ಮಡಿಕೇರಿ: ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ನನ್ನು ಹೊಗಳಿ ಹೇಳಿಕೆ ನೀಡಿರುವ ಕುರಿತು ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದ ನಟ ಪ್ರಕಾಶ್ ಹೇಳಿಕೆಗೆ ಪ್ರತಿಕ್ರಿಯಿಸಲು ಸಂಸದ ಪ್ರತಾಪ್ ಸಿಂಹ ನಿರಾಕರಿಸಿದ್ದಾರೆ.
ಮಡಿಕೇರಿಯ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ರಸ್ತುತ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ, ಅಭಿವೃದ್ಧಿ ಮನೋಭಾವ ನನ್ನಲ್ಲಿದೆ. ಜನರು ನನ್ನನ್ನು ಅಭಿವೃದ್ಧಿ ಕಾರ್ಯ ಮಾಡಲು ಆರಿಸಿದ್ದಾರೆಯೇ ಹೊರತು ಅಪ್ರಸ್ತುತ ಹೇಳಿಕೆಗೆ ಪ್ರತಿಕ್ರಿಯಿಸಲು ಅಲ್ಲ ಎಂದು ಹೇಳಿದರು.
ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ರಾಹುಲ್ ಗಾಂಧಿ ಕನ್ನಡ ವಚನ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಅವರು ಮೋದಿ ಅವರ ಅನುಕರಣೆ ಮಾಡುತ್ತಿರುವುದು ಒಳ್ಳೆಯದು. ಆದರೆ ಅವರು ಕನ್ನಡವನ್ನು ಸರಿಯಾಗಿ ಉಚ್ಛರಿಸುವುದನ್ನು ಕಲಿಯಬೇಕು. ಅನುಕರಣೆಯ ಭರದಲ್ಲಿ ತಪ್ಪು ತಪ್ಪಾಗಿ ಉಚ್ಛರಿಸಿ ಕನ್ನಡವನ್ನು ಕಗ್ಗೊಲೆ ಮಾಡಬಾರದು. ಪ್ರಧಾನಿ ನರೇಂದ್ರ ಮೋದಿ ಅವರ ನೋಟ್ ಬ್ಯಾನ್ ಭಯದ ದೇಶ ಬಿಟ್ಟು ಕೆಲ ಉದ್ಯಮಿಗಳು ಪಲಾಯನ ಮಾಡಿದ್ದಾರೆ. ಉದ್ಯಮಿಗಳು ಕೋಟಿ ಕೋಟಿ ಸಾಲ ಮಾಡಿ ವಂಚಿಸಿ ಬ್ಯಾಂಕ್ ದಿವಾಳಿಯಾಗುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ. ನೀರವ್ ಮೋದಿ ಸೇರಿದಂತೆ ಹಲವರಿಗೆ ಕಾಂಗ್ರೆಸ್ ಅವಧಿಯಲ್ಲಿ ಸಾವಿರಾರು ಕೋಟಿ ಸಾಲ ನೀಡಲಾಗಿದೆ ಎಂದು ಆರೋಪಿಸಿದರು.
ಮೈಸೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಕಾಶ್ ರೈ, ಇನ್ಮುಂದೆ ಯಾರನ್ನಾದರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವ ಪರ ತಿಳಿದು ಮಾತನಾಡುತ್ತೇನೆ. ನನ್ನನ್ನ ಪ್ರೀತಿಸುತ್ತಿರುವ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು.
https://www.youtube.com/watch?v=G06kEeDdJ2U&feature=youtu.behttps://www.youtube.com/watch?v=fElPQI1QKLg