ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಕೊನೆ ಹಂತದ ಪ್ರಚಾರದಲ್ಲಿ ಎಲ್ಲ ಪಕ್ಷದ ನಾಯಕರು ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬಹಿರಂಗ ಪ್ರಚಾರದ ಕೊನೆ ಕ್ಷಣದಲ್ಲಿ ಭಾವನಾತ್ಮಕ ಮಾತನಾಡಿದ್ದಾರೆ.
ನಗರದ ಲಗ್ಗೆರೆಯಲ್ಲಿ ಇಂದು ತಮ್ಮ ಪಕ್ಷದ ಅಭ್ಯರ್ಥಿ ರಾಮಚಂದ್ರ ಪರ ಪ್ರಚಾರದಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಆರೋಗ್ಯದ ಸಮಸ್ಯೆ ಇದ್ದರೂ ಇವತ್ತು ಕೊನೆಯ ಹಂತದಲ್ಲೂ ನಾನು 113 ಸ್ಥಾನಗಳನ್ನು ಗೆಲ್ಲಬೇಕು ಎಂದು ಹೋರಾಟ ಮಾಡುತ್ತಿದ್ದೇನೆ. ಬಹುಶಃ ನಾಡಿನ ಜನತೆಗೆ ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಜನತೆಯ ಆರ್ಶೀವಾದ ಇವತ್ತು ಜೆಡಿಎಸ್ ಪಕ್ಷದ ಪರವಾಗಿದ್ದು ಒಂದು ನಿಜವಾದ ಜನತಾ ಸರ್ಕಾರವನ್ನು ಆಡಳಿತಕ್ಕ ತರಲಿಕ್ಕೆ ಎಲ್ಲರೂ ಸಹಕಾರ ಕೊಡುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದರು.
Advertisement
ಈ ನಿಮ್ಮ ಕುಮಾರಸ್ವಾಮಿ ಬದುಕಿರಬೇಕು ಅಂದರೆ ಈ ಬಾರಿ ಜೆಡಿಎಸ್ ಗೆಲ್ಲಿಸಿ. ನನ್ನನ್ನು ಗೆಲ್ಲಿಸಿ ಬದುಕಿಸಿದರೆ ನಿಮ್ಮನ್ನು ನಾನು ಉಳಿಸುತ್ತೇನೆ. ನನ್ನನ್ನು ಬದುಕಿಸುವ ಶಕ್ತಿ ನಿಮ್ಮಲ್ಲಿ ಮಾತ್ರ ಇದೆ. ನಿಮಗಾಗಿ ಕೆಲಸ ಮಾಡಕ್ಕೆ ಸಿದ್ದ ಇದ್ದೇನೆ. ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿ. ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ನಾನು ಗೆದ್ದಂತೆ. ಅಭ್ಯರ್ಥಿಗಳು ದುಡ್ಡು ದುಡ್ಡು ಅಂತ ಬಂದು ಕುಳಿತಿದ್ದಾರೆ. ನಾನು ಚಂದಾ ಎತ್ತಿ ಅವರಿಗೆಲ್ಲಾ ದುಡ್ಡು ಕೊಡಬೇಕಾಗಿದೆ. ನಾನೆಲ್ಲಿಂದ ತರಲಿ ಎಂದು ಪ್ರಶ್ನಿಸಿ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರು.
Advertisement
ಇಂದು ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಸಂವಾದ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರದ್ದಾಗಿದೆ.
Advertisement