ಬೆಂಗಳೂರು: ಸಿಗ್ನಲ್‍ನಲ್ಲಿ ದಾರಿ ಬಿಡುವಂತೆ ಹಾರ್ನ್ ಹಾಕಿದ್ದಕ್ಕೆ ಕಾರಿನಲ್ಲಿದ್ದ ಯುವತಿ ಅವಾಚ್ಯ ಶಬ್ಧ ಬಳಸಿ ಬೈದಿದ್ದಕ್ಕೆ ಸವಾರ ರೇಪ್ ಮಾಡೋದನ್ನು ಹೇಳಿಕೊಡುತ್ತೀನಿ ಎಂದು ಬೈದಿರುವ ಘಟನೆ ಬೆಂಗಳೂರಿನ ತಿಲಕನಗರದ ಬಿಲಾಲ್ ಮಸೀದಿ ಬಳಿಯ ಸಿಗ್ನಲ್‍ನಲ್ಲಿ ನಡೆದಿದೆ.
ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ 26 ವರ್ಷದ ಯುವತಿ ಜಿಮ್‍ನಿಂದ ಶನಿವಾರ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ತಿಲಕನಗರದ ಬಿಲಾಲ್ ಮಸೀದಿ ಬಳಿಯ ಸಿಗ್ನಲ್‍ನಲ್ಲಿ ರೆಡ್ ಲೈಟ್ ಬಿದ್ದಿದ್ದರಿಂದ ಕಾರು ನಿಲ್ಲಿಸಿದ್ದಾರೆ. ಕಾರಿನ ಹಿಂದೆ ನಿಂತಿದ್ದ ಸ್ಕೂಟಿ ಸವಾರ ಹಾರ್ನ್ ಹಾಕಿ, ದಾರಿ ಬಿಡುವಂತೆ ಕೇಳಿದ್ದಾನೆ. ಆದರೆ ಯುವತಿ ದಾರಿ ಬಿಡಲಿಲ್ಲ. ಇದರಿಂದ ಕೋಪಗೊಂಡ ಸವಾರ ಕಾರ್ ಬಳಿಗೆ ಬಂದು ತರಾಟೆಗೆ ತಗೆದುಕೊಂಡಿದ್ದಾನೆ.
Advertisement
ಈ ವೇಳೆ ಕಾರಿನ ಕ್ಯಾಮೆರಾದಲ್ಲಿ ಸವಾರನ ಫೋಟೋ ತೆಗೆದುಕೊಂಡ ಯುವತಿ, ತನಗಾದ ಅನ್ಯಾಯದ ಕುರಿತು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಯುವತಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
Advertisement
ಸಿಗ್ನಲ್ ಜಂಪ್ ಮಾಡು ಇಲ್ಲಾ ಅಂದ್ರೆ ನಾನು ರೇಪ್ ಮಾಡ್ತೇನೆ ಎಂದು ನನಗೆ ಸವಾರ ಬೈದಿದ್ದಾನೆ. ಅಷ್ಟಕ್ಕೂ ಬಿಡದೆ ಕಾರನ್ನು ಫಾಲೋ ಮಾಡಿಕೊಂಡು ಬಂದು ಕಾರಿಗೆ ಅಡ್ಡಗಟ್ಟಿ ಸ್ಕೂಟಿ ನಿಲ್ಲಿಸಿ, ಪಕ್ಕಕ್ಕೆ ನಡಿ ರೇಪ್ ಹೇಗೆ ಮಾಡುವುದು ಅಂತಾ ತೋರಿಸುತ್ತೇನೆ ಎಂದಿದ್ದಾನೆ ಎಂದು ಮಹಿಳಾ ಫೋಟೋಗ್ರಾಫರ್ ಆರೋಪಿಸಿದ್ದಾರೆ.
Advertisement
ದೂರಿನ ಹಿನ್ನೆಲೆಯಲ್ಲಿ ಸವಾರನನ್ನು ತಿಲಕನಗರ ಪೊಲೀಸರು ಠಾಣೆಗೆ ಕರೆಸಿದ್ದಾರೆ. ವಿಚಾರಣೆ ವೇಳೆ, ದಾರಿ ಬಿಡುವಂತೆ ಕೇಳಿದ್ದು ನಿಜ. ಆಕೆಯೇ ನನಗೆ ಮೊದಲು ಅವಾಚ್ಯ ಶಬ್ಧದಿಂದ ಬೈದಿದ್ದಾಳೆ. ನಾನು ಯಾವುದೇ ಅವಾಚ್ಯ ಶಬ್ಧದಿಂದ ಬೈದಿಲ್ಲ ಎಂದು ಹೇಳಿದ್ದಾನೆ.
ಇಬ್ಬರ ಆರೋಪಗಳನ್ನು ಆಲಿಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳದೇ ರಾಜಿ ಸಂಧಾನ ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/BKpxNY507n8