ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅಲ್ಲದೇ ಯಾರೇ ಬಂದರೂ ಕೋಲಾರದಲ್ಲಿ (Kolar) ನಾನು ಗೆಲುವು ಸಾಧಿಸುತ್ತೇನೆ ಎಂದು ಕೋಲಾರ ಕ್ಷೇತ್ರದ ಜೆಡಿಎಸ್ (JDS) ಅಭ್ಯರ್ಥಿ ಶ್ರೀನಾಥ್ (C.M.R.Srinath) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ ಎಂಬ ವಿಷಯ ಬೆಳಗ್ಗೆ ಗೊತ್ತಾಯಿತು. ಅವರು ಸ್ಪರ್ಧೆ ಮಾಡಲಿ ಬಿಡಲಿ ನನಗೇನು ತೊಂದರೆ ಇಲ್ಲ. ಎರಡು ತಿಂಗಳ ಹಿಂದೆ ಕುಮಾರಸ್ವಾಮಿ (H.D.Kumaraswamy) ಟಿಕೆಟ್ ಘೋಷಣೆ ಮಾಡಿದ್ದಾರೆ. 4 ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ಕೊಟ್ಟಿದೆ. ಜನರ ಅಭಿಪ್ರಾಯ ಕಲೆ ಹಾಕಿ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: BJP ಚುನಾವಣೆ ಗೆಲ್ಲೋಕೆ ರೌಡಿ ಶೀಟರ್‌ಗಳನ್ನ ಸೇರಿಸಿಕೊಳ್ತಿದೆ – ಹೆಚ್‌ಡಿಕೆ ವಾಗ್ದಾಳಿ
Advertisement
Advertisement
ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಪಕ್ಷಕ್ಕೆ ನೂರಾರು ಜನ ಸೇರ್ಪಡೆ ಆಗುತ್ತಿದ್ದಾರೆ. ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಎಲ್ಲಾ ವರ್ಗದ ಜನರು ನನ್ನ ಜೊತೆ ಇದ್ದಾರೆ. ಯಾವುದೇ ಮತಗಳು ಚದುರಿ ಹೋಗುವುದಿಲ್ಲ. ಯಾರೇ ಅಭ್ಯರ್ಥಿಯಾದರೂ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಾರ್ಟಿಯ ಅರ್ಥ ಕಮಿಷನ್, ಕರಪ್ಷನ್ – ಜೆ.ಪಿ.ನಡ್ಡಾ
Advertisement
ಸಿದ್ದರಾಮಯ್ಯ ಬಂದರು ಎಂದು ನನಗೆ ಭಯ ಇರಲಿಲ್ಲ. ಅವರ ಮೇಲೆ ಗೌರವ ಇದೆ. ಅವರ ವಿರುದ್ಧ ಸ್ಪರ್ಧೆ ಮಾಡುವುದಕ್ಕೆ ಹೆಮ್ಮೆ ಇದೆ. ನನಗೆ ಇದೊಂದು ಸವಾಲು. ನಮ್ಮ ಜನರು ನನ್ನ ಜೊತೆ ಇದ್ದಾರೆ. ನಾನು ಗೆದ್ದೇ ಗೆಲ್ಲುತ್ತೇನೆ. ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದ ವೈದ್ಯರು – ಹೆಚ್‌ಡಿಡಿ 100 ಕಿ.ಮೀ ರೋಡ್ ಶೋ ರದ್ದು