ಜೈಪುರ: ರಾಜಾಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ (IAF) ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
ಇದು IAFನ ಮಿಗ್-21 ವಿಮಾನವಾಗಿದ್ದು, ಜಿಲ್ಲೆಯ ಬೇಟೂದಲ್ಲಿನ ಭೀಮಡಾ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ಬಾರ್ಮರ್ ಜಿಲ್ಲೆಯ ಗ್ರಾಮದಲ್ಲಿ ಅಲ್ಲಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಲೋಕ್ ಬಂಡು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ
#WATCH | Rajasthan: A MiG-21 fighter aircraft of the Indian Air Force crashed near Barmer district. Further details regarding the pilots awaited pic.twitter.com/5KfO24hZB6
— ANI (@ANI) July 28, 2022
ಸದ್ಯ ವಿಮಾನ ಪತನಗೊಂಡಿರುವ ಬಗ್ಗೆ ಐಎಎಫ್‌ನಿಂದ ಯಾವುದೇ ಅಧಿಕೃತ ಮಾಹಿತಿಗಳೂ ಲಭ್ಯವಾಗಿಲ್ಲ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಐಎಎಫ್ ಮುಖ್ಯಸ್ಥರೊಂದಿಗೆ ಮಾತನಾಡಿ ಅಪಘಾತದ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ಐಎಎಫ್ ಮುಖ್ಯಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಹಮ್ಮದ್ ಫಾಜಿಲ್ ಬರ್ಬರ ಹತ್ಯೆ- ಮಂಗಳೂರಿನ ಬಜ್ಬೆ, ಪಣಂಬೂರು, ಸುರತ್ಕಲ್, ಮುಲ್ಕಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಐಎಫ್‌ಎಸ್ 1963ರಲ್ಲಿ `MiG-21‘ ಅನ್ನು ಪಡೆದುಕೊಂಡಿತು. ಇದು ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಸೋವಿಯತ್ ಮೂಲದ ಸೂಪರ್‌ಸಾನಿಕ್ ಫೈಟರ್‌ಗಳ 874 ರೂಪಾಂತರಗಳನ್ನು ಹಂತಹಂತವಾಗಿ ಸೇರಿಸಿತು. ಆದರೆ ಕಳೆದ 6 ದಶಕಗಳಲ್ಲಿ ನಡೆದ 400ಕ್ಕೂ ಹೆಚ್ಚು `MiG-21‘ನ ಅಪಘಾತಗಳಲ್ಲಿ 200 ಪೈಲಟ್‌ಗಳು ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.