ನವದೆಹಲಿ: ಜಮ್ಮು ಕಾಶ್ಮೀರದ ಹಾಗು ಪಂಜಾಬ್ ಗಡಿ ಪ್ರದೇಶದಲ್ಲಿ ಭಾರತ ವಾಯು ಪಡೆಯ ಯುದ್ಧ ವಿಮಾನಗಳು ಗುರುವಾರ ರಾತ್ರಿ ಸಮರಾಭ್ಯಾಸ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ರಾತ್ರಿಯ ವೇಳೆಯಲ್ಲಿ ಅಭ್ಯಾಸ ನಡೆದಿದ್ದು, ತುರ್ತು ಪರಿಸ್ಥಿತಿ ವೇಳೆ ತಕ್ಷಣ ದಾಳಿ ನಡೆಸುವ ಸಿದ್ಧತೆಯ ಉದ್ದೇಶದಿಂದ ಅಭ್ಯಾಸ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಐಎಎಫ್ ಕೆಲ ಯುದ್ಧ ವಿಮಾನಗಳು ಅಭ್ಯಾಸದಲ್ಲಿ ತೊಡಗಿತ್ತು. ಈ ವೇಳೆ ಸೇನೆ ಕಾಂಬಾಂಟ್ ಡ್ರಿಲ್ ನಡೆಸಿತ್ತು ಎಂಬ ಮಾಹಿತಿ ಲಭಿಸಿದೆ.
ಅಭ್ಯಾಸ ನಡೆಸಿದ ಪರಿಣಾಮ ಗಡಿ ಪ್ರದೇಶದ ಜನರು ಭಾರೀ ಶಬ್ದ ಕೇಳಿ ಬಂದಿದ್ದರಿಂದ ಜನರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಅಮೃತಸರ ಪೊಲೀಸರು, ಯಾವುದೇ ರೀತಿಯ ಅನಾಹುತ ನಡೆದಿಲ್ಲ. ಜನರು ಭಯಪಡುವ ಅಗತ್ಯವಿಲ್ಲ. ಗಾಳಿಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದ್ದರು.
ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು 1971ರ ಬಳಿಕ ಮೊದಲ ಬಾರಿಗೆ ವಾಯುಪಡೆಯನ್ನು ಬಳಕೆ ಮಾಡಲಾಗಿತ್ತು. ಈ ದಾಳಿಯ ಬಳಿಕ ಸೇನೆ ಅಭ್ಯಾಸದಲ್ಲಿ ತೊಡಗಿದೆ. ಆ ಬಳಿಕ ಐಎಎಫ್ ಯಾವುದೇ ಸಂದರ್ಭವನ್ನು ಎದುರಿಸಲು ಕೂಡ ಹೈ ಅಲರ್ಟ್ ಆಗಿದೆ.
ಪಾಕಿಸ್ತಾನದ ವಾಯು ಸೇನೆ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದ ಪರಿಣಾಮ ಪ್ರತಿದಾಳಿಗೆ ಮುಂದಾಗಿತ್ತು. ಆದರೆ ಪಾಕ್ ಸೇನೆಯ ಪ್ರಯತ್ನವನ್ನು ಭಾರತ ವಾಯುಸೇನೆ ಹಿಮ್ಮೆಟ್ಟಿತ್ತು. ಭಾರತ ಮಿಗ್ 29 ಜೆಟ್ ಪಾಕ್‍ನ ಎಫ್-16 ಅತ್ಯಾಧುನಿಕ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
Leave a Reply