– ನಾವು ಬಂಡಾಯಗಾರರಲ್ಲ : ರಾಜುಗೌಡ
– ಮಂತ್ರಿ ಸ್ಥಾನ ಸಿಗದಿದ್ದರೂ ಬಿಜೆಪಿ ಪರ ಕೆಲಸ
ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಮುಂಚೆ ಒಂದು ವಿದ್ಯಮಾನ. ಸಂಪುಟ ವಿಸ್ತರಣೆ ಆದ ನಂತರ ಮತ್ತೊಂದು ವಿದ್ಯಮಾನ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಕೊಡಲೇಬೇಕು ಅಂತ ಬೇಡಿಕೆ ಇಟ್ಟಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಂಪುಟ ವಿಸ್ತರಣೆ ಆದ ತಕ್ಷಣವೇ ಮಾತಿನ ವರಸೆಯೇ ಬದಲಾವಣೆ ಮಾಡಿದ್ದು, ನನಗೆ ಸಚಿವ ಸ್ಥಾನ ಬೇಡ. ನಾನು ಇನ್ಯಾವತ್ತು ಮಂತ್ರಿ ಸ್ಥಾನ ಕೇಳುವುದಿಲ್ಲ ಅಂತ ರಾಗ ಬದಲಿಸಿದ್ದಾರೆ.
Advertisement
ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮುಗಿದ ಬಳಿ ಮಾತನಾಡಿದ ರೇಣುಕಾಚಾರ್ಯ ನಾನು ಮಂತ್ರಿ ಸ್ಥಾನ ಕೇಳುವುದಿಲ್ಲ ಅಂತ ತಿಳಿಸಿದರು. ಸಂಪುಟ ವಿಸ್ತರಣೆ ವೇಳೆ ಮೂಲ ಬಿಜೆಪಿಯ ಪಟ್ಟಿಯಲ್ಲಿ ಸೋತ ಯೋಗೇಶ್ವರ್ ಹೆಸರು ಬಂದ ಕೂಡಲೇ ರೇಣುಕಾಚಾರ್ಯ ರೆಬಲ್ ಚಟುವಟಿಕೆ ಪ್ರಾರಂಭ ಮಾಡಿದ್ರು. ಯಾವುದೇ ಕಾರಣಕ್ಕೂ ಸೋತವರಿಗೆ ಮಂತ್ರಿ ಮಾಡಬೇಡಿ ಅಂತ ಬಹಿರಂಗವಾಗಿ ಯೋಗೇಶ್ವರ್ ವಿರುದ್ದ ಮಾತಾಡಿದ್ರು. ಯೋಗೇಶ್ವರ್ ಪರ ಮಾತಾಡಿದ್ದ ಡಿಸಿಎಂ ಅಶ್ವಥ್ ನಾರಾಯಣ ಕೂಡಾ ನಿಮ್ಮ ಸ್ಥಾನ ಬಿಟ್ಟುಕೊಡಿ ಅಂತ ನೇರವಾಗಿಯೇ ಹೇಳಿದ್ರು. ಈ ಎಲ್ಲ ಗೊಂದಲ ದಿಂದ ಬಿಜೆಪಿ ಹೈಕಮಾಂಡ್ ಮೂಲ ಶಾಸಕರ ಮಂತ್ರಿ ಪಟ್ಟಿಯನ್ನು ತಡೆಹಿಡಿದು ಕೇವಲ ವಲಸಿಗರಿಗೆ ಮಾತ್ರ ಇವತ್ತು ಮಂತ್ರಿ ಮಾಡಿತು. ಹೊಸ ಸಚಿವರ ಪ್ರಮಾಣ ವಚನ ಆದ ಕೂಡಲೇ ರೇಣುಕಾಚಾರ್ಯ ಯೂಟರ್ನ್ ಹೊಡೆದು ನಾನು ಪಕ್ಷದ ಶಿಸ್ತಿನ ಸಿಪಾಯಿ ಅಂತಿದ್ದಾರೆ.
Advertisement
" Hard work never brings fatigue. It brings satisfaction " pic.twitter.com/fqB6AMLwQs
— Office of MP Renukacharya (@MPROffice) February 5, 2020
Advertisement
ರೇಣುಕಾಚಾರ್ಯ ಅಂಡ್ ಟೀಂ ನ ಆಸೆ ಈಡೇರಿದ ಕೂಡಲೇ ಬಂಡಾಯದ ಚಟುವಟಿಕೆಗಳು ನಿಂತಂತೆ ಕಾಣುತ್ತಿದೆ. ಸ್ವತಃ ರೇಣುಕಾಚಾರ್ಯ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು. ನಾವು ಯಾವತ್ತು ಬಂಡಾಯ ಸಭೆ ಮಾಡಲೇ ಇಲ್ಲ. ನಮಗೆ ಯಾರು ಶತ್ರುಗಳು ಅಲ್ಲ ಅಂತ ಯೋಗೇಶ್ವರ್ ವಿಚಾರಕ್ಕೆ ಪರೋಕ್ಷ ಉತ್ತರ ಕೊಟ್ಟರು. ನಾವು ಪಕ್ಷ ಮತ್ತು ಸಿಎಂ ಹೇಳಿದಂತೆ ಕೇಳುತ್ತೇವೆ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
Advertisement
ಮಧ್ಯ ಕರ್ನಾಟಕ ಭಾಗಕ್ಕೆ ಮತ್ತೆ ಮಂತ್ರಿ ಸ್ಥಾನ ಕೇಳ್ತೀರಾ ಸರ್ ಅಂದ್ರೆ ಅದೆಲ್ಲ ಮುಗಿದು ಹೋದ ಅಧ್ಯಾಯ. ನಾನು ಇನ್ಯಾವತ್ತು ಮಂತ್ರಿ ಸ್ಥಾನ ಕೇಳೋದಿಲ್ಲ ಅಂತ ತಿಳಿಸಿದ್ರು. ಕೆಲಸ ಆದ ಮೇಲೆ ಎಲ್ಲರೂ ಹೀಗೆ. ಯೋಗೇಶ್ವರ್‍ಗೆ ಸ್ಥಾನ ತಪ್ಪಿಸುವ ರೇಣುಕಾಚಾರ್ಯ ಅಂಡ್ ಟೀಂ ಕೆಲಸ ಯಶಸ್ವಿಯಾದಂತೆ ಕಾಣ್ತಿದೆ. ಹೀಗಾಗಿ ರೆಬಲ್ ಟೀಂ ಕೂಡಾ ಕೂಲ್ ಆದಂತೆ ಕಾಣುತ್ತಿದೆ.
https://twitter.com/MPRBJP/status/1224730594208145408
ನಾವು ಬಂಡಾಯಗಾರರಲ್ಲ: ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ತಪ್ಪಲು ಪರೋಕ್ಷವಾಗಿ ಕಾರಣರಾಗಿದ್ದ ಶಾಸಕ ರಾಜುಗೌಡ ಮತ್ತೆ ನಾವು ಬಂಡಾಯಗಾರರಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ನಾವು ಬೇಡಿಕೆ ಇಟ್ಟಿದ್ದೇವೆ. ಅದನ್ನ ಯಾರು ಬಂಡಾಯ ಎನ್ನಬೇಡಿ ಅಂತ ಮನವಿ ಮಾಡಿದ್ದಾರೆ.
ರಾಜಭವನದಲ್ಲಿ ಮಾತನಾಡಿದ ಶಾಸಕ ರಾಜುಗೌಡ, ನನಗೆ ಸಚಿವ ಸ್ಥಾನ ಕೊಡಿ ಅಂತ ನಾನು ಯಾರಿಗೂ ಒತ್ತಡ ಹಾಕಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಕಾಶ ಕೊಡಿ ಅಂತ ಮಾತ್ರ ಕೇಳಿದ್ದು ಅಷ್ಟೇ. ಆದರೆ ನಾವೇ ಮೂಲ ಶಾಸಕರಿಗೆ ಸ್ಥಾನ ತಪ್ಪಿಸಿದೆವು ಅನ್ನೋದು ಸುಳ್ಳು ಅಂದರು. ಅಷ್ಟೇ ಅಲ್ಲ ನಾವು ಯಾರಿಗೂ ಸಚಿವ ಸ್ಥಾನ ಕೊಡಬೇಡಿ ಅಂತ ಹೇಳಿಲ್ಲ ಎನ್ನುವ ಮೂಲಕ ಯೋಗೇಶ್ವರ್ ಗೆ ಸ್ಥಾನ ತಪ್ಪಲು ನಾನು ಕಾರಣ ಅಲ್ಲ ಅಂದರು.
ಹೈಕಮಾಂಡ್ ನಿರ್ದೇಶನದಂತೆ ಸಂಪುಟ ವಿಸ್ತರಣೆ ಆಗಿದೆ. ಈಗ ಆಗಿರುವ 10 ಜನ ಮಂತ್ರಿಗಳು ಬಿಜೆಪಿಯವರು. ಈಗ ಕೊಡದೇ ಇದ್ದರು ಮುಂದೆ ವಿಸ್ತರಣೆ ಮಾಡಿದರೆ ಕಲ್ಯಾಣ ಕರ್ನಾಟಕಕ್ಕೆ ಸ್ಥಾನ ಕೊಡಲೇಬೇಕು ಅಂತ ಮತ್ತೆ ಒತ್ತಡ ಹಾಕಿದ್ರು. ಒಂದು ವೇಳೆ ಬಿಜೆಪಿ ಸ್ಥಾನ ಕೊಡಲಿಲ್ಲ ಅಂದ್ರೆ ಬಿಜೆಪಿ ಶಾಲು ಹಾಕಿಕೊಂಡು, ಬಿಜೆಪಿಗೆ ಜೈ ಎಂದು ಮೋದಿ ಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.