ಬೆಂಗಳೂರು: ಇಂದು ಲೋಕಸಮರದ ಮಹಾತೀರ್ಪು ಹೊರಬೀಳಲಿದೆ. ಯಾವ ಪಕ್ಷ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎಂದು ಇಡೀ ದೇಶವೇ ಕಾದು ಕೂತಿದೆ. ಈ ನಡುವೆ ಬೆಳ್ಳಂಬೆಳಗ್ಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಶಾಸಕ ರೋಷನ್ ಬೇಗ್ ವಿರುದ್ಧ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಾಜಿನಗರ ಶಾಸಕ ರೋಷನ್ ಬೇಗ್ ಮೇಲೆ ಕಿಡಿಕಾರಿದರು. ರೋಷನ್ ಬೇಗ್ ಅವರು ತಾನಿಲ್ಲದೇ ಇದ್ದರೆ ನಾನು ಗೆಲ್ಲೋಕೆ ಸಾಧ್ಯವಿಲ್ಲ ಅಂದುಕೊಂಡಿದ್ದಾರೆ. ಆದರೆ ನನಗೆ ಅವರದ್ದೇ ಕ್ಷೇತ್ರ ಶಿವಾಜಿನಗರದಲ್ಲಿ ಜನ ಬೆಂಬಲಿಸಿದ್ದಾರೆ. ಅವರು ತಾನೇ ದೊಡ್ಡ ಲೀಡರ್ ಅಂದ್ಕೊಂಡಿದ್ದಾರೆ. ನಾನು ಕನಿಷ್ಠ 50 ಸಾವಿರ ಬಹುಮತದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಜನ ಕೊಟ್ಟಿದ್ದಾರೆ ಎಂದು ಹೇಳಿದರು.
ಮೌಂಟ್ ಕಾರ್ಮೆಲ್ ಕಾಲೇಜ್‍ನಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತ ಏಣಿಕೆ ನಡೆಯುತ್ತಿದೆ. ಹೀಗಾಗಿ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸೇರಿರುವ ಕೈ ಕಾರ್ಯಕರ್ತರು ಸದ್ಯ ಕೌಂಟಿಂಗ್ ಸೆಂಟರ್‍ಗೆ ಬಂದಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಎಲ್ಲ ಸಮಯದಲ್ಲಿ ಸತ್ಯವಾಗಲ್ಲ. ದೇಶದ ಪರ್ಸೆಂಟೆಜ್ ಲೆಕ್ಕದಲ್ಲಿ ಚುನಾವಣಾ ಸಮೀಕ್ಷೆ ಮಾಡಿದ್ದಾರೆ. ಕ್ಷೇತ್ರವಾರು ಸಮೀಕ್ಷೆ ಮಾಡಿಲ್ಲ. ಚುನಾವಣೋತ್ತರ ಸಮೀಕ್ಷೆಗಳೇ ನಿಜವಾದ್ರೆ ಚುನಾವಣೆ ಫಲಿತಾಂಶ ಯಾಕೆ ಬೇಕು ಎಂದು ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿದರು.
Rizwan Arshad,Congress candidate from Bangalore Central: Roshan Baig has tried to help the BJP& sabotage my campaign. But in his own constituency Shivaji Nagar, people have supported me overwhelmingly & blessed me. Workers of Congress party have defied his diktats & supported me. pic.twitter.com/eHyEZQa0UW
— ANI (@ANI) May 23, 2019