ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡಿದರೆ, ಚುನಾವಣಾ ಪ್ರಚಾರಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ಬಹುಭಾಷಾ ನಟ ಚರಣ್ ರಾಜ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಅಂಬರೀಶ್ ಅವರ ಮನೆಯ ಅನ್ನ ತಿಂದಿದ್ದೇನೆ. ಕನ್ನಡ ಚಿತ್ರರಂಗದ ಯಾವ ಕಲಾವಿದರು ಬರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ನಾನು ಯಾವ ಸಮಯದಲ್ಲಿಯಾದ್ರು ಸುಮಲತಾ ಅವರ ಪರ ಪ್ರಚಾರಕ್ಕೆ ಸಿದ್ಧ. ಸುಮಲತಾ ಅವರು ಅಂಬರೀಶ್ ಅವರ ಹಾದಿಯಲ್ಲಿ ನಡೆಯಲು ಮುಂದಾಗಿದ್ದಾರೆ. ಆದ್ದರಿಂದ ಚರಣ್ ರಾಜ್ ಅಂಬಿ ಅಣ್ಣನ ಪರ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತ ಮಂಡ್ಯ ಲೋಕಸಭಾ ಚುನಾವಣೆಗೆ ಸಿದ್ಧತೆಗೆ ನಡೆಸಿರುವ ಸುಮಲತಾ ಅವರು ಕ್ಷೇತ್ರ ನಾಯಕರ ಬೆಂಬಲ ಹಾಗೂ ಕಾರ್ಯಕರ್ತರು ನಿರ್ಧಾರ ಸಂಗ್ರಹಿಸುತ್ತಿದ್ದು, ಮಾರ್ಚ್ 18 ರಂದು ಅಂತಿಮ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನಟ ದರ್ಶನ್‍ರನ್ನು ಯಾವಾಗಲೂ ಭೇಟಿ ಮಾಡುತ್ತಿರುತ್ತೇವೆ. ನೀವು ಆರ್ಡರ್ ಮಾಡಿ ನಾನು ನಿಮ್ಮ ಮಾತನ್ನ ಕೇಳುತ್ತೇನೆ ಎಂದು ದರ್ಶನ್ ಹೇಳಿದ್ದಾರೆ. ದರ್ಶನ್ ನನ್ನನ್ನು ಮದರ್ ಇಂಡಿಯಾ ಅಂತ ಕರೆಯುತ್ತಾರೆ. ಅಂಬರೀಶ್ ಇದ್ದಾಗ ದರ್ಶನ್ ನಮ್ಮ ಕುಟುಂಬದ ಮೇಲೆ ಹೇಗೆ ಪ್ರೀತಿ ಹೊಂದಿದ್ದರೋ, ಈಗಲೂ ಅದೇ ಪ್ರೀತಿ ಹೊಂದಿದ್ದಾರೆ. ಸಿನಿಮಾ ರಂಗದ ಹಲವರು ನನಗೆ ಸಪೊರ್ಟ್ ಮಾಡುತ್ತಾರೆ. ಅದು ಅಂಬರೀಶ್ ಮೇಲೆ ಇಟ್ಟಿರುವ ಪ್ರೀತಿಯಾಗಿದೆ ಎಂದು ಹೇಳಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಯ ಕ್ಷೇತ್ರ ದೋಸ್ತಿ ಸರ್ಕಾರದಲ್ಲಿ ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯವುದು ಖಚಿತವಾಗಿದ್ದು, ಕೆಲ ದಿನಗಳ ಹಿಂದೆಯೇ ನಿಖಿಲ್ ಅವರು, ನಾನು ನಿಮ್ಮ ಗುಲಾಮನಾಗಿ ಕೆಲಸ ಮಾಡುತ್ತೇನೆ, ಒಂದು ಅವಕಾಶ ಮಾಡಿಕೊಡಿ ಎಂದು ವಿನಂತಿ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv