ಸೇನಾ ಹೆಲಿಕಾಪ್ಟರ್ ಪತನ: ಸರ್ಕಾರಿ ಸೇವೆಗೆ ಸೇರಿದ ಪ್ರದೀಪ್ ಪತ್ನಿ

Public TV
1 Min Read
kerala wife of pradeep

ತಿರುವನಂತಪುರಂ: ಸೇನಾ ಹೆಲಿಕಾಪ್ಟರ್ ಪತನಗೊಂಡು ಹುತಾತ್ಮರಾಗಿದ್ದ ಜೂನಿಯರ್ ವಾರಂಟ್ ಅಧಿಕಾರಿ ಪ್ರದೀಪ್ ಅವರ ಪತ್ನಿ ಕೇರಳದಲ್ಲಿ ಸರ್ಕಾರಿ ಸೇವೆಗೆ ಸೇರಿದ್ದಾರೆ.

ಕಳೆದ ಡಿಸೆಂಬರ್ 8 ರಂದು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಇತರ ರಕ್ಷಣಾ ಅಧಿಕಾರಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಜೂನಿಯರ್ ವಾರಂಟ್ ಅಧಿಕಾರಿ ಎ. ಪ್ರದೀಪ್ ಮೃತಪಟ್ಟಿದ್ದರು. ಈಗ ಪ್ರದೀಪ್ ಅವರ ಪತ್ನಿ ಶ್ರೀಲಕ್ಷ್ಮಿ ಅವರು ಸೋಮವಾರ ತ್ರಿಶ್ಯೂರ್‌ನಲ್ಲಿರುವ ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸಲು ಸೇರಿದ್ದಾರೆ ಎಂದು ಕಂದಾಯ ಸಚಿವ ಕೆ ರಾಜನ್ ತಿಳಿಸಿದರು.

CDS Bipin Rawat

ದುರಂತದ ಬಳಿಕ ಡಿಸೆಂಬರ್ 15 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರೀಲಕ್ಷ್ಮಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ನೀಡಲು ನಿರ್ಧರಿಸಲಾಗಿತ್ತು.

ತಾಲೂಕು ಕಚೇರಿಗೆ ಆಗಮಿಸಿದ ರಾಜನ್ ಅವರು, ಗುಮಾಸ್ತ ಹುದ್ದೆಗೆ ತನ್ನ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ಶ್ರೀಲಕ್ಷ್ಮಿಯನ್ನು ಬರಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ರಾಹುಲ್ ಗಾಂಧಿ ಮುಖಕ್ಕೆ ಧ್ವಜವನ್ನು ಎಸೆದ ವ್ಯಕ್ತಿ

ಹುದ್ದೆಗೆ ಬೇಕಾದ ಕೆಲ ಕಾಗದಗಳಿಗೆ ಸಹಿ ಮಾಡಿದ ನಂತರ ಲಕ್ಷ್ಮಿಯವರು ಕಣ್ಣೀರು ಹಾಕುತ್ತಾ ಮಾತನಾಡಿದ್ದು, ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿಸಿದ ಎಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ ಎಂದರು.

bipin rawat 1

ಶ್ರೀಲಕ್ಷ್ಮಿ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜ್ಯ ಸರ್ಕಾರವು ಅವರ ಕುಟುಂಬದ ಭರವಸೆ ಉಳಿಸಿಕೊಂಡಿದ್ದು, ಅವರಿಗೆ ಸರ್ಕಾರಿ ಕೆಲಸ ನೀಡಿದೆ ಎಂದು ರಾಜನ್ ಹೇಳಿದರು.

ಕೆಲಸದ ಹೊರತಾಗಿ, ರಾಜ್ಯ ಸರ್ಕಾರವು ಅವರಿಗೆ 5 ಲಕ್ಷ ರೂಪಾಯಿಗಳನ್ನು ನೀಡಿದ್ದು, ಪ್ರದೀಪ್ ಅವರ ತಂದೆ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಅವರ ವೈದ್ಯಕೀಯ ಚಿಕಿತ್ಸೆಗಾಗಿ 3 ಲಕ್ಷ ರೂಪಾಯಿಗಳನ್ನು ನೀಡಿದೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೂ ಕಾಲಿಟ್ಟ ಹಿಜಬ್, ಕೇಸರಿ ಶಾಲು ಫೈಟ್ – ವಿದ್ಯಾರ್ಥಿಗಳನ್ನ ಹೊರಹಾಕಿದ ಕಾಲೇಜು ಸಿಬ್ಬಂದಿ

38 ವರ್ಷದ ಪ್ರದೀಪ್ ಅವರ ತಂದೆ ಕೇರಳದ ಒಂದು ಕಂಪನಿಯಲ್ಲಿ ಕಾರ್ಮಿಕರಾಗಿದ್ದರು. ಪ್ರದೀಪ್ 2002 ರಲ್ಲಿ ಐಎಎಫ್‍ಗೆ ಸೇರಿದ ನಂತರ ಅವರ ತಂದೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *