ಬೆಂಗಳೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರ ಮೇಲೆ ನನಗೆ ಅಪಾರ ಗೌರವವಿದೆ. ನಾನು ಅವರ ವಿರುದ್ಧ ಒಂದೇ ಒಂದು ಪದವನ್ನೂ ಮಾತನಾಡಿಲ್ಲ ಅಂತಾ ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ.
ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಬಗ್ಗೆ ಮಿಮಿಕ್ರಿ ಮಾಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ನಟ ಜಗ್ಗೇಶ್, ಪರಿಷತ್ ಸದಸ್ಯ ಶರವಣಗೆ ಸಂದೇಶ ಕಳುಹಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಜೆಡಿಎಸ್ ಗೆ ಮತಹಾಕಿ ಎಂದು ದೇವೇಗೌಡರು ಕೇಳಿಕೊಂಡರೂ ಮಸಾಲೆ ಜಯರಾಮ್ ಮತಹಾಕಿ. ಕಾರಣ ಮಸಾಲೆ ಜಯರಾಮ್ ಕೂಡಾ ಒಕ್ಕಲಿಗರು ಅಂತಾ ಪಕ್ಷದ ಕಾರ್ಯಕರ್ತನಾಗಿ ಹೇಳಿದ್ದೇನೆ. ಆದ್ರೆ, ಒಂದೇ ಒಂದು ಎಚ್‍ಡಿ ದೇವೇಗೌಡರ ವಿರುದ್ಧದ ಹೇಳಿಕೆಯನ್ನ ನಾನು ನೀಡಿಲ್ಲ ಅಂತಾ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಯಾರ್ ಅಡ್ಡ ಬಂದ್ರೂ ಬಿಎಸ್‍ವೈ ಸಿಂಹಾಸನ ತಪ್ಪಿಸಲು ಆಗಲ್ಲ: ನಟ ಜಗ್ಗೇಶ್
1990 ರಿಂದಲೂ ನಾನು ಎಚ್‍ಡಿದೇವೇಗೌಡರ ಅಭಿಮಾನಿ. ಕುಮಾರಣ್ಣ ನಮ್ಮ ನಿರ್ಮಾಪಕರು ಅಂತಾ ಶರವಣಗೆ ವಾಟ್ಸಾಪ್‍ನಲ್ಲಿ ಸಂದೇಶ ಕಳುಹಿಸಿದ್ದಾರೆ. ಈ ಸಂಬಂಧ ಫೇಸ್‍ಬುಕ್‍ನಲ್ಲಿ ಹಾಕಿಕೊಂಡಿರೋ ಪರಿಷತ್ ಸದಸ್ಯ ಶರವಣ, ನಿಮ್ಮ ಪ್ರತಿಕ್ರಿಯೆಗೆ ಕೃತಜ್ಞತೆಗಳು ಅಂತಾ ತಿಳಿಸಿದ್ದಾರೆ.
https://www.youtube.com/watch?v=SNoiqIjPvUw