ತುಮಕೂರು: ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ನಡುವಿನ ಸಂಬಂಧ ಹಳಸಿದ್ಯಾ? ಹೌದು ಎನ್ನುತಿದೆ ಸಿಎಂ ಸಿದ್ದರಾಮಯ್ಯರ ಈ ಹೇಳಿಕೆ.
Advertisement
ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇಬ್ರಾಹಿಂ ವಿರುದ್ಧ ಹೇಳಿಕೆ ನೀಡಿದ್ದಾರೆ. ಇಬ್ರಾಹಿಂನನ್ನು ಪರಿಷತ್ ಸದಸ್ಯನಾಗಿ ಮಾಡಿದ್ದೇ ಹೆಚ್ಚು. ಇನ್ನೂ ಮಂತ್ರಿ ಸ್ಥಾನ ಕೊಡ್ತೀನಾ ಎಂದು ಹಗುರವಾಗಿ ಮಾತನಾಡಿದ್ದಾರೆ.
Advertisement
Advertisement
ಸ್ಥಳೀಯ ಪತ್ರಿಕೆಯೊಂದರಲ್ಲಿ ಇಬ್ರಾಹಿಂಗೆ ಮಂತ್ರಿಸ್ಥಾನ ಸಾಧ್ಯತೆ ಎಂದು ವರದಿ ಮಾಡಲಾಗಿತ್ತು. ಈ ವರದಿ ಓದಿದ ಸಿಎಂ, ಯಾವುದೇ ಕಾರಣಕ್ಕೆ ಇಬ್ರಾಹಿಂನನ್ನು ಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಏಕವಚನದಲ್ಲೆ ಮಾತನಾಡಿದ್ದಾರೆ.
Advertisement
ಸಿಎಂ ಸಿದ್ದರಾಮಯ್ಯರ ಈ ಮಾತಿಗೆ ಎದುರಿಗೆ ಕುಳಿತಿದ್ದ ಸಚಿವ ಜಯಚಂದ್ರ, ಶಾಸಕ ರಫಿಕ್ ಅಹಮದ್ ಸೇರಿದಂತೆ ಇತರೇ ಕಾಂಗ್ರೆಸ್ ಮುಖಂಡರು ಗೊಳ್ ಎಂದು ನಕ್ಕಿದ್ದಾರೆ.
ಮದುಮಗಳು ಚೆನ್ನಾಗಿ ಇದ್ರೆ ಗಂಡುಗಳು ಜಾಸ್ತಿ ಬರ್ತಾವೆ: ಸಿಎಂ ಇಬ್ರಾಹಿಂ ಈ ಮಾತು ಹೇಳಿದ್ಯಾಕೆ? https://t.co/TcpqXukgEx#Bengaluru #CMIbrahim #Congress pic.twitter.com/uQUYGEaUN1
— PublicTV (@publictvnews) August 19, 2017