ಚೆನ್ನೈ: ನಾವು ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದೆವು. ಬಂದು ನೋಡುವಾಗ ಮನೆಯ ಹತ್ತಿರ ಹೆಲಿಕಾಪ್ಟರ್ ಬಿದ್ದು ಮನೆಗೆ ಹಾನಿಯಾಗಿತ್ತು ಎಂದು ಮನೆ ಮಾಲೀಕ ಜೈಶಂಕರ್ ಪಬ್ಲಿಕ್ ಟಿವಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
Advertisement
ಹೆಲಿಕಾಪ್ಟರ್ ದುರಂತದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನಮ್ಮ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದೆ ಬಳಿಕ ಹೆಲಿಕಾಪ್ಟರ್ ಬಿದ್ದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದೆ. ನಂತರ ಬಂದಾಗ ಕಾಡಿನಲ್ಲಿ ಅಂದುಕೊಂಡಿದ್ದೆ. ನಂತರ ಜನ ಇಲ್ಲೇ ಹತ್ತಿರ ಇರುವ ಕಾಡಿನಲ್ಲಿ ಶಬ್ದಕೇಳಿ ಬಂತು ಎಂದರು. ನಾನು ಮನೆ ಬಳಿ ಬಂದು ನೋಡಿದಾಗ ಸೇನಾ ಅಧಿಕಾರಿಗಳೆಲ್ಲ ಬಂದಿದ್ದರು. ಅವರಿಗೆ ಮನೆಯ ಬಾಗಿಲು ತೆರೆದು ಅಲ್ಲಿ ಇರಲು ತಿಳಿಸಿದೆ. ನನ್ನನ್ನು ಇಲ್ಲಿ ಇರಬೇಡಿ ನಾವು ಇರುತ್ತೇವೆ. ನೀವು ಮೇಲೆ ಇರಿ ಎಂದರು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಪಿನ್ ರಾವತ್ ಕುಡಿಯಲು ನೀರು ಕೇಳಿದ್ದರು- ಪ್ರತ್ಯಕ್ಷದರ್ಶಿ ಮಾತು
Advertisement
Advertisement
ನಾನು ರಾತ್ರಿ ಎಲ್ಲ ಮೇಲ್ಗಡೆ ಇದ್ದೆ. ನಂತರ ಅಣ್ಣನ ಮನೆಯಲ್ಲಿ ಮಲಗಿ ಇಂದು ಬೆಳಿಗ್ಗೆ ಎದ್ದು ವಾಪಸ್ ಬಂದೆ. ಹೆಲಿಕಾಪ್ಟರ್ ಬಿದ್ದಾಗ ನಾವೆಲ್ಲರೂ ಕೆಲಸಕ್ಕೆ ಹೋಗಿದ್ದೆವು. ಮನೆಗೆ ಹಾನಿಯಾಗಿದೆ. ಇದೀಗ ಅಲ್ಲಿ ಸೇನಾ ಅಧಿಕಾರಿಗಳು ಇದ್ದಾರೆ ಮನೆಯನ್ನು ಸರಿಪಡಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಇಂದು ನಮ್ಮನ್ನು ಯಾರನ್ನು ಕೂಡ ಮನೆ ಬಳಿ ತೆರಳಲು ಬಿಟ್ಟಿಲ್ಲ ಎಂದು ಮಾಹಿತಿ ಕೊಟ್ಟರು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ!
Advertisement
ನಿನ್ನೆ ನಡೆದ ಹೆಲಿಕಾಪ್ಟರ್ ದುರಂತದಿಂದ ಸೇನಾ ದಂಡನಾಯಕ ಬಿಪಿನ್ ರಾವತ್ ಸೇರಿ 13 ಮಂದಿ ಹುತಾತ್ಮರಾಗಿದ್ದಾರೆ. ಕ್ಯಾಪ್ಟನ್ ವರುಣ್ ಸಿಂಗ್ ಒಬ್ಬರು ತೀವ್ರ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಕ್ಯಾಪ್ಟನ್ ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ