ಬೆಂಗಳೂರು: ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ನನ್ನ ಸ್ವಂತ ಶಕ್ತಿಯಿಂದನೇ, ಹೊರತು ಕಾಂಗ್ರೆಸ್ ಹೆಸರಿನಿಂದಲ್ಲ ಅಂತಾ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿ.ಬಿ ನಾಗರಾಜ್ ಸಚಿವ ಸ್ಥಾನಕ್ಕೆ ಸಿಗದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.
ಸಂಪುಟ ರಚನೆಯ ಕಿಡಿ ಕಾಂಗ್ರೆಸ್ ಪಾಳಯದಲ್ಲಿ ಧಗಿ ಧಗಿಸುತ್ತಿದೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಬ್ಬೊಬ್ಬರೇ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದು, ರಾಜೀನಾಮೆ ನೀಡಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಶಾಸಕ ಎಂ.ಟಿ.ಬಿ ನಾಗರಾಜ್ ಸಹ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಇದನ್ನೂ ಓದಿ: ಅಧಿಕಾರ ಇಲ್ಲದಿದ್ದಾಗ ಒಂಥರ, ಅಧಿಕಾರ ಬಂದಾಗ ಒಂಥರ – ಹಣವಂತರಿಗೆ ಸಚಿವ ಸ್ಥಾನ : ಜೆಡಿಎಸ್ ಶಾಸಕ ಅಸಮಾಧಾನ
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಬೇರೆ ಪಕ್ಷದಿಂದ ಬಂದವರನ್ನು ಸಚಿವರನ್ನಾಗಿ ಮಾಡಲಾಗುತ್ತಿದೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರಿಗೆ ಎರಡೆರೆಡು ಸಲ ಸಚಿವರನ್ನಾಗಿ ಮಾಡಲಾಗುತ್ತಿದೆ. ನಾನು ಕಾರ್ಯಕರ್ತನಾಗಿ, ನಗರ ಸಭೆ ಸದಸ್ಯನಾಗಿ ಕಳೆದ 35 ವರ್ಷಗಳಿಂದ ಕಾಂಗ್ರೆಸ್‍ಗಾಗಿ ಕೆಲಸ ಮಾಡಿಕೊಂಡು ಬಂದರೂ, ಇಂದು ನನಗೆ ಅನ್ಯಾಯವಾಗಿದೆ ಎಂದು ಅಂತಾ ಆಕ್ರೋಶ ಹೊರಹಾಕಿದ್ರು. ಇದನ್ನೂ ಓದಿ: ಒಂದು ವೇಳೆ ಗೆದ್ದಿದ್ದರೆ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಹೆಚ್.ವೈ.ಮೇಟಿ
Advertisement
Advertisement
ರಾಜೀನಾಮೆ ನೀಡಬಹುದು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸ್ಥಳೀಯ ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅವರೆಲ್ಲ ಸಹ ನನಗೂ ರಾಜೀನಾಮೆ ನೀಡಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ. ನನಗೆ ಪಕ್ಷ, ಸಚಿವ ಸ್ಥಾನಕ್ಕಿಂತ ಕಾರ್ಯಕರ್ತರು ಮುಖ್ಯ. ಕೊನೆಯ ಕ್ಷಣದಲ್ಲಿ ಒತ್ತಡಗಳು ಹೆಚ್ಚಾದ್ರೆ ನಾನು ರಾಜೀನಾಮೆ ನೀಡುತ್ತೇನೆ ಅಂತಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೈ ಶಾಸಕ ಎಂ.ಬಿ ಪಾಟೀಲ್ ರಾಜೀನಾಮೆ?
Advertisement
ಒಟ್ಟು ನಾಲ್ಕು ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದು, ಮೂರು ಬಾರಿ ಗೆಲುವನ್ನು ಕಂಡಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಎಂದು ಸ್ಪರ್ಧೆ ನಡೆದಿಲ್ಲ. ನಾಗರಾಜ್ ವರ್ಸಸ್ ಬಚ್ಚೇಗೌಡ ಅಂತಾನೇ ಸ್ಪರ್ಧೆ ನಡೆದಿರೋದು. ಒಟ್ಟಾರೆಯಾಗಿ ಬಿಜೆಪಿಯ ಪ್ರಬಲ ನಾಯಕ ಬಚ್ಚೇಗೌಡರನ್ನು ಮೂರು ಬಾರಿ ಸೋಲಿಸಿದ್ದೇನೆ. ಆದ್ರೂ ಇಂದು ನನಗೆ ಮೋಸವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗುತ್ತಿಲ್ಲ. ಕಾಂಗ್ರೆಸ್ ಶಾಸಕಾಂಗದ ನಾಯಕರಾಗಿರುವ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಅವರ ಮನೆಯತ್ತ ತೆರಳುತ್ತಿದ್ದೇನೆ ಅಂತಾ ತಿಳಿಸಿದರು.ಇದನ್ನೂ ಓದಿ: ಯಾವ ಬಾಲ್ ಬಂದ್ರೂ ಬ್ಯಾಟ್ ಬೀಸುತ್ತೇನೆ- ಯು.ಟಿ ಖಾದರ್