LatestMain PostNational

ವಿಮಾನಕ್ಕೆ ಬಾಂಬ್ ಬೆದರಿಕೆ- ಯುದ್ಧ ವಿಮಾನಗಳಿಂದ ಭದ್ರತೆ

ನವದೆಹಲಿ: ಭಾರತದ ವಾಯು ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಇರಾನ್ (Iran) ಮೂಲದ ಪ್ರಯಾಣಿಕ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇರಾನ್‍ನ ಟೆಹ್ರಾನ್‍ (Tehran) ನಿಂದ ಚೀನಾದ ಗುವಾಂಗ್‍ಝೌಗೆ ತೆರಳುತ್ತಿದ್ದ ವಿಮಾನಕ್ಕೆ ಬೆದರಿಕೆ ಬಂದಿದ್ದು, ಭಾರತದ ವಾಯುಪಡೆಯ ಯುದ್ಧ ವಿಮಾನಗಳ ಭದ್ರತೆಯೊಂದಿಗೆ ಭಾರತದ ವಾಯು ಗಡಿಯನ್ನು ದಾಟಿಸಲಾಗಿದೆ.

ಪ್ರಯಾಣಿಕ ವಿಮಾನ ಭಾರತದ ವಾಯು ಗಡಿ ಗಡಿಯಲ್ಲಿ ಹಾರಾಟದ ವೇಳೆ ಪೈಲಟ್‍ (Pilot) ಗೆ ಬಾಂಬ್ ಬೆದರಿಕೆ ಬಂದಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೈಲಟ್ ತುರ್ತು ಲ್ಯಾಂಡಿಂಗ್‍ಗಾಗಿ ದೆಹಲಿಯ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನ ಸಂಪರ್ಕಿಸಿದ್ದಾರೆ. ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟಣೆ ಹೆಚ್ಚಿದ ಹಿನ್ನೆಲೆ ಜೈಪುರ (Jaipur) ದಲ್ಲಿ ಲ್ಯಾಂಡ್ (Landing) ಮಾಡಲು ದೆಹಲಿ ಎಟಿಸಿ ಸೂಚಿಸಿದೆ.

ಆದರೆ ಜೈಪುರ್ ನಲ್ಲಿ ಲ್ಯಾಂಡ್ ಮಾಡಲು ಪೈಲಟ್ ನಿರಾಕರಿಸಿ ಹಾರಾಟ ಮುಂದುವರಿಸಿದ ಹಿನ್ನೆಲೆ ಇರಾನ್ ವಿಮಾನಕ್ಕೆ ವಾಯು ಪಡೆಯ ಯುದ್ಧ ಪಡೆಯ ವಿಮಾನಗಳ ಮೂಲಕ ಭದ್ರತೆ ನೀಡಲಾಯಿತು. Su-30 MKI ಎರಡು ಫೈಟರ್ ಜೆಟ್‍ಗಳು ಅಗತ್ಯ ಭದ್ರತೆ ನೀಡುವ ಮೂಲಕ ಭಾರತದ ವಾಯು ಗಡಿಯನ್ನು ದಾಟಿಸಿವೆ. ಇದನ್ನೂ ಓದಿ: ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್‌ ಎಂದಿದ್ದ ಕೃಷಿ ಸಚಿವ ರಾಜೀನಾಮೆ

ಬಾಂಬ್ ಬೆದರಿಕೆ ನಿಜವೇ, ಹುಸಿ ಬಾಂಬ್ ಬೆದರಿಕೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ, ಈ ಹಿನ್ನೆಲೆಯಲ್ಲಿ ವಿಮಾನದ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ವಿಮಾನ ಹಾರುವ ಎಲ್ಲ ಪ್ರದೇಶಗಳಲ್ಲಿ ಭದ್ರತೆ ಏಜೆನ್ಸಿಗಳು ಮೇಲ್ವಿಚಾರಣೆ ಮಾಡುತ್ತಿವೆ.

Live Tv

Leave a Reply

Your email address will not be published. Required fields are marked *

Back to top button