ಬೆಂಗಳೂರು: ನನ್ನ ಹೆಸರನ್ನು ಎಲ್ಲಾ ಕಡೆ ತೆಗೆದುಕೊಂಡರೆ ತೆಗೆದುಕೊಳ್ಳಲಿ. ನಾನು ಜೆ.ಪಿ ನಡ್ಡಾ (JP Nadda) ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜೆ.ಪಿ.ನಡ್ಡಾಗಿಂತ ನಾನು ಸೆನ್ಸಿಬಲ್ ರಾಜಕಾರಣಿ. ನಾನು 36 ವರ್ಷ ಶಾಸಕ. ನಮ್ಮದು ರಾಷ್ಟ್ರೀಯ ಪಕ್ಷ. ಸಂವಿಧಾನ ಏನು? ಸಂವಿಧಾನ ಏನು ಹೇಳುತ್ತದೆ ಎಂಬ ಪರಿಜ್ಞಾನ ನನಗಿದೆ. ಬಿಜೆಪಿಯವರು ದಾರಿ ತಪ್ಪಿಸುತ್ತಿದ್ದಾರೆ. ಅವರ ಗ್ರಾಫ್ ಇಳಿಯುತ್ತಿದೆ ಎಂದರು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ; FIR ಆಗದೇ ತನಿಖೆಗೆ ಕೊಡಲು ಆಗಲ್ಲ: ಪರಮೇಶ್ವರ್
ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ನಾನು ಹೇಳಿಲ್ಲ. ಇದು ರಾಜಕೀಯ ಪಿತೂರಿ. ಬಿಜೆಪಿ ಅವರಿಗೆ ರಾಜಕೀಯ ಅಷ್ಟೇ. ಮುಸ್ಲಿಂ ಕೋಟಾ ಬಗ್ಗೆ ನ್ಯಾಯಾಲಯ ತೀರ್ಪುಗಳ ಬಗ್ಗೆ ಹೇಳಿದ್ದೇನೆ. ಸಂವಿಧಾನ ಬದಲಾವಣೆ ಬಗ್ಗೆ ಎಲ್ಲಿ ಮಾತನಾಡಿದ್ದೇನೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಲಾರಿ ಡಿಕ್ಕಿ – ತಂದೆ ಸ್ಥಳದಲ್ಲೇ ಸಾವು