ನವದೆಹಲಿ: ವಿಶ್ವಕಪ್ (World Cup) ಸೆಮಿಫೈನಲ್‍ಗೆ ಹೋಗಲು ಅವಕಾಶವಿರುವ ಐದು ತಂಡಗಳನ್ನು ಮಾಜಿ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ (Sourav Ganguly) ಹೆಸರಿಸಿದ್ದಾರೆ. ಇದು ಹೇಳಲು ತುಂಬಾ ಕಷ್ಟ ಎಂದು ಅವರು ಪ್ರತಿಕ್ರಿಸಿದ್ದಾರೆ.
ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ (Team India) ಸೆಮಿಫೈನಲ್‍ಗೆ ತೆರಳುವ ವಿಶ್ವಾಸವಿದೆ. ನ್ಯೂಜಿಲೆಂಡ್ ತಂಡವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಪಾಕಿಸ್ತಾನವನ್ನೂ ಈ ಸಾಲಿಗೆ ಸೇರಿಸುತ್ತೇನೆ. ಪಾಕಿಸ್ತಾನ ಅರ್ಹತೆ ಪಡೆದರೆ ಭಾರತ-ಪಾಕಿಸ್ತಾನ ಸೆಮಿಫೈನಲ್‍ನಲ್ಲಿ ಸೆಣಸಬಹುದು ಎಂದಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಟೂರ್ನಿ ಆಡಲು ಪಾಕ್ ತಂಡ ಭಾರತಕ್ಕೆ ಬರಲ್ಲ – ಮತ್ತೆ ಕ್ಯಾತೆ ತೆಗೆದ ಪಾಕ್ ಸಚಿವ
Advertisement
Advertisement
ಈ ವರ್ಷ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ನಡೆಯಲಿರುವ 13ನೇ ಆವೃತ್ತಿಯ ಕ್ರಿಕೆಟ್ ವಿಶ್ವಕಪ್‍ಗೆ ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ ತಂಡಗಳು ಅರ್ಹತೆ ಪಡೆದಿವೆ. ಈಗಾಗಲೇ ಅಂತಿಮ 10 ತಂಡಗಳ ಪಟ್ಟಿ ತಯಾರಾಗಿದೆ. ಇದೇ ಮೊದಲ ಬಾರಿಗೆ ಭಾರತ ಸಂಪೂರ್ಣವಾಗಿ ವಿಶ್ವಕಪ್ ಕ್ರಿಕೆಟ್ ಅತಿಥ್ಯ ವಹಿಸಿಕೊಂಡಿದೆ.
Advertisement
Advertisement
ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇದೇ ವೇಳೆ ಮುಂಬೈ ಮತ್ತು ಕೋಲ್ಕತ್ತಾ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಭಾರತ ಅಕ್ಟೋಬರ್ 15 ರಂದು ಲೀಗ್ ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ ಮತ್ತು ವಿಶ್ವಕಪ್‍ನಲ್ಲಿ ಇದು ಅತ್ಯಂತ ಆಕರ್ಷಕ ಪಂದ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ
Web Stories