ನವದೆಹಲಿ: ಭಾರತೀಯ ವಾಯುಪಡೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ (ಎಎಚ್-64 ಇ) ಶುಕ್ರವಾರ ಸೇರ್ಪಡೆಗೊಂಡಿದೆ. ಪರಿಣಾಮ ಸೇನೆಯ ಬಲ ಮತ್ತಷ್ಟು ಹೆಚ್ಚಾಗಿದೆ.
ಇತ್ತೀಚೆಗೆ ಅಮೆರಿಕ ಮೂಲಕ ಬೋಯಿಂಗ್ ಕಂಪನಿಯ ಚಿನೂಕ್ ಹೆಲಿಕಾಪ್ಟರ್ ಗಳು ಕೂಡ ವಾಯಪಡೆಗೆ ಸೇರ್ಪಡೆಯಾಗಿತ್ತು. ಸದ್ಯ ಅಪಾಚೆ ಗಾರ್ಡಿಯನ್ ಆಗಮನದಿಂದ ಭಾರತ ವಾಯುಪಡೆಗೆ ಹೆಚ್ಚಿನ ಬಲ ಲಭಿಸಿದೆ. ಬೋಯಿಂಗ್ ನಿರ್ಮಾಣ ಕೇಂದ್ರದಲ್ಲಿ ಅಮೆರಿಕದ ಅಧಿಕಾರಿಗಳಿಂದ ಭಾರತ ವಾಯುಸೇನೆಯ ಅಧಿಕಾರಿಗಳು ಹೆಲಿಕಾಪ್ಟರ್ ಹಸ್ತಾಂತರ ಮಾಡಿದ್ದಾರೆ.
Advertisement
The addition of AH-64 E (I) helicopter is a significant step towards modernisation of IAF’s helicopter fleet. The helicopter has been customized to suit IAF’s future requirements and would have significant capability in mountainous terrain. pic.twitter.com/prN3vjx4dH
— Indian Air Force (@IAF_MCC) May 11, 2019
Advertisement
ಏರ್ ಮಾರ್ಷಲ್ ಎ.ಎಸ್.ಬುಟೋಲಾ ಅವರು ಮೊದಲ ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಪಡೆಯ ಪರವಾಗಿ ಪಡೆದುಕೊಂಡರು. ಅಮೆರಿಕಾದ ಅರಿಜೋನಾದಲ್ಲಿ ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ ಅನ್ನು ನಿರ್ಮಿಸಲಾಗುತ್ತಿದೆ.
Advertisement
2015ರಲ್ಲಿ ಭಾರತ ಸರ್ಕಾರ 13,952 ಕೋಟಿ ವೆಚ್ಚದಲ್ಲಿ ಅಪಾಚೆ ಹೆಲಿಕಾಪ್ಟರ್ ಗಳ ಖರೀದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 2017ರಲ್ಲಿ ರಕ್ಷಣಾ ಇಲಾಖೆ 6 ಅಪಾಚೆ ಹೆಲಿಕಾಪ್ಟರ್ ಗಳನ್ನು ಶಸ್ತ್ರಾಸ್ತ್ರ ಸಮೇತ ಖರೀದಿ ಮಾಡಲು 4,168 ಕೋಟಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. 2020ರ ಮಾರ್ಚ್ ವೇಳೆಗೆ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್ ಗಳು ಸೇರ್ಪಡೆ ಆಗಲಿದೆ.
Advertisement
The first batch of the helicopters is scheduled to be shipped to India by July this year.
Selected aircrew & ground crew have undergone training at the training facilities at US Army base Fort Rucker, Alabama.
Read more on https://t.co/iGT8y5kfPL pic.twitter.com/pHRArBCjbz
— Indian Air Force (@IAF_MCC) May 11, 2019
ವಿಶೇಷತೆ ಏನು?
ಪ್ರತಿಕೂಲ ಹವಾಮಾನದಲ್ಲಿಯೂ ಕೂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಸಾಮಥ್ರ್ಯವನ್ನು ಎಎಚ್-64 ಇ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಹೆಲಿಕಾಪ್ಟರ್ ಗಳು ಸೇನೆಯಲ್ಲಿ ಭೂ ದಾಳಿಗಳನ್ನು ಎದುರಿಸುವ, ಭೂ ಸೇನೆಯ ಜೊತೆ ಹೊಂದಿಕೊಂಡು ಕೆಲಸ ಮಾಡುವ ವಿಶೇಷ ಸಾಮಾರ್ಥ್ಯ ಹೊಂದಿವೆ.
ಆಧುನಿಕ ಕ್ಯಾಮೆರಾ, ಡಾಟಾ ಉಪಕರಣಗಳು ವೈರಿಗಳ ಶಸ್ತ್ರಾಸ್ತ್ರಗಳ ಗುರುತು ಪತ್ತೆ, ವೈರಿಗಳ ಚಲನವಲನಗಳನ್ನು ಪತ್ತೆ ಹಚ್ಚೆ ಶೀಘ್ರವಾಗಿ ರವಾನಿಸುತ್ತವೆ. ಅಲ್ಲದೇ ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ತಾಂತ್ರಿಕತೆ ಹೊಂದಿವೆ. ಅಲ್ಲದೇ ಸ್ಟಿಂಗರ್ ಏರ್ ಟು ಏರ್ ಕ್ಷಿಪಣಿಗಳು, ಹೆಲ್‍ಫೈರ್ ಲಾಂಗ್‍ಬೋ ಏರ್ ಟು ಗ್ರೌಂಡ್ ಕ್ಷಿಪಣಿಗಳು, ಗನ್‍ಗಳು ಮತ್ತು ರಾಕೆಟ್‍ಗಳನ್ನು ಹೊಂದಿವೆ. ವಿಶೇಷವಾಗಿ ಪರ್ವತ ಪ್ರದೇಶದಲ್ಲಿ ಕಾರ್ಯನಿರ್ವಹಸಿಲು ಸಹಕಾರಿಯಾಗಿವೆ.
ಅಮೆರಿಕ ಸೇನೆ ಈಗಾಗಲೇ ಈ ಹೆಲಿಕಾಪ್ಟರ್ ಗಳನ್ನು ತಮ್ಮ ಸೇನೆಗೆ ಸೇರ್ಪಡೆ ಮಾಡಿಕೊಂಡಿದ್ದು, ಭಾರತ ಫೈಲಟ್‍ಗಳಿಗೂ ಅಮೆರಿಕದ ಸೇನಾ ನೆಲಯಲ್ಲಿ ತರಬೇತಿ ಲಭಿಸಲಿದೆ. ವಿಶ್ವದ ಅತ್ಯಂತ ಸುಧಾರಿತ ಬಹುಕಾರ್ಯದ ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಯನ್ನ ಪಡಡೆದುಕೊಂಡಿದೆ.