ಬೆಂಗಳೂರು: ಸಿದ್ದರಾಮಯ್ಯನವರು (Siddaramaiah) ರಾಜ್ಯದ ದೀರ್ಘಾವಧಿಯ ಸಿಎಂ ಆಗಿ ದಾಖಲೆ ಮಾಡಲಿ ಅಂತ ಹಾರೈಸ್ತೇನೆ ಅಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ನಿನ್ನೆ ʻಪಬ್ಲಿಕ್ ಟಿವಿʼ (PUBLiC TV) ಸಂದರ್ಶನದಲ್ಲಿ ʻದೀರ್ಘಾವಧಿಯ ಸಿಎಂʼ ಎಂಬ ದಾಖಲೆ ಮಾಡುವ ಬಗ್ಗೆ ಸಿದ್ದರಾಮಯ್ಯನವ್ರು ಇಚ್ಛೆ ವ್ಯಕ್ತಪಡಿಸಿದ್ದ ಕುರಿತು ಪ್ರತಿಕ್ರಿಯೆ ಕೊಟ್ಟರು. ದೀರ್ಘಾವಧಿಯ ಸಿಎಂ ಆಗಲಿ, ದಾಖಲೆ ಮಾಡಲಿ ಅಂತ ನಾನೂ ಹಾರೈಸ್ತೇನೆ. ಅವರು ಈ 5 ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ಅದು ದಾಖಲೆ ಆಗಲಿದೆ ಅಂತ ಪರಮೇಶ್ವರ್ ತಿಳಿಸಿದರು. ಇದನ್ನೂ ಓದಿ: ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು: ಗೂಗಲ್ ಎಕ್ಸ್‌ನ ಸೆಬಾಸ್ಟಿಯನ್ ಭವಿಷ್ಯ
ಇನ್ನು, ಸಿಎಲ್‌ಪಿ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದಾಗ ನಮಗೆ ಹೈಕಮಾಂಡ್ ನವ್ರು ಎರಡೂವರೆ ವರ್ಷ ಅಧಿಕಾರ ಅಂತೇನೂ ಹೇಳಿರಲಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರೆ ಅಂತನೇ ಭಾವಿಸಿದ್ದೇವೆ ಅಂತ ಇದೇವೇಳೆ ಪರಮೇಶ್ವರ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: Fashion | ನೈಲ್ ಆರ್ಟ್ ಮಾಡಿಸಿ – ಪ್ರೇಮಿಗಳ ದಿನಕ್ಕೆ ಪ್ರಿಯಕರನಿಗೆ ಇನ್ನಷ್ಟು ಹತ್ತಿರವಾಗಿ!
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸುಳಿವು ಕೊಟ್ಟಿರುವ ವಿಚಾರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಅಂದ ಪರಮೇಶ್ವರ್, ಹೈಕಮಾಂಡ್ ತೀರ್ಮಾನ ಏನೇ ಇದ್ರೂ ನಾವು ಒಪ್ಕೋತೇವೆ ಅಂದ್ರು. ಎಐಸಿಸಿ ಹೊಸ ಕಚೇರಿ ಉದ್ಘಾಟನೆ ವೇಳೆ ಅವ್ರು ಎಐಸಿಸಿ ಪುನಾರಚನೆ ಆಗಬೇಕು ಅಂದಿದ್ರು. ಆ ಅರ್ಥದಲ್ಲಿ ಅವರು ಹೇಳಿರಬಹುದು. ಕೆಲ ರಾಜ್ಯಗಳಲ್ಲಿ ನಮ್ಮ ಪಕ್ಷ ಸೋತಿದೆ, ಪಕ್ಷ ಸಂಘಟನೆ ದೃಷ್ಟಿಯಿಂದ ಖರ್ಗೆಯವರು ಹಾಗೆ ಹೇಳಿರಬಹುದು. ಹೈಕಮಾಂಡ್ ತೀರ್ಮಾನ ಏನಿರುತ್ತೋ ಗೊತ್ತಿಲ್ಲ ಅಂತ ಪರಮೇಶ್ವರ್ ತಿಳಿಸಿದ್ರು.
ಇನ್ನು ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಅಶೋಕ್, ಛಲವಾದಿ ಪ್ರತಿಭಟನೆ ಖಂಡಿಸಿದ ಪರಮೇಶ್ವರ್, ಅಧಿಕಾರಿಗಳ ವಿರುದ್ಧ ದೌರ್ಜನ್ಯ ಆಗಿದ್ರೆ ನಿರ್ದಿಷ್ಟವಾಗಿ ಬಿಜೆಪಿಯವ್ರು ಹೇಳಲಿ. ಎಲ್ಲಿ ಯಾರಿಗೆ ದೌರ್ಜನ್ಯವಾಗಿದೆ ಅಂತ ಹೇಳಲಿ. ಅಶೋಕ್ ಅವ್ರು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ