬಳಸಲಾರರು ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಆಧುನೀಕರಣ ವಿಚಾರಕ್ಕೆ ಸಂಬಂಧಿಸಿದ ಮಾತನಾಡಿದ ಅವರು, 44 ವರ್ಷ ಹಳೆಯ ಗಾಡಿಯನ್ನು ಈಗ ಯಾರು ಓಡಿಸಲಾರರು. ಆದರೆ ನಾವು ಈಗಲೂ 44 ವರ್ಷದ ಮಿಗ್ ವಿಮಾನವನ್ನು ಹಾರಿಸುತ್ತಿದ್ದೇವೆ ಎಂದು ತಿಳಿಸಿದರು.
Advertisement
Advertisement
ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅವರು, ಶತ್ರುಗಳ ಚಲನೆ ಇರಲಿ ಅಥವಾ ಇಲ್ಲದಿರಲಿ ವಾಯುಸೇನೆ ಯಾವಾಗಲೂ ಗಡಿಯಲ್ಲಿ ಎಚ್ಚರದಲ್ಲಿ ಇರುತ್ತದೆ. ನಾಗರಿಕ ವಿಮಾನಗಳು ರೇಖೆಯನ್ನು ದಾಟಿದರೂ ಸಹ ನಾವು ನಿಯಂತ್ರಣ ಸಾಧಿಸುತ್ತೇವೆ ಎಂದು ತಿಳಿಸಿದರು.
Advertisement
ಬಾಲಕೋಟ್ ಏರ್ ಸ್ಟ್ರೈಕ್ ಬಳಿಕ ಪಾಕ್ ವಾಯು ಸೇನೆ ಭಾರತಕ್ಕೆ ನುಗ್ಗಿತ್ತು. ಈ ವೇಳೆ ಭಾರತದ ವಿಮಾನಗಳು ಪ್ರತಿದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅಭಿನಂದನ್ ಚಲಾಯಿಸುತ್ತಿದ್ದ ಮಿಗ್ 21 ಬೈಸನ್ ಮತ್ತು ಪಾಕಿಸ್ತಾನ ಎಫ್ -16 ಯುದ್ಧ ವಿಮಾನದ ನಡುವೆ ಡಾಗ್ ಫೈಟ್ ನಡೆದಿತ್ತು. ಕೊನೆಗೆ ಅಭಿನಂದನ್ ವಿಮಾನದಿಂದ ಕ್ಷಿಪಣಿಯನ್ನು ಹಾರಿಸುವ ಎಫ್ -16 ವಿಮಾನವನ್ನು ಹೊಡೆದು ಹಾಕಿದ್ದರು. ಇದನ್ನೂ ಓದಿ: ಆರ್ 73 ಸೆಲೆಕ್ಟ್ ಮಾಡಿದ್ದೇನೆ : ಅಭಿನಂದನ್ ಕೊನೆಯ ರೇಡಿಯೋ ಸಂದೇಶ – ಡಾಗ್ ಫೈಟ್ ಹೇಗೆ ನಡೆಯಿತು?
Advertisement
ಅಭಿನಂದನ್ ಅವರು ಹಾರಿಸುತ್ತಿದ್ದ ವಿಮಾನ ರಷ್ಯಾ ನಿರ್ಮಿತ ಮಿಗ್ 21 ಬೈಸನ್. ಎಫ್ 16ಗೆ ಹೋಲಿಕೆ ಮಾಡಿದರೆ ಇದರ ಸಾಮರ್ಥ್ಯ ತುಂಬಾ ಕಡಿಮೆ. ಅಮೆರಿಕದ ಜನರಲ್ ಡೈನಾಮಿಕ್ಸ್ ಲಾಕ್ ಹಿಡ್ ಮಾರ್ಟಿನ್ ಕಂಪನಿ ಎಫ್ 16 ಫೈಟಿಂಗ್ ಫಾಲ್ಕನ್ 1974 ರಲ್ಲಿ ತಯಾರಿಸಿದ್ದು ಸದ್ಯ ಜಗತ್ತಿನ ಅತ್ಯುತ್ತಮ ವಿಮಾನಗಳ ಪೈಕಿ ಒಂದಾಗಿದೆ.
ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟ 874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಸದ್ಯ ಭಾರತದಲ್ಲಿ 122 ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸಿದ್ದರು.
2016 ರಲ್ಲಿ 110 ಮಿಗ್ 21 ಜೆಟ್ ವಿಮಾನಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ಮಲ್ಟಿ ಮೋಡ್ ರೇಡಾರ್, ಉತ್ತಮ ಏವಿಯಾನಿಕ್ಸ್, ಸಂವಹನ ವ್ಯವಸ್ಥೆಯನ್ನು ನೀಡಲಾಗಿತ್ತು.