ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ನಲ್ಲಿ ಭಾರೀ ಮೊತ್ತಕ್ಕೆ ಬಿಡ್ ಆಗಿರುವ ಕನ್ನಡತಿ ವೃಂದಾ ದಿನೇಶ್ (Vrinda Dinesh) ಅವರು ತಮ್ಮ ಹೆತ್ತವರಿಗೆ ಕನಸಿನ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ.
ಯುಪಿ ವಾರಿಯರ್ಸ್ (UP Warriorz) ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೃಂದಾ ಅವರು, ಬೆಂಗಳೂರಿನಲ್ಲಿರುವ ತನ್ನ ತಾಯಿಗೆ ಕರೆ ಮಾಡಿರುವುದಾಗಿ ತಿಳಿಸಿದ್ದಾರೆ. ಸುದ್ದಿ ಕೇಳಿ ಅಮ್ಮ ತುಂಬಾ ಸಂತೋಷಪಟ್ಟರು. ನಾನು ಅವರನ್ನು ಹೆಮ್ಮೆಪಡಿಸಲು ಬಯಸುತ್ತೇನೆ. ಹೀಗಾಗಿ ಅವರು ಕನಸು ಕಂಡಿದ್ದ ಕಾರನ್ನು ನೀಡುತ್ತೇನೆ. ಇದೇ ನನ್ನ ಮೊದಲ ಗುರಿ ಎಂದು ತಿಳಿಸಿದ್ದಾರೆ.
Advertisement
Advertisement
ದೇಶೀಯ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ 22 ವರ್ಷ ವೃಂದಾ ಇನ್ನೂ ಟೀಂ ಇಂಡಿಯಾವನ್ನು (Team India) ಪ್ರತಿನಿಧಿಸಿಲ್ಲ. ಹೀಗಿದ್ದರೂ ದೇಶೀಯ ಪಂದ್ಯಗಳಲ್ಲಿ ನೀಡಿದ ಅಮೋಘ ಪ್ರದರ್ಶನವನ್ನು ಗಮನಿಸಿ ಯುಪಿ ತಂಡ ವೃಂದಾ ಅವರನ್ನು ಖರೀದಿಸಿದೆ. ಈ ಮೂಲಕ ಟೀಂ ಇಂಡಿಯಾ ಪ್ರತಿನಿಧಿಸದೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಎರಡನೇ ಆಟಗಾರ್ತಿಯಾಗಿ ವೃಂದಾ ದಿನೇಶ್ ಹೊರಹೊಮ್ಮಿದ್ದಾರೆ.
Advertisement
Advertisement
ಹರಾಜಿನಲ್ಲಿ ಇವರ ಮೂಲ ಬೆಲೆ 10 ಲಕ್ಷ ರೂ. ಇತ್ತು. ಆದರೆ ಘಟಾನುಘಟಿ ಆಟಗಾರರ್ತಿಯರನ್ನು ಹಿಂದಿಕ್ಕಿ ಭಾರೀ ಮೊತ್ತಕ್ಕೆ ವೃಂದಾ ಈಗ ಮಾರಾಟವಾಗಿದ್ದಾರೆ. ಕಶ್ವೀ ಗೌತಮ್ ಮಹಿಳಾ ಪ್ರೀ ಮಿಯರ್ ಲೀಗ್ ಹರಾಜಿನಲ್ಲಿ ಗುಜರಾತ್ ಜೈಂಟ್ಸ್‌ಗೆ 2 ಕೋಟಿ ರೂ.ಗೆ ಬಿಡ್ ಆಗಿದ್ದಾರೆ.
ತಂಡದ ನಾಯಕಿ ಅಲಿಸಾ ಹೀಲಿಯೊಂದಿಗೆ ನಾನು ಬ್ಯಾಟಿಂಗ್ ಆರಂಭಿಸಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ಇದೇ ವೇಳೆ ವೃಂದಾ ಬಹಿರಂಗಪಡಿಸಿದರು.