ಧಾರವಾಡ: ಮುಂದಿನ ಚುನಾವಣೆಯಲ್ಲಿ ನಮ್ಮನ್ನ ಗೆಲ್ಲಿಸಿ ಆಡಳಿತಕ್ಕೆ ತಂದರೆ. ದಕ್ಷ ಹಾಗೂ ಪ್ರಾಮಾಣಿಕ ಸರ್ಕಾರ ನೀಡುತ್ತೇನೆ. ಇದನ್ನ ರಕ್ತದಲ್ಲಿ ಬರೆದುಕೊಡ್ತೆನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು.
ಧಾರವಾಡ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಣ್ಣಿದ್ದರೂ ಕುರುಡರಂತೆ ಮಾಡುತ್ತಿದೆ. ಮಹದಾಯಿ ನದಿ ಜೋಡಣೆಗಾಗಿ 15 ದಿನಗಳಲ್ಲಿ ಗೋವಾ ಹಾಗೂ ಪ್ರಧಾನಿ ಮೋದಿಗೆ ಭೇಟಿ ಮಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡುತ್ತೇವೆ. ಪರಿವರ್ತನ ಯಾತ್ರೆಯ ಮೊದಲೇ ಈ ಸಮಸ್ಯೆಯನ್ನು ಇತ್ಯರ್ಥ ಮಾಡಿ ಈ ಭಾಗಕ್ಕೆ ಬರುತ್ತೇನೆಂದು. ಇನ್ನು ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ಮಹದಾಯಿ ಸಮಸ್ಯೆ ಆಗಿದೆ. ಸದ್ಯ ಟ್ರಿಬ್ಯುನಲ್‍ನಲ್ಲಿ ಸಿಕ್ಕಿಕೊಳ್ಳಲು ಹಿಂದಿನ ಸರ್ಕಾರಗಳೇ ಕಾರಣ ಎಂದು ಕಿಡಿಕಾರಿದರು. ಹೋರಾಟಗಾರರು ತಮ್ಮ ಮಹದಾಯಿ ಹೋರಾಟ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಪ್ರಧಾನ ಮಂತ್ರಿ ಫಸಲ ವಿಮಾ ಯೋಜನೆ ತಂದಿದೆ. ಆದರೆ ರಾಜ್ಯ ಸರ್ಕಾರದ ತಪ್ಪಿನಿಂದ ರೈತರಿಗೆ ತೊಂದರೆಯಾಗುತ್ತಿದೆ. ಯಡಿಯೂರಪ್ಪನವರು ಗುಡುಗಿದ ನಂತರ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದೆ. ಹಿಂದೆ ಯಡಿಯೂರಪ್ಪ ಡಿಸಿಎಂ ಹಾಗೂ ನಾನು ಸಿಎಂ ಇದ್ದಾಗ ಕೂಡಾ ಸಾಲ ಮನ್ನಾ ಮಾಡಿದ್ದೇವೆ. ಸರ್ಕಾರ ಇವತ್ತು ಷರತ್ತುಗಳನ್ನ ಹಾಕಿ ಸಾಲ ಮನ್ನಾ ಮಾಡುತ್ತಿದೆ. ಆದರೆ ರೈತರಿಗೆ ಇದೂವರೆಗೆ ಅಕೌಂಟಿಗೆ ಹಣನೇ ಬಂದಿಲ್ಲ ಎಂದು ಗುಡುಗಿದರು.
ಯುಪಿಯ ಆದಿತ್ಯನಾಥ ಸರ್ಕಾರ ರೈತರ 1 ಲಕ್ಷ ಸಾಲ ಮನ್ನಾ ಮಾಡಿದೆ. ಅವರು ಮಾಡಿದ ಸಾಲ ಮನ್ನಾ ಆರ್ಡರ್ ಕಾಪಿ ತಂದು ನೋಡಿ. ಅವರು ರಾಷ್ಟ್ರೀಕೃತ ಬ್ಯಾಂಕಿನ ಸಾಲ ಕೂಡಾ ಮನ್ನಾ ಮಾಡಿದ್ದಾರೆ. ನಿಮ್ಮಂತೆ ಕೇಂದ್ರದ ಕಡೆ ಅವರು ಬೊಟ್ಟು ಮಾಡಿಲ್ಲ ಎಂದು ಶೆಟ್ಟರ್ ಹೇಳಿದರು.