ಬೆಂಗಳೂರು: ನವೆಂಬರ್ 23ರ ಉಪಚುನಾವಣೆ (By Election) ಫಲಿತಾಂಶದ ನಂತರ ಕಾಂಗ್ರೆಸ್ (Congress) ನಾಯಕರ ಮಾತಿಗೆ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡ, ಕುಮಾರಸ್ವಾಮಿ, ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣ (Channapatna) ಉಪಚುನಾವಣೆ ಬೇರೆ ಕ್ಷೇತ್ರಗಳಿಗಿಂತ ಗಮನ ಸೆಳೆದಿದೆ. ಕಾಂಗ್ರೆಸ್ ನಾಯಕರು ಏನೇನು ಮಾತನಾಡುತ್ತಿದ್ದಾರೆ ಎಂದು ನೋಡುತ್ತಿದ್ದೇನೆ. ಕಾಂಗ್ರೆಸ್ ಅವರ ಪರ ಪ್ರಯೋಗ ನೋಡಿದ್ದೇನೆ. ನನ್ನ ಮೇಲೆ ಮತ್ತು ಬಿಜೆಪಿ (BJP) ನಾಯಕರ ಮೇಲೆ ಆರೋಪ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರ ಎಲ್ಲಾ ಆರೋಪಗಳನ್ನು ನೋಟ್ ಮಾಡಿ ಇಟ್ಟುಕೊಂಡಿದ್ದೇನೆ. ನವೆಂಬರ್ 13 ರಂದು ಚುನಾವಣೆ ನಡೆಯುತ್ತದೆ. ನವೆಂಬರ್ 23ರಂದು ಫಲಿತಾಂಶ ಬರಲಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲರಿಗೂ ನಾನು ಉತ್ತರ ಕೊಡುತ್ತೇನೆ ಎಂದು ಹರಿಹಾಯ್ದರು. ಇದನ್ನೂ ಓದಿ: ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ – ಆರೋಪಿ ಅರೆಸ್ಟ್
Advertisement
Advertisement
ದೇವೇಗೌಡರ ಆರೋಗ್ಯದ ಬಗ್ಗೆಯಿಂದ ಹಿಡಿದು, ನಮ್ಮ ಪಕ್ಷದ ನಿರ್ಧಾರಗಳ ಬಗ್ಗೆ ಮಾತಾಡಿದ್ದಾರೆ. ನಮ್ಮ ಸಮಾಜದ ಹಲವಾರು ನಾಯಕರ ಬಗ್ಗೆ ಮಾತಾಡಿದ್ದಾರೆ. ನಮ್ಮಿಂದ ಅನಾನುಕೂಲಗಳು ಆಗಿವೆ. ಅವರ ಬೆಳವಣಿಗೆಗೆ ತೊಂದರೆ ಅಗಿದೆ ಅಂತ ಹೇಳಿದ್ದಾರೆ. ಕುಮಾರಸ್ವಾಮಿ ಒಬ್ಬರೇ ಒಕ್ಕಲಿಗರಾ? ನಾವೇನು ಒಕ್ಕಲಿಗರು ಅಲ್ಲವಾ ಅಂತ ಮಾತಾಡಿದ್ದಾರೆ. ಎಲ್ಲವನ್ನೂ ನೋಟ್ ಮಾಡಿಕೊಂಡಿದ್ದೇನೆ. ಎಲ್ಲದಕ್ಕೂ ನವೆಂಬರ್ 23ರ ಫಲಿತಾಂಶ ಬರಲಿ. ಆಮೇಲೆ ಮಾತನಾಡುತ್ತೇನೆ ಎಂದು ಕಿಡಿಕಾರಿದರು. ಇದನ್ನೂ ಓದಿ: Waqf Row| ಬಿಜೆಪಿ ಅವಧಿಯಲ್ಲಿ ರೈತರಿಗೆ ನೋಟಿಸ್ – ಕಾಂಗ್ರೆಸ್ ದಾಖಲೆ ಬಿಡುಗಡೆ
Advertisement