DistrictsKarnatakaLatestLeading NewsMain PostMandya

ದಶಪಥ ರಸ್ತೆ ನೋಡಿದ್ರೆ ಅಸಹ್ಯವಾಗುತ್ತೆ- ಸಂಸದರ ಮನೆ ಮುಂದೆ ಧರಣಿ ಮಾಡ್ತೀನಿ: ಶಾಸಕ ಎಚ್ಚರಿಕೆ

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಸ್ತೆ (Mysuru Bengaluru Highway) ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ ಆ ರಸ್ತೆ ನೋಡಿದ್ರೆ ನನಗೆ ಅಸಹ್ಯವಾಗುತ್ತದೆ. ಹೆದ್ದಾರಿ ಕಾಮಗಾರಿಗೆ ಬೇರೆ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಒಂದು ವಾರದಲ್ಲಿ ಹಾಳಾದ ರಸ್ತೆ ದುರಸ್ತಿ ಮಾಡಿಸದಿದ್ರೆ ಪ್ರತಾಪ್ ಸಿಂಹ (Pratap Simha) ಮನೆ ಮುಂದೆ ಧರಣಿ ಮಾಡ್ತೀನಿ ಎಂದು ಮೇಲುಕೋಟೆ ಶಾಸಕ ಪುಟ್ಟರಾಜು (Puttaraju) ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ (Mysuru Bengaluru Highway) ಕಾಮಗಾರಿಯಿಂದ ಮೇಲುಕೋಟೆ ಕ್ಷೇತ್ರದ ರಸ್ತೆಗಳು ಹಾಳಾಗಿವೆ. ದಶಪಥ ಹೆದ್ದಾರಿ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ, ನಾನು ಸಂಸದನಾಗಿದ್ದಾಗ ಈ ಯೋಜನೆಗೆ ಒತ್ತಾಯಿಸಿದ್ದೆ. ಕಾಮಗಾರಿ ಪ್ರಾರಂಭವಾದ ವೇಳೆ ಹಾಳಾದ ರಸ್ತೆ ದುರಸ್ತಿ ಮಾಡುವುದಾಗಿ ಮಾತು ನೀಡಿದ್ರು. ಆದರೆ ಪ್ರತಾಪ್ ಸಿಂಹ ಒಂದು ತಿಂಗಳಿನಿಂದ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ವಾರದಲ್ಲಿ ರಸ್ತೆ ದುರಸ್ತಿ ಮಾಡದಿದ್ರೆ ಅವರ ಮನೆ ಮುಂದೆ ಧರಣಿ ಮಾಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಲುಕೋಟೆ ಬೆಟ್ಟದಲ್ಲಿ ಬಿದ್ದ ಮರ – ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ, ಶಿಕ್ಷಕರಿಗೆ ಗಂಭೀರ ಗಾಯ

ಬೆಂಗಳೂರು-ಮೈಸೂರು ರಸ್ತೆಯಿಂದ ಮಂಡ್ಯ (Mandya) ಜನರ ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದ ಹಾಗೆ ಆಗಿದೆ. ಈ ರಸ್ತೆಯಿಂದ ಮಂಡ್ಯದ ಸಾರ್ವಜನಿಕರಿಗೆ ಇಷ್ಟು ತೊಂದರೆಯಾಗುತ್ತದೆ ಎಂದು ಊಹಿಸಲು ಆಗುವುದಿಲ್ಲ. ಗುಣಮಟ್ಟದ ಕಾಮಗಾರಿ ನಡೆದೇ ಇಲ್ಲ, ಬಹಳಷ್ಟು ಕಳಪೆ ಕೆಲಸ ನಡೆದಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ನನಗೆ ಸಮಾಧಾನ ತಂದಿಲ್ಲ, ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ರಸ್ತೆ ನೋಡಲು ಅಸಹ್ಯವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಂಡವಪುರದಲ್ಲಿ ಮೂರು ದಿನಗಳ ಕಾಲ ಪುನೀತೋತ್ಸವ

Live Tv

Leave a Reply

Your email address will not be published. Required fields are marked *

Back to top button