ಮಡಿಕೇರಿ: ಸಿದ್ದರಾಮಯ್ಯ ಅವರು ಯಾವಾಗಲೂ ಟ್ವೀಟ್‌ನಲ್ಲಿ ಭೇದಿ ಮಾಡಿಕೊಳ್ಳೋದೇ ಆಯ್ತು. ಅದಕ್ಕೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
`ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್‌ಎಸ್‌ಎಸ್ ಬ್ರಿಟೀಷರಿಗೆ ಸಹಾಯ ಮಾಡಿತ್ತು’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಯಾವಾಗಲೂ ಟ್ವೀಟ್‌ನಲ್ಲಿ ಭೇದಿ ಮಾಡಿಕೊಳ್ಳುವುದೇ ಆಯ್ತು. ಆ ಭೇದಿ ಗಬ್ಬು ವಾಸನೆಗೆಲ್ಲಾ ನಾನು ರಿಯಾಕ್ಷನ್ ಮಾಡಲ್ಲ. ಆದರೆ ಸಿದ್ದರಾಮಯ್ಯ ಅವರು ಯಾವಾಗಲೂ ಆಧಾರ ರಹಿತವಾಗಿ ಟ್ವೀಟ್ ಮಾಡುವುದು ಸರಿಯಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಏನಿದು ಅನ್ಯಾಯ? ಏನು ಕ್ರೈಂ ಮಾಡಿದ್ದಾರೆ? ಅದು ರಾಷ್ಟ್ರದ ಆಸ್ತಿ, ಸ್ವಂತದ್ದಲ್ಲ: ಡಿಕೆಶಿ ಕೆಂಡಾಮಂಡಲ
Advertisement
Advertisement
ಶಾ ರನ್ನು ಜೈಲಿಗೆ ಕಳಿಸಿದ್ರು:
ಕಾಂಗ್ರೆಸ್‌ನವರಿಗೆ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವುದಕ್ಕೆ ನೈತಿಕ ಹಕ್ಕಿಲ್ಲ. ಗುಜರಾತ್ ಹಿಂಸಾಚಾರ ವಿಷಯದಲ್ಲಿ ಎಸ್‌ಐಟಿ ನಾಲ್ಕಾರು ಬಾರಿ ಕರೆದು ವಿಚಾರಣೆ ಮಾಡಿತ್ತು. ಅಮಿತ್ ಶಾರನ್ನು ಅನ್ಯಾಯವಾಗಿ ಒಂದು ಕೊಲೆ ಪ್ರಕರಣದಲ್ಲಿ ಸೇರಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದರು. ಹಾಗಂತ ಕಾಂಗ್ರೆಸ್ ಎಸ್‌ಐಟಿಯನ್ನು ದುರ್ಬಳಕೆ ಮಾಡಿಕೊಂಡಿತು ಎಂದು ನಾವು ಹೇಳಿದ್ದೀವಾ ಎಂದು ಪ್ರಶ್ನಿಸಿದ್ದಾರೆ.
Advertisement
ಬ್ರಿಟಿಷರ ಗುಂಡೇಟು, ಲಾಠಿ ಏಟಿಗೆ ಬೆದರದೆ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಪಕ್ಷ ನಮ್ಮದು. ಕಾಂಗ್ರೆಸ್ ಎಂದರೆ ಅದೊಂದು ಚಳವಳಿ.
ಹಿಂದೆ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಡಿತ್ತು, ಇಂದು ನ್ಯಾಯಕ್ಕಾಗಿ ಹೋರಾಡಲಿದೆ. 2/9#IndiaWithRahulGandhi pic.twitter.com/BsgSilzaqo
— Siddaramaiah (@siddaramaiah) June 13, 2022
Advertisement
ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆಯುತ್ತಿದ್ದಂತೆ ಕಾಂಗ್ರೆಸ್‌ನವರು ಈಗ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಅವರಿಗೆ ಮಾತನಾಡುವುದಕ್ಕೆ ಯಾವ ನೈತಿಕ ಹಕ್ಕಿದೆ? ಭ್ರಷ್ಟಾಚಾರ ತನಿಖೆ ಮಾಡುವುದೇ ತಪ್ಪಾ? ಭ್ರಷ್ಟಾಚಾರ ಪ್ರಜಾಪ್ರಭುತ್ವದ ಭಾಗ ಅನ್ನೋದಾದ್ರೆ ಅದು ಪ್ರಜಾಪ್ರಭುತ್ವ ಹರಣವಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಸೋನಿಯಾ, ರಾಹುಲ್ ಗಾಂಧಿ ವೈಯಕ್ತಿಕ ಆಸ್ತಿಯಲ್ಲ: ಮಲ್ಲಿಕಾರ್ಜುನ ಖರ್ಗೆ
ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಈಗ ಉಳಿದಿರೋದು ಕರ್ನಾಟಕ ಒಂದೇ, ಮುಂದಿ ಚುನಾವಣೆಯಲ್ಲಿ ಇಲ್ಲಿಂದಲೂ ಜನರು ಕಿತ್ತೆಸೆಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.