ಬಾಗಲಕೋಟೆ: ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತೇನೆ ಎಂದು ಹೇಳಿದ್ದ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಸಿಎಂ ಬಳಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಬಾದಾಮಿಯಲ್ಲಿ ನಡೆದ ಪುಸ್ತಕ ಪ್ರಾಧಿಕಾರದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 1 ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ಕನ್ನಡ ಮಾಧ್ಯಮ ಮತ್ತು ಕನ್ನಡ ಭಾಷಾ ಕಲಿಕೆ ಬಗ್ಗೆ ಸ್ಪಷ್ಟತೆ ಇರಬೇಕು. ನಾನೂ ಕೂಡ ಪ್ರೌಢಶಾಲೆ ಶಿಕ್ಷಣವನ್ನು ಕನ್ನಡದಲ್ಲಿ ಓದಿದವನು. ನಾನೇನು ಪೆದ್ದನಾ ಎಂದು ಪ್ರಶ್ನಿಸಿದರು. ಅಲ್ಲದೇ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭಾಮ ಭಾಷೆಯಾಗಿ ಉಳಿಯಬೇಕು ಎಂದರು.
Advertisement
Advertisement
ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಎಂಎಲ್‍ಸಿ ಒಬ್ಬರು ಇಂಗ್ಲಿಷ್ ಬಗ್ಗೆ ಹೊಗಳಿ ಮಾತನಾಡಿದ್ದರು. ಆಗ ನಾನು ನಿಮಗೆ ಕನ್ನಡ ಬರುತ್ತಾ ಎಂದು ಕೇಳಿದೆ, ಹೌದು ಎಂದರು. ಆಗ ಸಂಧಿ ಎಂದರೇ ಏನು ಎಂದು ಪ್ರಶ್ನೆ ಮಾಡಿದೆ. ಮರುಕ್ಷಣ ಆತ ಏನು ಮಾತನಾಡದೆ ಸುಮ್ಮನಾದ. ಅದರಂತೆ ಕನ್ನಡ ಭಾಷೆ ಉಳಿಯಬೇಕು ಎಂದು ಹೇಳುತ್ತೇನೆ. ಭಾಷೆ ಬಗ್ಗೆ ಎಲ್ಲರಿಗೂ ಪ್ರೀತಿ ಇರಬೇಕು. ಅದನ್ನು ಹೆಚ್ಚಿಸಿಕೊಳ್ಳಲು ಓದಬೇಕು. ಆದರೆ ನಾನು ಕಾನೂನು ವಿದ್ಯಾರ್ಥಿಯಾಗಿದ್ದ ವೇಳೆ ಹೆಚ್ಚು ಓದುತ್ತಿದೆ, ಆದರೆ ರಾಜಕಾರಣಿ ಆದ ಮೇಲೆ ಬಿಟ್ಟಿದ್ದೇನೆ. ಆಗ ಓದಿದ ಸಂಗತಿಗಳನ್ನೇ ಈಗ ಮಾತನಾಡುತ್ತಿದ್ದೇನೆ ಎಂದರು.
Advertisement
ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ೧೦೦೦ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಅವರೊಡನೆ ಚರ್ಚೆ ಮಾಡುತ್ತೇನೆ.@INCKarnataka
— Siddaramaiah (@siddaramaiah) December 27, 2018
Advertisement
ಕಾಲೇಜು ಶಿಕ್ಷಣ ಪಡೆಯುವ ವೇಳೆ ಊಟ ನಾನೇ ಮಾಡಿಕೊಳ್ಳಬೇಕಾದ ಸ್ಥಿತಿ ಇತ್ತು. ಇದು ಇಂದಿನ ಮಕ್ಕಳಿಗೆ ಆಗಬಾರದು ಎಂದು ವಿದ್ಯಾಸಿರಿ ಯೋಜನೆ ಜಾರಿ ಮಾಡಿದೆ. ಅದನ್ನು ಜನರು ಆರ್ಥೈಸಿಕೊಳ್ಳಬೇಕು. ನಮ್ಮ ಜನ, ನೆಲ ಜಲ ಹಾಗೂ ಭಾಷೆಯನ್ನ ಪ್ರೀತಿಸಿದವನು ಮನುಷ್ಯನೇ ಅಲ್ಲ. ನಾನು ಕೆಲವು ದಿನ ಮೇಷ್ಟ್ರ ಆಗಿ ಕೆಲಸ ಮಾಡಿದ್ದು, ಆದ್ದರಿಂದ ನಿಮಗೂ ಪಾಠ ಮಾಡಿದಂತೆ ಆಗುತ್ತದೆ ಎಂದು ತಮ್ಮ ಮಾತು ಪೂರ್ಣಗೊಳಿಸಿದರು.
ಕನ್ನಡ ಭಾಷೆ ಕಲಿಕೆ ಮತ್ತು ಕನ್ನಡ ಮಾಧ್ಯಮದ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು.ನಾನು ಹೈಸ್ಕೂಲ್ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತವನು. ನಾನೇನು ಪೆದ್ದನಾ? ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಉಳಿಯಬೇಕು.@INCKarnataka
— Siddaramaiah (@siddaramaiah) December 27, 2018
ಬಾದಾಮಿಯ ಕಾಳಿದಾಸ ವಿದ್ಯಾಸಂಸ್ಥೆಯ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಪುಸ್ತಕಗಳ ಉಚಿತ ವಿತರಣಾ ಸಮಾರಂಭವನ್ನು ಉದ್ಘಾಟಿಸಿದೆ. pic.twitter.com/FIJFG8dO8W
— Siddaramaiah (@siddaramaiah) December 27, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv