ಕಲಬುರಗಿ: ಉಡುಪಿ, ಚಿಕ್ಕಮಗಳೂರು ಸಂಸಂದೆ ಶೋಭಾ ಕರಂದ್ಲಾಜೆ ಹಾಗೂ ಈಶ್ವರಪ್ಪ ಬಳಸಿದ ಪದ ನನ್ನ ಬಾಯಿಂದ ಬರಲ್ಲ ಅಂತ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಡಿಆರ್ ಪೊಲೀಸ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶೋಭಾ ಕರಂದ್ಲಾಜೆ ಮತ್ತು ಈಶ್ವರಪ್ಪರಿಂದ ಷಂಡ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಷಂಡರೋ ಗಂಡಸರೋ ಅದು ನನಗೇನು ಗೊತ್ತು? ನಾನೇನು ನೋಡಿದೆನಾ? ಅಂತ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯವ್ರೇನು ಷಂಡರಾ?- ಸರ್ಕಾರದ ವಿರುದ್ಧ ಶೋಭಾ ಕೆಂಡಾಮಂಡಲ
Advertisement
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸರು ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಅವರ ಸಂಘಟನೆಗಳು ಸುಮ್ಮನಿದ್ದರೆ ಶಾಂತಿ ನೆಲೆಸುತ್ತದೆ. ಇದೀಗ ಜಲ್ಲೆಯಲ್ಲಿ 144 ಸೆಕ್ಷನ್ ಜಾರಿಯಿದ್ದರೂ ಸಹ ಯಾಕೆ ಅಲ್ಲಿ ಹೋಗಿದ್ದರು. ಯಾವುದೇ ಸಂಘಟನೆಯಿರಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಿ ಅಂತ ಸಿಎಂ ಹೇಳಿದ್ದಾರೆ.
Advertisement
ಸಂಸದೆ ಶೋಭಾ ಕರಂದ್ಲಾಜೆ ಬಳಸಿದ ಷಂಡ ಎಂಬ ಪದ ನನ್ನ ಬಾಯಿಂದ ಬರಲ್ಲ. ಇದು ಬಿಜೆಪಿ, ಆರ್‍ಎಸ್‍ಎಸ್ ಸಂಸ್ಕೃತಿಯನ್ನ ಬಿಂಬಿಸುತ್ತೆ ಅಂತ ಸಿಎಂ ಟಾಂಗ್ ನೀಡಿದ್ದಾರೆ.
Advertisement
ಇದನ್ನೂ ಓದಿ: ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ: ಈಶ್ವರಪ್ಪ