ಚಿಕ್ಕಬಳ್ಳಾಪುರ: ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಜಸ್ಟ್ ವೇಟ್ ಎಂದು ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‍ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಖಡಕ್ ಎಚ್ಚರಿಕೆ ನೀಡಿದರು.
ಶುಕ್ರವಾರ ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ನಡೆದ ಪ್ರತಿಭಟನೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಬಳ್ಳಾರಿಗೆ ಹೋಲಿಸಲಾಗಿತ್ತು. ಈ ವೇಳೆ ಬಳ್ಳಾರಿಯ ರಿಪಬ್ಲಿಕ್‍ನಂತೆ ಚಿಕ್ಕಬಳ್ಳಾಪುರ ಕ್ಷೇತ್ರವೂ ಸಹ ಕುಸಿದು ಬೀಳಲಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಗ್ಗೆ ರಿಪಬ್ಲಿಕನ್ ಅನ್ನೋ ಪದ ಬಳಸಿ ಸಚಿವ ಸುಧಾಕರ್ ವಿರುದ್ಧ ಮಾಜಿ ಶಾಸಕ ಸುಧಾಕರ್ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ವಿಮಾನದಲ್ಲಿದ್ದ ಪ್ರಯಾಣಿಕರ ಜೀವ ಉಳಿಸಿದ ತೆಲಂಗಾಣ ರಾಜ್ಯಪಾಲ
ಎಂ.ಸಿ.ಸುಧಾಕರ್ ವಾಗ್ದಾಳಿಗೆ ಕಿಡಿಕಾರಿರುವ ಸಚಿವ ಸುಧಾಕರ್ ಅವರು, ಚಿಂತಾಮಣಿಯಲ್ಲಿ ಮೂರು ತಲೆಮಾರಿನ ರಿಪಬ್ಲಿಕ್ ಯಾರು ಮಾಡಿದ್ದಾರೆ? 10 ವರ್ಷದಿಂದ ನಿಮ್ಮನ್ನ ಜನ ಮನೆಯಲ್ಲಿ ಕೂರಿಸಿದ್ದಾರೆ. ಈಗಲಾದ್ರೂ ಸ್ವಲ್ಪ ಬುದ್ಧಿ ಕಲಿತುಕೊಳ್ಳಿ. ಇದೇ ಅಹಂಕಾರ ಮುಂದುವರಿದ್ರೆ ಒಳ್ಳೆಯದಲ್ಲ. ಇಷ್ಟು ದಿನ ನಾನು ಎಲ್ಲಾದ್ರೂ ಹೋಗಲಿ ಅಂತ ಸುಮ್ಮನೆ ಬಿಟ್ಟಿದ್ದೆ ಎಂದು ಆಕ್ರೋಶ ಹೊರಹಾಕಿದರು.
ಎಲ್ಲ ಕೇಸುಗಳಲ್ಲಿ ಸಿಕ್ಕಿ ಹಾಕಿಕೊಂಡು ಇಷ್ಟು ವರ್ಷ ಸುಮ್ಮನೆ ಇದ್ರು. ದೇವಸ್ಥಾನ ಬಿಟ್ಟಿಲ್ಲ, ಸರ್ಕಾರಿ ಆಸ್ತಿ ಬಿಟ್ಟಿಲ್ಲ. ಸರ್ಕಾರಿ ಆಸ್ತಿಗಳಲ್ಲಿ ಸೈಟ್ ಮಾಡಿ ಮಾರಾಟ ಮಾಡಿದ್ದೀರಿ. ನಿಮ್ಮ ಹತ್ರ ನಾನು ನೀತಿ ಪಾಠ ಕೇಳಬೇಕಾ? ಯಾವ ಮುಖ ಇಟ್ಕೊಂಡು ನನ್ನ ಬಗ್ಗೆ ಮಾತಾಡ್ತೀರಾ? ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಒಳ್ಳೆಯದಾಗಬೇಕೆಂದ್ರೆ ಜನ 2023ರಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಬಯಸುತ್ತಿದ್ದಾರೆ: ಜಮೀರ್
ನಾನು ಆಗಲೀ, ನನ್ನ ಕುಟುಂಬ ಆಗಲೀ ಸರ್ಕಾರಿ ಆಸ್ತಿಯನ್ನ 1 ಇಂಚು ಮಾಡಿಕೊಂಡಿಲ್ಲ. ಮಾಡಿಕೊಂಡಿದ್ರೆ ತೋರಿಸಿ ಅಂತ ಸವಾಲು ಹಾಕಿದ್ರು. ಹೀಗಾಗಿ ನಿಮ್ಮದೆಲ್ಲಾ ಬಯಲಿಗೆ ಎಳೆಯುತ್ತೇನೆ ಕಾಯುತ್ತ ಇರಿ ಎಂದು ವಾರ್ನಿಂಗ್ ಕೊಟ್ಟರು.