ಚಿಕ್ಕಬಳ್ಳಾಪುರ: ನಾನು 555 ಎಕರೆ ಮಂಜೂರು ಮಾಡಿಸಿರೋದು ಸತ್ಯ ಅಂತ ಶ್ರೀ ಭೋಗನಂದಿಶ್ವರ ದೇವಾಲಯಕ್ಕೆ ಹೋಗಿ ದೀಪ ಹಚ್ಚುತ್ತೇನೆ ಎಂದು ಮಾಜಿ ಸಚಿವ ಕೆ. ಸುಧಾಕರ್ (K Sudhakar) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 555 ಎಕರೆ ಮಂಜೂರು ಮಾಡಿಸಿ ಸುಳ್ಳು ಅಂತ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (MLA Pradeep Eshwar) ಬಂದು ದೀಪ ಹಚ್ಚಲಿ ಅಂತ ಸವಾಲು ಹಾಕಿದರು. ನಾನು ಜನರಿಗೆ ಸುಳ್ಳು ಹೇಳಿ ಮೋಸ ಮಾಡುವ ದುಸ್ಥಿತಗೆ ತಲುಪಿಲ್ಲ. ದೇವರ ಅನುಗ್ರಹ ಮಾಡಿದ್ದಾರೆ ಒಳ್ಳೆ ಕೆಲಸ ಮಾಡಿ ಅಂತ ತಿಳುವಳಿಕೆ ಕೊಡ್ತೇನೆ ಎಂದರು.
ಕ್ಷೇತ್ರದಲ್ಲಿ ವಸತಿ ಯೋಜನೆ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸುಳ್ಳು ಅಭಿಯಾನ ಆರಂಭ ಮಾಡಿದ್ದಾರೆ. ಸುಳ್ಳು ಪ್ರಚಾರದಿಂದ ಗೆದ್ದ ಮೇಲೆ ಅಭಿವೃದ್ಧಿ ಮೇಲೆ ಲಕ್ಷ್ಯ ಕೊಡ್ತಾರೆ ಅಂತ ಭಾವಿಸಿದ್ದೆ. ಆದರೆ ಆದ್ರೆ ಶಾಸಕ ಪ್ರದೀಪ್ ಈಶ್ವರ್ ಗೆ ಸುಳ್ಳೇ ಅವರ ಮನೆ ದೇವರಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಕಚೇರಿಗೆ ಶಾಸಕರ ಲೆಟರ್ ತಗೊಂಡು ಹೋದ್ರೆ 30 ಲಕ್ಷ ಕೇಳ್ತಾರೆ: ಹೆಚ್‍ಡಿಕೆ ಹೊಸ ಆರೋಪ
ಕ್ಷೇತ್ರದಲ್ಲಿ ನಿವೇಶನಗಳು ಆಗಿಯೇ ಇಲ್ಲ ಅನ್ನೋ ಹಾಗೆ ಬಡವರ ಆಸೆಗೆ ತಣ್ಣೀರು ಎರಚುವ ಕೆಲಸ ಮಾಡ್ತಿದ್ದಾರೆ. ಆದರೆ ನಾನು ಸುಳ್ಳಿನ ಯೋಜನೆ ತಂದಿಲ್ಲ. ಕಣ್ಣಿಗೆ ಕಾಣಿರುವ ಯೋಜನೆ ತಂದಿದ್ದೇನೆ. ರಾಜ್ಯದಲ್ಲೇ 20,000ಕ್ಕೂ ಹೆಚ್ಚು ನಿವೇಶನ ತಂದ ಏಕೈಕ ವ್ಯಕ್ತಿ ನಾನು. ಇದನ್ನು ತಿಳಿದುಕೊಳ್ಳಲಿ. ಎಲ್ಲದಕ್ಕೂ ಆದೇಶ ಪತ್ರಗಳಿವೆ ಎಂದು ಹೇಳಿದರು.
555 ಎಕರೆ ಜಮೀನು ಮಂಜೂರಾತಿ ಆಗಿದೆ. ನಾನೇ ಖುದ್ದು ಗ್ರಾಮ ಪಂಚಾಯತಿಗೆ ಭೇಟಿ ಮಾಡಿ ಫಲಾನುಭವಿಗಳ ಆಯ್ಕೆ ಮಾಡಿದ್ದೇನೆ. ಆಗ ಆಧಿಕಾರಿಗಳು ಏನು ಮಾಡುತ್ತಿದ್ರು. ಶಾಸಕ ಪ್ರದೀಪ್ ಈಶ್ವರ್ ಹಕ್ಕು ಪತ್ರ ಯಾವುದು ಮಂಜೂರಾತಿ ಪತ್ರ ಯಾವುದು ಅಂತಾನೇ ತಿಳಿದುಕೊಂಡಿಲ್ಲ. ಬೇಸಿಕ್ ಸೆನ್ಸ್ ಇಲ್ಲ ಸಿನಿಮಾ ಡೈಲಾಗ್ ಹೊಡೆದುಕೊಂಡ್ರೆ ರಾಜಕಾರಣ ನಡೆಯಲ್ಲ. ಜನ ಒಂದು ಸಲ ಯಾಮಾರಬಹುದು ಪದೇ ಪದೇ ಯಾಮಾರಲ್ಲ. ಈಗಲೇ ಜನರಿಗೆ ಬುದ್ಧಿ ಬರುತ್ತಿದೆ ಎಂದು ತಿಳಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]